ಬಯಲಾಯ್ತು ಕಾಂಗ್ರೆಸ್ ಬಂಡವಾಳ, ಅದಾನಿ ಜೊತೆ ತೆಲಂಗಾಣ 12,400 ಕೋಟಿ ರೂ ಒಪ್ಪಂದ!

By Suvarna News  |  First Published Jan 17, 2024, 7:45 PM IST

ನರೇಂದ್ರ ಮೋದಿಯವರ ಆತ್ಮ ಅದಾನಿಯವರಲ್ಲಿದೆ, ರಾಜ ಎಲ್ಲೋ ಇದ್ದಾನೆ.. ಅಧಿಕಾರ ಅದಾನಿ ಬಳಿ ಇದೆ, ಬಡವರ ಹಣ ಅದಾನಿ ಕೈಗೆ ನೀಡಿದ್ದಾರೆ.. ಇದು ರಾಹುಲ್ ಗಾಂಧಿ ಬಿಜೆಪಿ ಸರ್ಕಾರ, ಮೋದಿ ಹಾಗೂ ಅದಾನಿ ವಿರುದ್ಧ ಸಂಸತ್ತಿನಿಂದ ಹಿಡಿದು ಇದೀಗ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆವರೆಗೂ ಗುಡುಗಿದ ಪರಿ. ಆದರೆ ಅದಾನಿ ವಿಚಾರದಲ್ಲಿ ಕಾಂಗ್ರೆಸ್ ಬಂಡವಾಳ ಬಯಲಾಗಿದೆ. 


ನವದೆಹಲಿ(ಜ.17) ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಬಿಜೆಪಿ ಸರ್ಕಾರ ಅದಾನಿ ಕೈಯಲ್ಲಿದೆ. ಅದಾನಿಗೆ ನೆರವು ನೀಡುತ್ತಾರೆ. ಅದಾನಿ ವಿರುದ್ಧ ಮಾತಾಡಿದ್ರೆ ನಮ್ಮ ವಿರುದ್ಧ ಇಂಟೆಲಿಜೆನ್ಸ್ ಏಜೆನ್ಸಿ, ಸಿಬಿಐಗಳನ್ನು ನಮ್ಮ ವಿರುದ್ಧ ಬಳಕೆ ಮಾಡುತ್ತಾರೆ. ಬಡವರ ದುಡ್ಡನ್ನು ಮೋದಿ ಅದಾನಿ ಕೈಗೆ ನೀಡಿದ್ದಾರೆ ಎಂದೆಲ್ಲಾ ರಾಹುಲ್ ಗಾಂಧಿ ಭಾರಿ ಟೀಕೆ ಮಾಡಿದ್ದಾರೆ. ಅದಾನಿ ವಿಚಾರವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಾರೆ. ಅದಾನಿ ಜೊತೆಗಿನ ಮೋದಿ ಫೋಟೋಗಳನ್ನು ಪ್ರದರ್ಶಿಸಿದ್ದಾರೆ. ಆದರೆ ಕಾಂಗ್ರೆಸ್, ರಾಹುಲ್ ಗಾಂಧಿಯ ಈ ಆರೋಪಗಳು ಕೇವಲ ರಾಜಕೀಯ ದಾಳ ಅನ್ನೋದು ಬಯಲಾಗಿದೆ. ಕಾರಣ ಇದೇ ಅದಾನಿ ಜೊತೆ ತೆಲಂಗಾಣ ಕಾಂಗ್ರೆಸ್ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಅದಾನಿ ಗ್ರೂಪ್ ಇದೀಗ ತೆಲಂಗಾಣದಲ್ಲಿ 12,400 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ. 

ಒಂದು ಕಡೆ ಅದಾನಿಯನ್ನು ಟೀಕಿಸುವ ಕಾಂಗ್ರೆಸ್ ಹಾಗೂ ಇಂಡಿಯಾ ವಿಪಕ್ಷಗಳು ಮತ್ತೊಂದೆಡೆ ಅದೆ ಅದಾನಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಅದಾನಿ ವಿಚಾರದಲ್ಲಿ ಬಿಜೆಪಿ, ಪ್ರಧಾನಿ ಮೋದಿಯನ್ನು ಖಂಡತುಂಡವಾಗಿ ವಿರೋಧಿಸುವ ರಾಹುಲ್ ಗಾಂಧಿ, ತೆಲಂಗಾಣ ಸೇರಿದಂತೆ ಇತರ ಕಾಂಗ್ರೆಸ್ ಆಡಳಿತ ರಾಜ್ಯಗಳಲ್ಲಿನ ಒಪ್ಪಂದ , ಹೂಡಿಕೆ ಕುರಿತು ಮೌನ ವಹಿಸಿದ್ದಾರೆ.

