ಅಯ್ಯೋ ವಿಧಿಯೇ... ಮೃತ ಮಗನ ಶವದೊಂದಿಗೆ 8 ದಿನ ಕಳೆದ ಹಾಸಿಗೆ ಹಿಡಿದಿದ್ದ ತಾಯಿ

By Anusha KbFirst Published Mar 4, 2024, 4:11 PM IST
Highlights

ಹಾಸಿಗೆ ಹಿಡಿದಿದ್ದ ತಾಯಿಯೊಬ್ಬರು ಮೃತ ಮಗನ ಶವವೊಂದಿಗೆ 8 ದಿನ ಕಳೆದ ಆಘಾತಕಾರಿ ಘಟನೆ ತ್ರಿಪುರ ರಾಜಧಾನಿ ಅಗರ್ತಲಾದಲ್ಲಿ ನಡೆದಿದೆ.  82 ವರ್ಷದ ತಾಯಿಯೊಬ್ಬರು ತಮ್ಮ 56 ವರ್ಷದ ಮಗನೊಂದಿಗೆ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು. 

ಅಗರ್ತಲಾ: ಹಾಸಿಗೆ ಹಿಡಿದಿದ್ದ ತಾಯಿಯೊಬ್ಬರು ಮೃತ ಮಗನ ಶವವೊಂದಿಗೆ 8 ದಿನ ಕಳೆದ ಆಘಾತಕಾರಿ ಘಟನೆ ತ್ರಿಪುರ ರಾಜಧಾನಿ ಅಗರ್ತಲಾದಲ್ಲಿ ನಡೆದಿದೆ.  82 ವರ್ಷದ ತಾಯಿಯೊಬ್ಬರು ತಮ್ಮ 56 ವರ್ಷದ ಮಗನೊಂದಿಗೆ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು. ಮಗನ ಪತ್ನಿ ಮೂರು ವರ್ಷದ ಹಿಂದೆ ಈ ಕುಟುಂಬವನ್ನು ತೊರೆದು ಹೋಗಿದ್ದರು. ಇತ್ತ ಮಗ ಹಾಸಿಗೆ ಹಿಡಿದಿದ್ದ ವಯೋವೃದ್ಧ ಅಮ್ಮನನ್ನು ನೋಡಿಕೊಂಡು ಅಮ್ಮನೊಂದಿಗೆ ವಾಸವಿದ್ದರು. ಆದರೆ ದುರಾದೃಷ್ಟವಶಾತ್ ವಾರಗಳ ಹಿಂದೆ ಈ ಮಗ ತೀರಿಕೊಂಡಿದ್ದಾರೆ. ಈತ ಹಾಸಿಗೆ ಹಿಡಿದಿದ್ದ ಅಮ್ಮನಿಗೆ ಮಗ ಸತ್ತಿರುವ ಅರಿವಾದರೂ ಇತ್ತೋ ಇಲ್ಲವೋ ಅಥವಾ ಅರಿವಿದ್ದರೂ ಮೇಲೇಳಲಾಗದ ಅಸಹಾಯಕತೆಯೋ ಗೊತ್ತಿಲ್ಲ, ಬಹುತೇಕ 8 ದಿನಗಳ ಕಾಲ ಮಗನ ಶವದೊಂದಿಗೆ ವೃದ್ಧ ತಾಯಿ ದಿನ ಕಳೆದಿದ್ದಾರೆ. ಆದರೆ ಇತ್ತ ಸತ್ತು ವಾರವೇ ಕಳೆದಿರುವುದರಿಂದ ಮಗನ ದೇಹ ಕೊಳೆತು ಕೆಟ್ಟ ವಾಸನೆ ಬರಲು ಶುರುವಾಗಿದ್ದು, ಸಹಿಸಲಾಗದ ಕೆಟ್ಟ ವಾಸನೆಯ ಹಿನ್ನೆಲೆಯಲ್ಲಿ ನೆರೆಹೊರೆಯ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ಮಗ ಸತ್ತು ಬಿದ್ದಿದ್ದು ತಾಯಿ ಹಾಸಿಗೆ ಹಿಡಿದಿರುವುದು ಗೊತ್ತಾಗಿದೆ. 

