ರೈಲು ಬರುತ್ತಿರುವ ವೇಳೆ ಹಳಿ ದಾಟಲು ಹೋಗಿ ಜೀವಕ್ಕೆ ಕಂಟಕ ತಂದುಕೊಂಡ ಹಲವು ಘಟನೆಗಳು ಈಗಾಗಲೇ ನಡೆದಿದೆ. ಕೆಲ ದಿನಗಳ ಹಿಂದೆ ಲೆವೆಲ್ ಕ್ರಾಸಿಂಗ್‌ನಲ್ಲಿ ಬೈಕ್ ದಾಟಿಸಲು ಯತ್ನಿಸಿದ್ದ ಸವಾರನೋರ್ವನ ಬೈಕ್ ರೈಲಿಗೆ ಸಿಲುಕಿ ನಜ್ಜುಗುಜ್ಜಾಗಿತ್ತು. ಅದೇ ರೀತಿ ಈಗ ರೈಲ್ವೆ ಅನಾಹುತವೊಂದರಿಂದ ವ್ಯಕ್ತಿಯೊಬ್ಬ ಕೂದಲೆಳೆ ಅಂತರದಲ್ಲಿ ಪವಾಡ ಸದೃಶವಾಗಿ ( miraculous escape) ಪಾರಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವ್ಯಕ್ತಿಯೋರ್ವ ರೈಲಿನ ಪ್ಲಾಟ್‌ಫಾರ್ಮ್ ಹಾಗೂ ರೈಲು ಹಳಿಯ ನಡುವಿನ ಸಂದಿಯಲ್ಲಿ ಕೆಳಗೆ ಬಿದ್ದಿದ್ದು, ಅಷ್ಟರಲ್ಲೇ ರೈಲೊಂದು ಆತನ ಮೇಲೆ ಹರಿದು ಹೋಗಿದೆ. ಕೂಡಲೇ ಆತ ಚಾಣಾಕ್ಷತನ ಮೆರೆದಿದ್ದು, ರೈಲು ಹಳಿಯ ಮೇಲೆಯೇ ಮಲಗಿದ ಪರಿಣಾಮ ಅನಾಹುತ ತಪ್ಪಿದೆ. ಉತ್ತರಪ್ರದೇಶದ (Uttar Pradesh) ಇತ್ವಾಹ್ ಜಿಲ್ಲೆಯ ಭರ್ತಾನ್ ರೈಲು ನಿಲ್ದಾಣದಲ್ಲಿ (Bharthana railway station) ಘಟನೆ ನಡೆದಿದೆ. ಈ ಘಟನೆಯ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಿನ್ನೆ ಬೆಳಗ್ಗೆ 9.45 ರ ಸುಮಾರಿಗೆ ಭರ್ತಾನ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಎರಡರ ಸಮೀಪ ಈ ಘಟನೆ ನಡೆದಿದೆ. ಈ ವೇಳೆ ಆಗ್ರಾದಿಂದ ಹೊರಟ ಸೂಪರ್ ಫಾಸ್ಟ್ ಇಂಟರ್‌ಸಿಟಿ ರೈಲು ಭರ್ತಾನ್ ರೈಲು ನಿಲ್ದಾಣ ತಲುಪಿ ಹಳಿ ಮೇಲೆ ಹರಿದಿದೆ.
