ಸ್ನಾನದ ಟವೆಲ್ ಸುತ್ಕೊಂಡು ಮೆಟ್ರೋದಲ್ಲಿ ಬಂದ ಯುವಕ: ಜನರ ರಿಯಾಕ್ಷನ್ ನೋಡಿ

By Anusha KbFirst Published Dec 9, 2022, 4:06 PM IST
Highlights

ಯುವಕನೋರ್ವ ಬಾತ್ ಟವೆಲ್ ಸುತ್ತಿಕೊಂಡು ಮೆಟ್ರೋ ಏರಿದ್ದಾನೆ. ಈತನನ್ನು ನೋಡಿದ ಜನ ಬಿದ್ದು ಬಿದ್ದು ನಗುತ್ತಿದ್ದಾರೆ. ಈ ವಿಡಿಯೋ ಫುಲ್ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆಯಿಂದ ಕೂಡಿದ ವಿಡಿಯೋಗಳಿಗೆ ಬರವೇ ಇಲ್ಲ. ಬೋರಾಯ್ತು ಅಂತ ಇನ್ಸ್ಟಾಗ್ರಾಮ್ ಒಪನ್ ಮಾಡಿದ್ರೆ ಲಕ್ಷಾಂತರ ತಮಾಷೆಯ ವಿಡಿಯೋಗಳನ್ನು ಅಲ್ಲಿ ನೋಡಬಹುದಾಗಿದೆ. ಡಿಜಿಟಲ್ ಕಂಟೆಂಟ್ ಕ್ರಿಯೇಟರ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಒಂದು ಲೈಕ್ಸ್ ಒಂದು ಕಾಮೆಂಟ್, ಶೇರಿಂಗ್‌ಗಾಗಿ ಬಾಯ್ಬಿಡುತ್ತಿರುತ್ತಾರೆ. ವೀಕ್ಷಕರ ಮೆಚ್ಚುಗೆ ಗಳಿಸುವ ಕಾರಣಕ್ಕೆ ಇನ್ನಿಲ್ಲದ ಹರ ಸಾಹಸ ಮಾಡುತ್ತಾರೆ. ಬಹುಶಃ ಇದೇ ಕಾರಣಕ್ಕೆ ಇರಬೇಕು ಏನು ಯುವಕನೋರ್ವ ಬಾತ್ ಟವೆಲ್ ಸುತ್ತಿಕೊಂಡು ಮೆಟ್ರೋ ಏರಿದ್ದಾನೆ. ಈತನನ್ನು ನೋಡಿದ ಜನ ಬಿದ್ದು ಬಿದ್ದು ನಗುತ್ತಿದ್ದಾರೆ.

ಇನ್ಸ್ಟಾಗ್ರಾಮ್‌ನಲ್ಲಿ(Instagram) ಈ ವಿಡಿಯೋ ಫುಲ್ ವೈರಲ್ ಆಗಿದ್ದು, ಯುವಕನ ಕಾನ್ಫಿಡೆಂನ್ಸ್ (Confidence) ನೋಡಿ ಜನ ದಂಗಾಗಿದ್ದಾರೆ. mohitgauhar ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ಮೆಟ್ರೋ ಕೋಚ್‌ನಲ್ಲಿ ಆತ ತಿಳಿ ಕೇಸರಿ ಬಣ್ಣದ ಸ್ನಾನದ ಟವೆಲ್ (Bath towel) ಸುತ್ತಿಕೊಂಡು ಉದ್ದಕ್ಕೆ ನಡೆದುಕೊಂಡು ಬರುತ್ತಿದ್ದಾನೆ. ಈತನನ್ನು ನೋಡಿದ್ದೆ ಮೆಟ್ರೋ ಒಳಗೆ ಇದ್ದ ಪ್ರಯಾಣಿಕರೆಲ್ಲ ಬಾಯಿಗೆ ಕೈ ಇಟ್ಟುಕೊಂಡು ಮುಖ ಮುಚ್ಚಿಕೊಂಡು ನಗಲು ಶುರು ಮಾಡಿದ್ದಾರೆ. 

