ಲಾಕ್‌ಡೌನ್‌ನಲ್ಲಿ ಸಿಕ್ತು ಇಂಟರ್‌ನೆಟ್: 10 ವರ್ಷದ ನಂತ್ರ ಪೋಷಕರ ಸೇರಿದ ಬಾಲಕ

By Suvarna NewsFirst Published Jul 23, 2020, 3:32 PM IST
Highlights

ಕೊರೋನಾ ವೈರಸ್ ಸಂದರ್ಭ ಲಾಕ್‌ಡೌನ್‌ನಿಂದ ಜನ ಕಷ್ಟಪಡುತ್ತಿದ್ದಾರೆ. ಇನ್ನೂ ಕೆಲವೊಂದು ಘಟನೆಗಳಲ್ಲಿ ಜನರಿಗೆ ಒಳಿತಾಗುತ್ತಿದೆ. ಇಂತಹುದೇ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಲಕ್ನೋ(ಜು.23): ಕೊರೋನಾ ವೈರಸ್ ಸಂದರ್ಭ ಲಾಕ್‌ಡೌನ್‌ನಿಂದ ಜನ ಕಷ್ಟಪಡುತ್ತಿದ್ದಾರೆ. ಇನ್ನೂ ಕೆಲವೊಂದು ಘಟನೆಗಳಲ್ಲಿ ಜನರಿಗೆ ಒಳಿತಾಗುತ್ತಿದೆ. ಇಂತಹುದೇ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಕೊರೋನಾ ವೈರಸ್‌ ಕಾಟದಿಂದ ಶೈಕ್ಷಣಿಕ ವರ್ಷಕ್ಕೇ ತೊಂದರೆಯಾಗಿದೆ. ಈ ಸಂದರ್ಭ ಹಲವು ರಾಜ್ಯಗಳಲ್ಲಿ ಆನ್‌ಲೈನ್ ಶಿಕ್ಷಣವನ್ನೂ ಜಾರಿ ಮಾಡಲಾಗಿದೆ. ಆನ್‌ಲೈನ್ ನೆಪದಲ್ಲಿ ಉತ್ತರ ಪ್ರದೇಶದ ಬಾಲಕ 10 ವರ್ಷದ ನಂತರ ತನ್ನ ಪೋಷಕರ ಜೊತೆ ಒಂದಾಗಿದ್ದಾನೆ.

'ಸಂಬಳವಿಲ್ಲದೇ KSRTC ಸಿಬ್ಬಂದಿ ಪರದಾಟ'

2010ರಲ್ಲಿ ಪಂಜಾಬ್‌ನ ಗ್ರಾಮವೊಂದರಲ್ಲಿ ಪುಟ್ಟ ಬಾಲಕ ಅಬ್ದುಲ್ ಲತೀಫ್ ಅಳುತ್ತಾ ಇದ್ದ. ಇದೇ ಬಾಲಕ ಲಾಕ್‌ಡೌನ್ ಸಂದರ್ಭ ತನ್ನ ಮನೆ, ಕುಟುಂಬಸ್ಥರನ್ನು ಸೇರಿಕೊಂಡಿದ್ದಾನೆ.

ಪಟಿಯಾಲದ ಶಾಲೆಯಲ್ಲಿ ಲಾಕ್‌ಡೌನ್ ನಂತರ ವಿದ್ಯಾರ್ಥಿಗಳಿಗೆ ಇಂಟರ್‌ನೆಟ್ ವ್ಯವಸ್ಥೆ ಒದಗಿಸಲಾಗಿತ್ತು. ಈ ಇಂಟರ್‌ನೆಟ್‌ನಿಂದಲೇ ಬಾಲಕ ಪೋಷಕರನ್ನು ಸೇರುವುದು ಸಾಧ್ಯವಾಗಿದೆ.

ಸೈಕಲ್‌ನಲ್ಲಿ ಚಹಾ ಮಾರಿ ಬಡವರ ಹೊಟ್ಟೆ ತುಂಬಿಸೋ ತಮಿಳರಸನ್..!

ಬಾಲಕ ಫೇಸ್‌ಬುಕ್‌ನಲ್ಲಿ ತನಗೆ ನೆನಪಿರುವ ಬಾಲ್ಯದ ಗೆಳೆಯನೊಬ್ಬನ ಹೆಸರನ್ನು ಹುಡುಕಿದ್ದಾನೆ. ಈ ಮೂಲಕ ತನ್ನ ಊರು, ಕುಟುಂಬಸ್ಥರ ಮಾಹಿತಿಯನ್ನೂ ಪಡೆದಿದ್ದಾನೆ. ಅಂತೂ ಶಾಲೆ ಒದಗಿಸಿದ  ಇಂಟರ್‌ನೆಟ್ 10 ವರ್ಷದ ನಂತರ ಬಾಲಕನಿಗೇ ಆತನ ಕುಟುಂವನ್ನೇ ಮರಳಿಸಿದೆ

click me!