Tap to resize

Latest Videos

 

Gautam Adani: ಹೆಚ್ಚುತ್ತಲೇ ಇದೆ ಒಟ್ಟು ಆಸ್ತಿ ಮೌಲ್ಯ..! ಅಂಬಾನಿಯನ್ನೇ ಓವರ್ಟೆಕ್ ಮಾಡಿದ ಅದಾನಿ..!

ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ಅದಾನಿ ಗ್ರೂಪ್ ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಈ ಪೈಕಿ  ಗ್ರೀನ್ ಎನರ್ಜಿ ಸೆಕ್ಟರ್‌ನಲ್ಲಿ 5 ಸಾವಿರ ಕೋಟಿ, ಡೇಟಾ ಸೆಂಟರ್ ಕ್ಷೇತ್ರದಲ್ಲಿ 5 ಸಾವಿರ ಕೋಟಿ, ಅಂಬುಜಾ ಸಿಮೆಂಟ್ಸ್ ಕ್ಷೇತ್ರದಲ್ಲಿ 1,400 ಕೋಟಿ, ಅದಾನಿ ಡಿಫೆನ್ಸ್ ಸಿಸ್ಟಮ್ ಅಡಿಯಲ್ಲಿ 1 ಸಾವಿರ ಕೋಟಿ ಸೇರಿದಂತೆ ಒಟ್ಟು 12,400 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ.  

ಈ ಹೂಡಿಕೆ ಬೆನ್ನಲ್ಲೇ ಕಾಂಗ್ರೆಸ್ ಮುಖಭಂಗ ಎದುರಿಸಿದೆ. ಅದಾನಿ ಅಕ್ರಮದ ಕುರಿತು ಘಂಟಾಘೋಷವಾಗಿ ಭಾಷಣ ಮಾಡುವ ರಾಹುಲ್ ಗಾಂಧಿ, ಕೇವಲ ರಾಜಕೀಯ ಕಾರಣಕ್ಕಾಗಿ ಮೋದಿ ವರ್ಚಸ್ಸಿಗೆ ಧಕ್ಕೆ ತರಲು ಅದಾನಿ ಹೆಸರು ಬಳಸಿಕೊಂಡಿದ್ದಾರೆ ಅನ್ನೋ ಆರೋಪ ಬಲವಾಗುತ್ತಿದೆ. ತೆಲಂಗಾಣ ಮಾತ್ರವಲ್ಲ ಇಂಡಿಯಾ ಒಕ್ಕೂಟದ ಆಡಳಿತವಿರುವ ರಾಜ್ಯಗಳಲ್ಲಿ ಅದಾನಿ ದುಪ್ಪಟ್ಟು ಹೂಡಿಕೆ ಮಾಡಿದ್ದಾರೆ.

ತೆಲಂಗಾಣದಲ್ಲಿ ಹೂಡಿಕೆ ಕುರಿತು ಅದಾನಿ ಗ್ರೂಪ್‌ ಜೊತೆ ಸಿಎಂ ರೇವಂತ್‌ ರೆಡ್ಡಿ ಮಾತುಕತೆ!

I.N.D.I.A ಕೂಟದ ರಾಜ್ಯಗಳಲ್ಲಿ ಅದಾನಿ ಹೂಡಿಕೆ..!
ತಮಿಳುನಾಡು    ;42,700 ಕೋಟಿ ಒಪ್ಪಂದ
ಕೇರಳ ;20 ಸಾವಿರ ಕೋಟಿ ಒಪ್ಪಂದ
ಪಶ್ಚಿಮ ಬಂಗಾಳ ;35 ಸಾವಿರ ಕೋಟಿ ಒಪ್ಪಂದ
ಜಾರ್ಖಂಡ್ ;20 ಸಾವಿರ ಕೋಟಿ ಒಪ್ಪಂದ
ಬಿಹಾರ ;9,500 ಕೋಟಿ ಒಪ್ಪಂದ
ರಾಜಸ್ಥಾನ(ಕಾಂಗ್ರೆಸ್ ಸರ್ಕಾರವಿದ್ದಾಗ)    ;65 ಸಾವಿರ ಕೋಟಿ ಒಪ್ಪಂದ    

click me!