
ನವದೆಹಲಿ (ಸೆ.7): ಆದಾಯ ತೆರಿಗೆ ಇಲಾಖೆ (ಐಟಿ) ಬುಧವಾರ ದೇಶಾದ್ಯಂತ ಏಕಕಾಲದಲ್ಲಿ 100 ಸ್ಥಳಗಳ ಮೇಲೆ ದಾಳಿ ನಡೆಸಿದೆ. ಮಧ್ಯಾಹ್ನದ ಬಿಸಿಯೂಟದ ಕಾರ್ಯಕ್ರಮದಲ್ಲಿ ಅಕ್ರಮ, ರಾಜಕೀಯ ನಿಧಿ ಹಾಗೂ ಅಬಕಾರಿ ಹಗರಣದಲ್ಲಿ ದೊಡ್ಡ ಮಟ್ಟದ ತೆರಿಗೆ ವಂಚನೆಯಂಥ ಅಕ್ರಮಗಳಿಗೆ ಸಂಬಂಧಪಟ್ಟಂತೆ ಆದಾಯ ತೆರಿಗೆ ಇಲಾಖೆ ದಾಳಿ ನಡಡೆಸಿದೆ. ದೆಹಲಿ, ರಾಜಸ್ಥಾನ, ಮಹಾರಾಷ್ಟ್ರ, ಉತ್ತರ ಪ್ರದೇಶ, ಛತ್ತೀಸ್‌ಗಢ ಮತ್ತು ಉತ್ತರಾಖಂಡ ಸೇರಿದಂತೆ 7 ರಾಜ್ಯಗಳಲ್ಲಿ ಐಟಿ ದಾಳಿ ನಡೆಯುತ್ತಿದೆ. ಈ ದಾಳಿಗಳು ಮದ್ಯದ ಹಗರಣ, ಮಧ್ಯಾಹ್ನದ ಬಿಸಿಊಟ, ರಾಜಕೀಯ ನಿಧಿ ಮತ್ತು ತೆರಿಗೆ ವಂಚನೆಗೆ ಸಂಬಂಧಿಸಿವೆ. ರಾಜಸ್ಥಾನದ ರಾಜ್ಯ ಸಚಿವ ರಾಜೇಂದ್ರ ಯಾದವ್ ಮತ್ತು ಅವರ ಸಂಬಂಧಿಕರ 53 ಕ್ಕೂ ಹೆಚ್ಚು ಸ್ಥಳಗಳಲ್ಲಿ ಆದಾಯ ತೆರಿಗೆ ದಾಳಿಗಳು ವರದಿಯಾಗಿವೆ. ಬುಧವಾರ ಬೆಳಗ್ಗೆ 5.30ರ ಸುಮಾರಿಗೆ ದಾಳಿ ನಡೆದಿದೆ. ಮಧ್ಯಾಹ್ನದ ಬಿಸಿಯೂಟ ಪೂರೈಕೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದ ವಿಷಯದಲ್ಲಿ ದಾಳಿ ನಡೆಸಲಾಗಿದೆ. ಕೊಟ್‌ಪುಟ್ಲಿಯಲ್ಲಿ ಮಧ್ಯಾಹ್ನದ ಬಿಸಿಯೂಟದ ಪಡಿತರ ಸರಬರಾಜು ಮಾಡುವ ಕಾರ್ಖಾನೆ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ರಾಜೇಂದ್ರ ಯಾದವ್‌ಗೆ ಮಾಹಿತಿ ನೀಡಲಾಗಿದೆ.
ಜೈಪುರದ ಅವರ ಸರ್ಕಾರಿ ಮತ್ತು ಖಾಸಗಿ ನಿವಾಸವನ್ನು ಹೊರತುಪಡಿಸಿ, ಅವರಿಗೆ ಸಂಬಂಧಪಟ್ಟ ಇತರ ಕೆಲವು ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆಯ ತಂಡಗಳು ಬೀಡುಬಿಟ್ಟಿವೆ. ಮಧ್ಯಾಹ್ನದ ಬಿಸಿಯೂಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆದಾಯ ತೆರಿಗೆ ತಂಡಗಳು ಮಹಾರಾಷ್ಟ್ರದ ಹಲವೆಡೆ ದಾಳಿ ನಡೆಸಿವೆ. ಈ ದಾಳಿಗಳು ಎಲ್ಲಿ ನಡೆದಿವೆ ಎಂಬ ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲ.
ಛತ್ತೀಸ್‌ಗಢದಲ್ಲಿ ಮದ್ಯ ವ್ಯಾಪಾರಿ ಮೇಲೆ ದಾಳಿ: ಛತ್ತೀಸ್‌ಗಢದಲ್ಲಿ (Chhattisgarh ) ಕೆಲವು ಮದ್ಯದ ವ್ಯಾಪಾರಿಗಳ ಸ್ಥಳಗಳ ಮೇಲೆ ಐಟಿ ದಾಳಿ ನಡೆಸಿದೆ. ಈ ಪೈಕಿ ಮದ್ಯದ ಉದ್ಯಮಿಯೊಬ್ಬರ ಹೆಸರು ಅಮೋಲಾಕ್ ಸಿಂಗ್ ಎಂದು ಹೇಳಲಾಗುತ್ತಿದೆ. ರಾಮದಾಸ್ ಅಗರ್ವಾಲ್, ಅವರ ಪುತ್ರ ಅನಿಲ್, ಐಶ್ವರ್ಯ ಸಾಮ್ರಾಜ್ಯದ ಆರ್‌ಕೆ ಗುಪ್ತಾ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಈ ಪ್ರಕರಣವು ಮದ್ಯದ ಹಗರಣ ಮತ್ತು ತೆರಿಗೆ ವಂಚನೆಗೆ ಸಂಬಂಧಿಸಿದೆ.
