ಇದೆಂಥಾ ಅಮಾನವೀಯ ಘಟನೆ ನೋಡಿ ಹೈವೇಯಲ್ಲಿ ಬಿದ್ದಿದ್ದ ಮೃತದೇಹವನ್ನು ಕನಿಷ್ಠ ಪಕ್ಕಕ್ಕೂ ಸರಿಸದೇ ಅದರ ಮೇಲೆಯೇ ರಾತ್ರಿಯಿಡೀ ವಾಹನಗಳು ಓಡಾಡಿವೆ. ಪರಿಣಾಮ ಮೃತದೇಹ ಗುರುತು ಸಿಗುವುದು ಬಿಡಿ ಕೈಗೂ ಸಿಗದಂತಾಗಿದೆ.
ಲಕ್ನೋ: ಎಕ್ಸ್‌ಪ್ರೆಸ್ ಹೈವೇಯಲ್ಲಿ ರಾತ್ರಿ ಅಪಘಾತ ನಡೆದು ಮೃತದೇಹವೊಂದು ರಸ್ತೆ ಮೇಲೆ ಬಿದ್ದಿದ್ದು, ಅದರ ಮೇಲೆ ಒಂದಾದ ಮೇಲೊಂದರಂತೆ ವಾಹನಗಳು ಚಲಿಸಿದ ಪರಿಣಾಮ ಮೃತದೇಹ ಪ್ಲಾಸ್ಟಿಕ್ ಶೀಟ್‌ನಂತೆ ಡಾಮರ್ ರಸ್ತೆಗೆ ಅಂಟಿಹೋಗಿ ಸ್ವಲ್ಪವೂ ಗುರುತು ಸಿಗದಂತಾಗಿದೆ. ದುರಂತದಲ್ಲಿ ಮೃತನಾದ ವ್ಯಕ್ತಿಯ ಪತ್ತೆಗೆ ಪೊಲೀಸರು ಸಲಾಕೆಯನ್ನು ತಂದು ರಸ್ತೆಗೆ ಅಂಟಿದ್ದ ದೇಹವನ್ನು ಕೆರೆದು ತೆಗೆದು ಕಸ ಎತ್ತುವ ಮೊರದಲ್ಲಿ ತೆಗೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಇದೆಂಥಾ ಅಮಾನವೀಯ ಘಟನೆ ನೋಡಿ ಹೈವೇಯಲ್ಲಿ ಬಿದ್ದಿದ್ದ ಮೃತದೇಹವನ್ನು ಕನಿಷ್ಠ ಪಕ್ಕಕ್ಕೂ ಸರಿಸದೇ ಅದರ ಮೇಲೆಯೇ ರಾತ್ರಿಯಿಡೀ ವಾಹನಗಳು ಓಡಾಡಿವೆ. ಪರಿಣಾಮ ಮೃತೇಹ ಗುರುತು ಸಿಗುವುದು ಬಿಡಿ ಕೈಗೂ ಸಿಗದಂತಾಗಿದೆ. ವಾಹನಗಳಿಗೆ ಸಿಲುಕಿ ಬೆಕ್ಕೋ ನಾಯೋ ಅಥವಾ ಇನ್ಯಾವುದು ಪ್ರಾಣಿಗಳು ಸತ್ತಾಗ ಮಾನವೀಯತೆ ಮರೆತ ಜನ ಆ ಪ್ರಾಣಿಯ ಕಳೆಬರವನ್ನು ಪಕ್ಕಕ್ಕೂ ಸರಿಸದೇ ಅದರ ಮೇಲೆಯೇ ಗಾಡಿ ಓಡಿಸಿ ಅದನ್ನು ರಸ್ತೆಗಂಟಿಸಿದ ಘಟನೆಗಳನ್ನು ನೀವು ಈ ಹಿಂದೆ ನೋಡಿರಬಹುದು. ಆದರೆ ಈಗ ಜನ ಮನುಷ್ಯನ ಕಳೆಬರಹವನ್ನು ಇದೇ ಪರಿಸ್ಥಿತಿಗೆ ತಂದಿದ್ದಾರೆ. ಉತ್ತರ ಪ್ರದೇಶದ ಯಮುನಾ ಆಗ್ರಾದಲ್ಲಿ ಹಾದು ಹೋಗುವ ಯಮುನಾ ಎಕ್ಸ್‌ಪ್ರೆಸ ಹೈವೇಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ.
