ಜನವರಿ 22 ರಂದು ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವಿದ್ದು, ಈ ದಿನವನ್ನು ರಜೆ ಘೋಷಿಸುವಂತೆ ಭಾರತೀಯ ವಕೀಲರ ಸಂಘ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದೆ.
ನವದೆಹಲಿ (ಜ.17): ಕೇಂದ್ರ ಸರ್ಕಾರ ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯನ್ನು ಹಬ್ಬದ ರೀತಿ ಆಚರಿಸಿಲು ಮುಂದಾಗಿದೆ. ಇದರ ನಡುವೆ ಭಾರತೀಯ ವಕೀಲರ ಸಂಘ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದು, ಜನವರಿ 22 ರಂದು ರಜಾ ದಿನವನ್ನಾಗಿ ಘೋಷಣೆ ಮಾಡುವಂತೆ ಮನವಿ ಮಾಡಿದೆ. ತುರ್ತು ವಿಚಾರಣೆಯ ಅಗತ್ಯವಿರುವ ವಿಷಯಗಳನ್ನು ವಿಶೇಷ ವ್ಯವಸ್ಥೆಗಳ ಮೂಲಕ ಸರಿ ಹೊಂದಿಸಬಹುದು ಎಂದು ಪತ್ರದಲ್ಲಿ ತಿಳಿಸಲಾಗಿದೆ. "ಈ ರಜಾದಿನವು ಅಯೋಧ್ಯೆಯಲ್ಲಿನ ಉದ್ಘಾಟನಾ ಸಮಾರಂಭಗಳು ಮತ್ತು ದೇಶಾದ್ಯಂತ ಇತರ ಸಂಬಂಧಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅಥವಾ ವೀಕ್ಷಿಸಲು ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿಗೆ ಅವಕಾಶ ನೀಡುತ್ತದೆ" ಎಂದು ಬಾರ್ ಕೌನ್ಸಿಲ್ ಅಧ್ಯಕ್ಷರಾಗಿರುವ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಮನನ್ ಕುಮಾರ್ ಮಿಶ್ರಾ ಹೇಳಿದ್ದಾರೆ.
ರಜೆ ನೀಡಿದಲ್ಲಿ ದೇಶಾದ್ಯಂತದ ನ್ಯಾಯಾಧೀಶರು, ವಕೀಲರು ಮತ್ತು ನ್ಯಾಯಾಲಯದ ನೌಕರರು ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಸಮಾರಂಭ ಹಾಗೂ ಇದರ ಸಂಬಂಧಿತ ಕಾರ್ಯಕ್ರಮಗಳನ್ನು ವೀಕ್ಷಿಸಲು ಸಾಧ್ಯವಾಗಲಿದೆ ಎಂದು ಮನವಿ ಮಾಡಿದ್ದಾರೆ. ಈ ಮನವಿಯನ್ನು ಅತ್ಯಂತ ಸಹಾನುಭೂತಿಯಿಂದ ಪರಿಗಣಿಸಿ ಈ ಐತಿಹಾಸಿಕ ಸಂದರ್ಭವನ್ನು ಜನರ ಭಾವನೆಗಳಿಗೆ ಅನುಗುಣವಾಗಿ ಆಚರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪತ್ರದಲ್ಲಿ ವಿನಂತಿಸಲಾಗಿದೆ.
Ram Mandir Timeline: 500 ವರ್ಷ ಅಯೋಧ್ಯೆ ಕಂಡಿದ್ದೇನು? ಬಾಬ್ರಿ ಮಸೀದಿಯಿಂದ ರಾಮಮಂದಿರದವರೆಗಿನ ಇತಿಹಾಸ..
ವಿರಾಟ್ ಕೊಹ್ಲಿಯಿಂದಲೂ ಮನವಿ: ಈ ನಡುವೆ ಅಯೋಧ್ಯೆಯ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಟೀಮ್ ಇಂಡಿಯಾ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಕೂಡ ಸಜ್ಜಾಗಿದ್ದಾರೆ. ಮಂಗಳವಾರ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ಅನುಶ್ಕಾ ಶರ್ಮಗೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯ ಆಹ್ವಾನ ತಲುಪಿದೆ. ಇದರ ಬೆನ್ನಲ್ಲಿಯೇ ವಿರಾಟ್ ಕೊಹ್ಲಿ, ಬಿಸಿಸಿಐಗೆ ಮನವಿ ಮಾಡಿದ್ದು ಜನವರಿ 22 ರಂದು ತಾವು ಲಭ್ಯರಿರೋದಿಲ್ಲ ಎಂದಿದ್ದಾರೆ. ಆಟಗಾರನ ಕೋರಿಕೆಯ ಮೇರೆಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಅಭ್ಯಾಸದ ಅವಧಿಯಿಂದಲೂ ಅವರನ್ನು ಹೊರಗಿಡಲಾಗಿದೆ.
ಪ್ರಾಣಪ್ರತಿಷ್ಠಾಪನೆಗೂ ಮುನ್ನ ಅಯೋಧ್ಯೆಗೆ ಹೋಗುವ-ಬರುವ 36 ರೈಲುಗಳು ರದ್ದು!