1000 ರೂ.ಗಿಂತ ಕಡಿಮೆಗೆ ಸಿಗುತ್ತೆ ಕೊರೋನಾ ಔಷಧ..! ಕೊನೆಯ ಪ್ರಯೋಗವಷ್ಟೇ ಬಾಕಿ

By Suvarna News  |  First Published Jul 23, 2020, 4:06 PM IST

ಆಕ್ಸ್‌ಫರ್ಡ್ ಅಸ್ಟ್ರಾ ಝೆನೇಕಾ ಔಷಧ (ಕೊವಿಶೀಲ್ಡ್) ದುರ್ಬಲರಿಗೂ, ಅತ್ಯಂತ ಕಡೆಯ ವ್ಯಕ್ತಿಗೂ ಲಭ್ಯವಾಗಿಸಬೇಕಾಗಿದೆ. ಆರೋಗ್ಯ ಮೂಲಸೌಕರ್ಯ, ಆರೋಗ್ಯ ನಿಯಮಗಳು, ಅಗತ್ಯ ಪ್ರಯೋಗಗಳು ಮತ್ತು ಪರೀಕ್ಷೆಗಳನ್ನು ಅನುಸರಿಸುವುದರಿಂದ ಇದು ಸಾಧ್ಯವಿದೆ ಎಂದು ಸೇರಂ ಸಂಸ್ಥೆಯ ಸಿಇಒ ಅದರ್ಪೂನವಲ್ಲ ತಿಳಿಸಿದ್ದಾರೆ.


ದೆಹಲಿ(ಜು.23): ಆಕ್ಸ್‌ಫರ್ಡ್ ಅಸ್ಟ್ರಾ ಝೆನೇಕಾ ಔಷಧ (ಕೊವಿಶೀಲ್ಡ್) ದುರ್ಬಲರಿಗೂ, ಅತ್ಯಂತ ಕಡೆಯ ವ್ಯಕ್ತಿಗೂ ಲಭ್ಯವಾಗಿಸಬೇಕಾಗಿದೆ. ಆರೋಗ್ಯ ಮೂಲಸೌಕರ್ಯ, ಆರೋಗ್ಯ ನಿಯಮಗಳು, ಅಗತ್ಯ ಪ್ರಯೋಗಗಳು ಮತ್ತು ಪರೀಕ್ಷೆಗಳನ್ನು ಅನುಸರಿಸುವುದರಿಂದ ಇದು ಸಾಧ್ಯವಿದೆ ಎಂದು ಸೇರಂ ಸಂಸ್ಥೆಯ ಸಿಇಒ ಅದರ್ಪೂನವಲ್ಲ ತಿಳಿಸಿದ್ದಾರೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಹಾಗೂ ಅಸ್ಟ್ರಾ ಝೆನೇಕಾ ಕೊರೋನಾ ಔಷಧ ಕಂಡುಹಿಡಿಯಲು ಸಾಧ್ಯವಿದೆ ಎಂಬ ಸುದ್ದಿ ಬಂದಿತ್ತು. ಸೇರಂ ಕಂಪನಿಯೂ ಅಸ್ಟ್ರಾ ಝೆನೇಕಾ ಕಂಪನಿಯ ಔಷಧ ತಯಾರಿಕಾ ಪಾಲುದಾರಿಕೆಯನ್ನು ಹೊಂದಿದೆ.

Tap to resize

Latest Videos

ಆಗಸ್ಟ್‌ ಅಂತ್ಯಕ್ಕೆ ಭಾರತದಲ್ಲಿ ಆಕ್ಸ್‌ಫರ್ಡ್‌ ಲಸಿಕೆ ಪ್ರಯೋಗ!

ಔಷಧ ಸಂಶೋಧನೆ ಪ್ರಯೋಗಗಳ ಹಂತಗಳ ಬಗ್ಗೆ ಮಾತನಾಡಿದ  ಪೂನವಲ್ಲ, ಔಷಧದ ಅಂದಾಜು ವೆಚ್ಚ, ಔಷಧದ ಬಗ್ಗೆ ಸೇರಂ ಕಂಪನಿಯ ಯೋಚನೆಗಳನ್ನೂ ತಿಳಿಸಿದ್ದಾರೆ.

ಈಗ ನಡೆಯುತ್ತಿರುವ ಕೊರೋನಾ ಲಸಿಕೆ ಸಂಶೋಧನೆಗಳಲ್ಲಿ ಆಕ್ಸ್‌ಫರ್ಡ್ ಅಸ್ಟ್ರಾ ಝೆನೇಕಾ ಔಷಧ ಮಾತ್ರ ಘನಾತ್ಮಕ ಪ್ರತಿಕ್ರಿಯೆ ಕೊಟ್ಟಿದೆ. ಹಾಗೆಯೇ ಕೊನೆಯ ಹಂತ ಪ್ರಯೋಗವಷ್ಟೇ ಬಾಕಿ ಇದೆ ಎಂದಿದ್ದಾರೆ.

ರೋಗ ನಿರೋಧಕ ಶಕ್ತಿ ಹೆಚ್ಚಳ, ಆಕ್ಸ್‌ಫರ್ಡ್‌ ಲಸಿಕೆ ಅಶಾಕಿರಣ!

ಈ ಔಷಧವನ್ನು ಕೊವಿಶೀಲ್ಡ್ ಎಂದು ಬ್ರಾಂಡ್ ಮಾಡಲಾಗಿದೆ. ಇದೊಂದು ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಯಾಗಿದೆ. ನಿರ್ಬಂಧಗಳ ಮೇಲಿನ ಅನುಮತಿ ಸಿಕ್ಕಿದಲ್ಲಿ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಲಾಗುತ್ತದೆ. ಔಷಧದ ಸಾಮಧ್ಯವನ್ನು ಆಧಿರಿಸಿ ಈ ವರ್ಷದ ಕೊನೆಗೆ ಈ ಔಷಧ ಲಾಂಚ್ ಮಾಡಲು ನಿರ್ಧರಿಸಿದ್ದೇವೆ ಎಂದಿದ್ದಾರೆ. ಮುಂದಿನ ವರ್ಷ ಔಷಧ ಜನರಿಗೆ ಲಭ್ಯವಾಗಲಿದೆ ಎಂದಿದ್ದಾರೆ.

ರಷ್ಯಾದಿಂದ ಕೊರೋನಾಗೆ ಲಸಿಕೆ: ಮುಂದಿನ ತಿಂಗಳೇ ಜನ ಬಳಕೆಗೆ ಲಭ್ಯ!

ಅಸ್ಟ್ರಾ ಝೆನೇಕಾದ ಜೊತೆಗಿನ ಒಪ್ಪಂದದ ಪ್ರಕಾರ ಭಾರತ ಮತ್ತು ಉಳಿದ ಮಧ್ಯಮ ಆದಾಯ ರಾಷ್ಟ್ರಗಳಿಗಾಗಿ 1 ಬಿಲಿಯನ್‌ನಷ್ಟು ಡೋಸ್‌ಗಳನ್ನು ಉತ್ಪಾದಿಸಲಾಗುತ್ತದೆ.  ಇದರ ಬೆಲೆಯ ಬಗ್ಗೆ ಈಗಲೇ ಹೇಳುವುದು ಸಾಧ್ಯವಿಲ್ಲ, ಆದರೂ ಆರಂಭದಲ್ಲಿ ಔಷಧದ ಬೆಲೆಯನ್ನು 1000 ರೂಪಾಯಿಗಿಂತ ಕಡಿಮೆ ಇರಿಸಲಾಗುತ್ತದೆ ಎಂದಿದ್ದಾರೆ.

click me!