ಮೃತ ವ್ಯಕ್ತಿಯ ಪತ್ತೆಗಾಗಿ ಘಟನೆ ನಡೆದ ಸ್ಥಳದಲ್ಲಿ ಹುಡುಕಾಡಿದ ಪೊಲೀಸರಿಗೆ ಇಡೀಯಾಗಿ ಸಿಕ್ಕಿದ್ದು ಕೇವಲ ಒಂದು ಬೆರಳು ಮಾತ್ರ, ಮತ್ತೆಲ್ಲವೂ ವಾಹನಗಳ ಚಕ್ರದಡಿಗೆ ಸಿಲುಕಿ ನಜ್ಜುಗುಜ್ಜಾಗಿದ್ದು, ಪೊಲೀಸರು 500 ಮೀಟರ್ ಸುತ್ತ ಸಲಾಕೆ ಬಳಸಿ ಡಾಮರ್‌ಗೆ ಅಂಟಿದ್ದ ಮನುಷ್ಯನ ಕಳೆಬರವನ್ನು ಕಿತ್ತು ತೆಗೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಈ ದುರಂತ ನಡೆದ ಸ್ಥಳದಲ್ಲಿನ ದೃಶ್ಯಾವವಳಿಯಲ್ಲಿ ಮೃತ ವ್ಯಕ್ತಿಯ ಶೂ ಕೂಡ ಪತ್ತೆಯಾಗಿದೆ. ಇನ್ನು ಇಡೀಯಾಗಿ ಸಿಕ್ಕ ಒಂದೇ ಒಂದು ಬೆರಳಿನಿಂದ ಮೃತನ ಗುರುತು ಮಾಡುವ ನಿರೀಕ್ಷೆಯಲ್ಲಿ ಪೊಲೀಸರಿದ್ದಾರೆ.
ಎಕ್ಸ್‌ಪ್ರೆಸ್ ವೇ ಆಯ್ತು, ಇದೀಗ ಬೆಂಗಳೂರು, ಮೈಸೂರು ನಡುವೆ 4 ಲೇನ್ ರೈಲ್ವೆ ಮಾರ್ಗಕ್ಕೆ ಸಮೀಕ್ಷೆ!
ಎಷ್ಟು ಹೊತ್ತಿನಿಂದ ವ್ಯಕ್ತಿ ಶವ ರಸ್ತೆ ಮೇಲೆ ಇತ್ತು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ, ಅಲ್ಲದೇ ವಾಹನಗಳು ಶವವನ್ನು ಪಕ್ಕಕ್ಕೆ ಸರಿಸದೇ ಏಕೆ ಹೀಗೆ ಸಾಗಿ ಹೋದವು ಎಂಬುದೂ ಗೊತ್ತಿಲ್ಲ, ಬಹುಶಃ ಉತ್ತರ ಭಾರತದಲ್ಲಿ ದಟ್ಟವಾಗಿ ಆವರಿಸಿರುವ ಮಂಜಿನಿಂದಾಗಿ ವಾಹನ ಸವಾರರಿಗೆ ರಸ್ತೆಗಳು ಸರಿಯಾಗಿ ಕಾಣಿಸದೇ ಹೋಗಿರುವುದೇ ಈ ದುರಂತಕ್ಕೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಇದರ ಜೊತೆಗೆ ಈ ಎಕ್ಸ್‌ಪ್ರೆಸ್ ಹೈವೇಯಲ್ಲಿ ವಾಹನಗಳ ಸಾಮಾನ್ಯ ವೇಗ ಗಂಟೆಗೆ 100 ಕಿಲೋ ಮೀಟರ್ ಇರುತ್ತದೆ. ಹೀಗಿರುವಾಗ ಸಡನ್ ಆಗಿ ವಾಹನವನ್ನು ನಿಲ್ಲಿಸಲು ಮಾಡುವ ಪ್ರಯತ್ನವೂ ಜೀವಕ್ಕೆ ಅಪಾಯ ತಂದೊಡಬಲ್ಲದು. ಅದರಲ್ಲೂ ಈ ಮಂಜಿನಂತಹ ಸ್ಥಿತಿಯಲ್ಲಿ ಅದು ಇನ್ನೂ ಅಪಾಯಕಾರಿ.
ಪೊಲೀಸರ ಪ್ರಕಾರ, ಈ ಬಗ್ಗೆ ವಿಸ್ತಾರವಾದ ತನಿಖೆ ಆರಂಭವಾಗಿದೆ. ಮೃತನ ಗುರುತು ಪತ್ತೆಯಿಂದ ಪರಿಸ್ಥಿತಿಯನ್ನು ಸಮರ್ಪಕವಾಗಿ ಅರ್ಥೈಸಲು ಸಾಧ್ಯ ಎಂಬುದು ಪೊಲೀಸರ ಅಭಿಪ್ರಾಯ, ಮೃತನ ಕಳೇಬರಹದ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಇನ್ಸ್‌ಪೆಕ್ಟರ್ ದೇವೇಂದ್ರ ಸಿಂಗ್ ಪ್ರತಿಕ್ರಿಯಿಸಿದ್ದು, ಈ ಮೃತದೇಹ ಅಂದಾಜು 40 ವರ್ಷದವರಿಗೆ ಸೇರಿರಬಹುದು. ಆದರೆ ಇದರ ಗುರುತು ಇನ್ನೂ ಪತ್ತೆಯಾಗಿಲ್ಲ, ಮೃತದೇಹದ ತುಂಡುಗಳು ರಸ್ತೆಗಂಟಿದ್ದವು. ಇದನ್ನು ರಸ್ತೆಯಿಂದ ತೆಗೆಯಲು ಸಲಾಕೆ ಹಾಗೂ ಕಸ ಮೊರ ಬಳಸಲಾಯಿತು. ಒಂದೇ ಒಂದು ಬೆರಳು ಮಾತ್ರ ಇಡೀಯಾಗಿ ಸಿಕ್ಕಿದೆ. ಇದರ ಸಹಾಯದಿಂದ ವ್ಯಕ್ತಿ ಗುರುತು ಪತ್ತೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.