ಮಣಿಪಾಲ್ ಗ್ರೂಪ್ ಕಚೇರಿಯ ಮೇಲೆ ದಾಳಿ: ಇನ್ನು ಬೆಂಗಳೂರಿನ (Bengaluru) 20 ಕ್ಕೂ ಹೆಚ್ಚು ಸ್ಥಳಗಳಲ್ಲಿ ಐಟಿ ತಂಡಗಳಿವೆ. ಮಣಿಪಾಲ್ ಗ್ರೂಪ್ (Manipal Group) ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಈ ಎಲ್ಲಾ ದಾಳಿಗಳು ಆದಾಯ ತೆರಿಗೆ (Income Tax Raid) ವಂಚನೆಗೆ ಸಂಬಂಧಿಸಿವೆ. ಈ ಬಗ್ಗೆ ಐಟಿ ಮಾಹಿತಿ ಪಡೆದಿತ್ತು. ಆಕ್ಷನ್ ಬಗ್ಗೆ ತಂಡಗಳು ಇನ್ನೂ ಹೆಚ್ಚಿನದನ್ನು ಬಹಿರಂಗಪಡಿಸಿಲ್ಲ. ಬೆಂಗಳೂರಿನಲ್ಲಿ ಮಣಿಪಾಲ್ ಗ್ರೂಪ್‌ನ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಐಟಿ ದಾಳಿ. ಹಳೆ ವಿಮಾನ ನಿಲ್ದಾಣ ರಸ್ತೆ, ಕನ್ನಿಂಗ್‌ಹ್ಯಾಮ್ ರಸ್ತೆ, ಯಶವಂತಪುರ ಆವರಣ ಸೇರಿದಂತೆ ಐಟಿ ಅಧಿಕಾರಿಗಳು ಹಲವೆಡೆ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಅಖಿಲೇಶ್ ಯಾದವ್ ಆಪ್ತ ರೈ ಸೇರಿ ಹಲವು SP ನಾಯಕರ ಮೇಲೆ IT Raid!
ಯುಪಿಯಲ್ಲೂ ದಾಳಿ: ಉತ್ತರ ಪ್ರದೇಶದಲ್ಲಿ ರಾಷ್ಟ್ರೀಯ ಕ್ರಾಂತಿಕಾರಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಗೋಪಾಲ್ ರಾಯ್ ಅವರ ಲಕ್ನೋದ ಮನೆ ಮೇಲೂ ಐಟಿ ದಾಳಿ ನಡೆಯುತ್ತಿದೆ. ಮೂಲಗಳ ಪ್ರಕಾರ, ರೈ ಅವರು ಕೆಲವು ಎನ್‌ಜಿಒಗಳನ್ನು ಸಹ ನಡೆಸುತ್ತಿದ್ದಾರೆ. ರಾಜಕೀಯ ಹಣ ಮತ್ತು ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಈ ಪ್ರಕರಣವನ್ನು ಹೇಳಲಾಗುತ್ತಿದೆ.
IT ರೇಡ್‌ನಲ್ಲಿ ಲೆಕ್ಕಕ್ಕೆ ಸಿಗದ 350 ಕೋಟಿ ಪತ್ತೆ; ನಿರ್ದೇಶಕ ಕಶ್ಯಪ್, ನಟಿ ತಾಪ್ಸಿಗೆ ಸಂಕಷ್ಟ!
ಮಮತಾ ಸಚಿವರ 6 ಸ್ಥಳಗಳ ಮೇಲೆ ಸಿಬಿಐ ದಾಳಿ: ಮಮತಾ ಸರ್ಕಾರದ ಕಾನೂನು ಸಚಿವ ಮಲ್ಯ ಘಟಕ್ ಅವರ 6 ಸ್ಥಳಗಳ ಮೇಲೆ ಸಿಬಿಐ ಬುಧವಾರ ಬೆಳಗ್ಗೆ ದಾಳಿ ನಡೆಸಿದೆ. ಘಟಕ್ ಕಲ್ಲಿದ್ದಲು ಕಳ್ಳಸಾಗಣೆ ಆರೋಪ ಹೊತ್ತಿದ್ದಾರೆ. ಮೂಲಗಳ ಪ್ರಕಾರ, ಸಿಬಿಐನ 3 ತಂಡಗಳು ಬೆಳಗ್ಗೆ 8 ಗಂಟೆಯಿಂದ ಘಟಕ್ ನಿವಾಸ ಸೇರಿದಂತೆ 6 ಸ್ಥಳಗಳಲ್ಲಿ ಶೋಧ ನಡೆಸುತ್ತಿವೆ. ಅವುಗಳಲ್ಲಿ, ಕೋಲ್ಕತ್ತಾದ 5 ಸ್ಥಳಗಳಲ್ಲಿ ಮತ್ತು ಅಸನ್ಸೋಲ್‌ನಲ್ಲಿ ಒಂದು ತಂಡಗಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