ಭೋಜ್‌ಪುರಿ ಹಾಡಿಗೆ ಮಕ್ಕಳೆದುರು ಕುಣಿದ ಶಿಕ್ಷಕಿ: ವಿಡಿಯೋ ವೈರಲ್, ಪೋಷಕರ ಆಕ್ರೋಶ

ಇನ್ನು ಹೀಗೆ ಟವೆಲ್ ಸುತ್ತಿಕೊಂಡು ಬಂದ ಯುವಕ ಸುಮ್ಮನೆ ಕೂತಿಲ್ಲ, ಮೆಟ್ರೋದ(Metro train) ಗ್ಲಾಸ್‌ಗಳಲ್ಲಿ ಮುಖ ನೋಡಿಕೊಂಡು ಹೇರ್‌ಸ್ಟೈಲ್ ಸರಿ ಮಾಡಿಕೊಂಡು ಫೋಸ್ ಕೊಟ್ಟಿದ್ದಾನೆ. ನೇರವಾಗಿ ಸ್ನಾನದ ಮನೆಯಿಂದ ಬಂದಂತೆ ಆತ ಕಾಣಿಸುತ್ತಿದ್ದು, ಮೆಟ್ರೋದಲ್ಲಿ ಈತನ ವೇಷ ನೋಡಿ ಕೆಲವರು ದಂಗಾಗಿದ್ದರೆ, ಮತ್ತೆ ಕೆಲವರು  ಜೋರಾಗಿ ನಗಲು ಶುರು ಮಾಡಿದ್ದಾರೆ. ಸ್ವತಃ ಟವೆಲ್ ಸುತ್ತಿಕೊಂಡು ಬಂದ ವ್ಯಕ್ತಿಗೂ ಜನರ ರಿಯಾಕ್ಷನ್ ನೋಡಿ ನಗು ಬರುತ್ತಿದ್ದು, ಆತ ಆ ನಗುವನ್ನು ನಿಯಂತ್ರಿಸಲು ಯತ್ನಿಸಿದ್ದಾನೆ. 

ಕಟ್ಟಡದ ತುದಿಯಲ್ಲಿದ್ದ ಜೇನುಗೂಡಿನ ಮೇಲೆ ಹಕ್ಕಿಯ ದಾಳಿ: ವೈರಲ್ ವಿಡಿಯೋ

ವಿಡಿಯೋ ನೋಡಿದ ಅನೇಕರು ಆತನ ಆತ್ಮವಿಶ್ವಾಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದ್ದರೆ ಇಂತಹ ವಿಶ್ವಾಸವಿರಬೇಕು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ನನಗೂ ಇಂತಹ ಆತ್ಮವಿಶ್ವಾಸ ಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ರೀತಿ ಮಾಡಲು ಧೈರ್ಯ ಬೇಕು ಒಟ್ಟಿನಲ್ಲಿ ಈ ತಮಾಷೆ ತುಂಬಾ ಚೆನ್ನಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಮತ್ತೆ ಕೆಲವರು ಮೆಟ್ರೋ ರೀಲ್ಸ್ (Metro Reels) ಮಾಡುವ ಸ್ಥಳವಲ್ಲ. ಇದು ನಿಮ್ಮ ಖಾಸಗಿ ಜಾಗವಲ್ಲ ಎಂದು ಒಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಮೆಟ್ರೋದಿಂದ ಇಳಿಯುವಾಗ ಜೋಪಾನವಾಗಿ ಇಳಿಯಿರಿ ಯಾರಾದರು ನಿಮ್ಮ ಟವೆಲ್ ಏಳೆದು ಬಿಟ್ಟರು ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಹೀಗೆಲ್ಲಾ ಹೇಗೆ ಮಾಡುತ್ತೀರಿ. ಮೆಟ್ರೋದಲ್ಲಿ ಈ ಅವಾತರವನ್ನು ನಾನು ಒಮ್ಮೆಯೂ ನೋಡಿರಲಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಮಜವಾಗಿದ್ದು, ನೋಡುಗರಿಗೆ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದೆ.

ಸೋನೆ ಮಳೆ ಮಧ್ಯೆ ತಾತನ ಸೈಕಲ್ ಸ್ಟಂಟ್: ಕೈ ಬಿಟ್ಟು ಸೈಕಲ್ ಓಡಿಸುವ ಅಜ್ಜ

ಸಾಮಾನ್ಯವಾಗಿ ಭಾರತೀಯ ರೈಲ್ವೆಯ (Indian Railway) ಕಂಪಾರ್ಟ್‌ಮೆಂಟ್‌ನಲ್ಲಿ ಇಂತಹ ದೃಶ್ಯಾವಳಿಗಳು ಆಗಾಗ ಕಾಣಲು ಸಿಗುತ್ತದೆ. ಏಕೆಂದರೆ ದೂರ ಪ್ರಯಾಣ ನಡೆಸುವ ಪ್ರಯಾಣಿಕರು ರೈಲಿನಲ್ಲೇ ಇರುವ ಬಾತ್‌ರೂಮ್‌ನಲ್ಲಿ ಸ್ನಾನ ಮಾಡಲು ಅವಕಾಶ ಇರುವುದರಿಂದ ಈ ವೇಷದಲ್ಲಿ ಬರುತ್ತಾರೆ. ಆದರೆ ಮೆಟ್ರೋದಲ್ಲಿ ಬಾತ್‌ ರೂಮ್ ಇಲ್ಲ. ಹೀಗಾಗಿ ನೋಡುಗರಿಗೆ ಇದ್ದು ಅಚ್ಚರಿ ಮೂಡಿಸಿದೆ. 

click me!