ಕೆಲ ಮೂಲಗಳ ಪ್ರಕಾರ ಹೀಗೆ ಹೀಗೆ ಸಂದಿಯಲ್ಲಿ ಕೆಳಗೆ ಬಿದ್ದ ವ್ಯಕ್ತಿ, ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಹಳಿ ಮೇಲೆ ಬಿದ್ದು, ಈ ಅನಾಹುತವನ್ನು ಮೈ ಮೇಲಿ ಎಳೆದುಕೊಳ್ಳಲು ಯತ್ನಿಸಿದ್ದ ಎಂದು ತಿಳಿದು ಬಂದಿದೆ. ಆದಾಗ್ಯೂ ಆತನ ಅದೃಷ್ಟ ಚೆನ್ನಾಗಿದ್ದು, ಹಳಿಯ ಮೇಲೆ ಹಾಗೆಯೇ ನೆಟ್ಟಗೆ ಮಲಗುವ ಮೂಲಕ ಅನಾಹುತದಿಂದ ಪಾರಾಗಿದ್ದಾನೆ. ಈ ಘಟನೆಯ ದೃಶ್ಯವೆಲ್ಲವೂ ರೈಲು ನಿಲ್ದಾಣದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಈತ ಕೆಳಗೆ ಬಿದ್ದಿದ್ದನ್ನು ನೋಡಿ ಪ್ಲಾಟ್‌ಫಾರ್ಮ್ ತುಂಬೆಲ್ಲಾ ಜನ ಸೇರಿರುವುದನ್ನು ಕಾಣಬಹುದು. ರೈಲು ಪಾಸಾದ ನಂತರ ಟ್ರ್ಯಾಕ್‌ನಲ್ಲಿ ಮಲಗಿದ್ದ ವ್ಯಕ್ತಿ ಮೇಲೆದ್ದು ಕೈ ಮಗಿದು ತನ್ನ ಬ್ಯಾಗ್‌ನ್ನು ಎತ್ತಿಕೊಂಡು ಆ ಸ್ಥಳದಿಂದ ಹೊರಟು ಹೋಗುವುದನ್ನು ಕಾಣಬಹುದು.
ಕೈ ತೋರಿಸಿ ರೈಲು ನಿಲ್ಲಿಸಿದ ತಾತ: ವಿಡಿಯೋ ಸಖತ್ ವೈರಲ್
ರೈಲಿನ ಮುಂದೆ Reels ಮಾಡಲು ಹೋಗಿ ಅನಾಹುತ
ಈಗಿನ ಹಲವು ಯುವಕ - ಯುವತಿಯರಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗೋ ಹುಚ್ಚು. ಈ ಹಿನ್ನೆಲೆ ಇನ್ಸ್ಟಾಗ್ರಾಮ್ (Instagram), ಯೂಟ್ಯೂಬ್ (Youtube), ಫೇಸ್‌ಬುಕ್‌ನಲ್ಲಿ (Facebook) ತಮ್ಮ ವಿಡಿಯೋ, ಫೋಟೋಗಳನ್ನು ವೈರಲ್ ಮಾಡಲು ನಾನಾ ರೀತಿ ಪ್ರಯತ್ನ ನಡೆಸುತ್ತಾರೆ. ಇದೇ ರೀತಿ, ರೈಲನ್ನು ಹಿನ್ನೆಲೆಯಾಗಿಟ್ಟುಕೊಂಡು ಇನ್ಸ್ಟಾಗ್ರಾಮ್ ರೀಲ್ಸ್ (Instagram Reels) ಮಾಡಲು ಹೋಗಿ ಈಗ ಕೆಲ ದಿನಗಳ ಹಿಂದೆ ಯುವಕನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ತೆಲಂಗಾಣದ (Telangana) ವಾರಂಗಲ್ (Warangal) ಜಿಲ್ಲೆಯಲ್ಲಿ ಈ ಘಟನೆ ನಡೆದಿತ್ತು. ರೈಲ್ವೆ ಟ್ರ್ಯಾಕ್‌ನಲ್ಲಿ ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡಲು ಪ್ರಯತ್ನಿಸುತ್ತಿದ್ದ ಈ ಹದಿಹರೆಯದ ಯುವಕನಿಗೆ ಟ್ರೈನ್ ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡಿದ್ದಾನೆ. ತೆಲಂಗಾಣದ ವಾರಂಗಲ್ ಜಿಲ್ಲೆಯ ವಡ್ಡೆಪಲ್ಲಿ (Vaddepalli) ರೈಲ್ವೆ ಟ್ರ್ಯಾಕ್‌ನಲ್ಲಿ ಈ ಘಟನೆ ನಡೆದಿತ್ತು. ಕಾಝಿಪೇಟ್‌ನಿಂದ ಮಂಚಿರ್ಯಾಲ ಪ್ರದೇಶಕ್ಕೆ ಪ್ರಯಾಣಿಸುತ್ತಿದ್ದ ರೈಲಿನ ಮುಂದೆ ಯುವಕ ಪೋಸ್ ಕೊಡಲು ಹೋಗಿ ಕಂಟಕ ಮೈ ಮೇಲೆ ಎಳೆದುಕೊಂಡಿದ್ದ.
ರೈಲು ತಡವಾದರೆ IRCTC ಯಿಂದ ನೀವು ಈ ಸೌಲಭ್ಯ ಪಡೆದುಕೊಳ್ಳಬಹುದು..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