ಅಗರ್ತಲದ ಶಿವನಗರ ಪ್ರದೇಶದಲ್ಲಿ ಈ ಮನ ಮಿಡಿಯುವ ಘಟನೆ ನಡೆದಿದೆ.  82 ವರ್ಷದ ಕಲ್ಯಾಣಿ ಸುರ್ ಚೌಧುರಿ ಅವರು ತಮ್ಮ 54 ವರ್ಷದ ಮಗ ಸುಧೀರ್ ಜೊತೆ ವಾಸ ಮಾಡುತ್ತಿದ್ದರು. ಕೌಟುಂಬಿಕ ಕಲಹದ ಕಾರಣದಿಂದ ಇವರ ಸೊಸೆ ಮೂರು ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದರು. 

13 ವರ್ಷಗಳ ಕಾಲ ಅಮ್ಮನ ಶವದೊಂದಿಗೆ ದಿನ ಕಳೆದ ಮಗ

ಇತ್ತ ಕೆಟ್ಟ ವಾಸನೆ ತಾಳಲಾರದೇ ಪೊಲೀಸರಿಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ.  ನಾವು ಸಂಜೆ ಮೂರು ಗಂಟೆ ಸುಮಾರಿಗೆ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರ ಸಮ್ಮುಖದಲ್ಲಿ ಬಾಗಿಲು ಒಡೆದಾಗ ಹಾಸಿಗೆಯ ಮೇಲೆ ಸುಧೀರ್ ಪಾಲ್ ಶವ ಪತ್ತೆಯಾಗಿತ್ತು ಎಂದು ಮಹಾರ್‌ಗಂಗ್ ಬಜಾರ್ ಪೊಲೀಸ್ ಔಟ್‌ಪೋಸ್ಟ್ ಇನ್‌ಚಾರ್ಜ್‌ ಮೃನಾಲ್ ಪಾಲ್ ಹೇಳಿದ್ದಾರೆ. 

ಸುಧೀರ್ ಅವರ ತಾಯಿ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದು, ಅವರನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಅವರು ಮನೆಯ ಇನ್ನೊಂದು ಕೋಣೆಯಲ್ಲಿ ವಾಸವಿದ್ದರು. ಮನೆಯೊಳಗೆ ಖಾಲಿಯಾದ ಹಲವು ಮದ್ಯದ ಬಾಟಲ್‌ಗಳು ಸಿಕ್ಕಿವೆ ಅಲ್ಲಿಯೇ ಸುಧೀರ್ ಮೃತದೇಹವೂ ಇತ್ತು. ಸುಧೀರ್ ದೇಹದಲ್ಲೆಲ್ಲೂ ಗಾಯದ ಗುರುತುಗಳಿಲ್ಲ, ದಾಂಪತ್ಯ ಕಲಹದಿಂದಾಗಿ ಆ ವ್ಯಕ್ತಿ ಮಾನಸಿಕವಾಗಿ ಸರಿ ಇದ್ದಂತೆ ಕಾಣುತ್ತಿಲ್ಲ, ಬಹುಶಃ ಅತೀಯಾದ ಕುಡಿತದಿಂದಲೇ ಆತ ಸಾವನ್ನಪ್ಪಿರಬಹುದು ನಾವು ಈ ಬಗ್ಗೆ ತನಿಖೆ ಕೈಗೊಂಡಿದ್ದೇವೆ ಎಂದು ಪೊಲೀಸ್ ಅಧಿಕಾರಿ ಮೃನಾಲ್ ಪಾಲ್ ಹೇಳಿದ್ದಾರೆ.

ವೃದ್ಧ ಪತಿಯ ಶವದೊಂದಿಗೆ ದಿನ ಕಳೆದ ಪತ್ನಿ: ಕೊರೋನಾ ಭಯದಿಂದ ಬಾರದ ಸಂಬಂಧಿಕರು..!

click me!