ಹಿಂದೂ ಧರ್ಮದ ಅವಹೇಳನ: ಉದಯನಿಧಿ ಸ್ಟಾಲಿನ್‌ಗೆ ಮತ್ತೆ ಚಾಟಿ ಬೀಸಿದ ಸುಪ್ರೀಂ

By Anusha Kb  |  First Published Mar 4, 2024, 3:19 PM IST

ಸನಾತನ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ತಮಿಳುನಾಡು ಸಿಎಂ ಕೆ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ವಿರುದ್ಧ ಸುಪ್ರೀಂಕೋರ್ಟ್ ಮತ್ತೆ ಚಾಟಿ ಬೀಸಿದೆ.


ನವದೆಹಲಿ/ಚೆನ್ನೈ: ಸನಾತನ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ತಮಿಳುನಾಡು ಸಿಎಂ ಕೆ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ವಿರುದ್ಧ ಸುಪ್ರೀಂಕೋರ್ಟ್ ಮತ್ತೆ ಚಾಟಿ ಬೀಸಿದೆ. ಬಾಯಿಗೆ ಬಂದಂತೆ ಮಾತನಾಡಲು ನೀವು ಜನಸಾಮಾನ್ಯರಲ್ಲ, ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ, ಈ ರೀತಿ ಮಾತನಾಡುವ ಮೂಲಕ ನೀವು ನಿಮ್ಮ ಹಕ್ಕನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದೀರಿ ಎಂದು ಸುಪ್ರೀಂಕೋರ್ಟ್ ನ್ಯಾಯಾಧೀಶರು ಉದಯನಿಧಿ ಸ್ಟಾಲಿನ್‌ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. 

ನೀವು ಓರ್ವ ಸಾಮಾನ್ಯ ವ್ಯಕ್ತಿ ಅಲ್ಲ ಜವಾಬ್ದಾರಿಯುತ ಹುದ್ದೆಯಲ್ಲಿರುವವರು ಹೀಗಾಗಿ ಈ ರೀತಿ ಕಾಮೆಂಟ್ ಮಾಡುವುದರಿಂದ ದೂರ ಇರಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಸನಾತನ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಹಿನ್ನೆಲೆಯಲ್ಲಿ ಸ್ಟಾಲಿನ್ ವಿರುದ್ಧ ಹಲವು ರಾಜ್ಯಗಳಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ಎಲ್ಲಾ ಎಫ್‌ಐಆರ್‌ಗಳನ್ನು ಒಟ್ಟುಗೂಡಿಸುವಂತೆ ಕೋರಿ ಉದಯನಿಧಿ ಸ್ಟಾಲಿನ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಉತ್ತರಪ್ರದೇಶ, ಕರ್ನಾಟಕ, ಬಿಹಾರ, ಜಮ್ಮು ಮತ್ತು ಕಾಶ್ಮೀರ ಹಾಗೂ ಮಹಾರಾಷ್ಟ್ರದಲ್ಲಿ ದಾಖಲಾಗಿರುವ ಕೇಸುಗಳನ್ನು ಒಟ್ಟುಗೂಡಿಸುವಂತೆ ಕೋರಿ ಉದಯನಿಧಿ ಅರ್ಜಿ ಸಲ್ಲಿಸಿದ್ದರು. ಸ್ಟಾಲಿನ್ ಪರ ಸುಪ್ರೀಂಕೋರ್ಟ್‌ನಲ್ಲಿ ಹಿರಿಯ ವಕೀಲ, ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಘ್ವಿ ಪ್ರತಿನಿಧಿಸಿದ್ದರು. ಆದರೆ ಉದಯನಿಧಿ ಸ್ಟಾಲಿನ್ ನಡೆಗೆ ಅಸಮ್ಮತಿ ಸೂಚಿಸಿದ ನ್ಯಾಯಾಲಯ ಹೇಳಿಕೆಗಳನ್ನು ನೀಡುವ ಮೊದಲು ಅದರ ಪರಿಣಾಮಗಳ ಬಗ್ಗೆ ತಿಳಿದಿರಬೇಕು ಎಂದು ಹೇಳಿದರು. 

Tap to resize

Latest Videos

ಮೋದಿ ನೀವಲ್ಲ ನಿಮ್ಮಜ್ಜ ಬಂದ್ರೂ ತಮಿಳುನಾಡಿನಲ್ಲಿ ಡಿಎಂಕೆಗೆ ಏನೂ ಮಾಡೋಕೆ ಆಗಲ್ಲ: ಉದಯನಿಧಿ ಸ್ಟ್ಯಾಲಿನ್‌!

ನೀವೇನೂ ಸಾಮಾನ್ಯ ವ್ಯಕ್ತಿ ಅಲ್ಲ, ನೀವು ನಿಮ್ಮ ಹಕ್ಕುಗಳನ್ನು ದುರುಪಯೋಗಪಡಿಸಿಕೊಂಡಿದ್ದೀರಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ದುರುಪಯೋಗಪಡಿಸಿಕೊಂಡಿದ್ದೀರಿ? ಈಗ ಅರ್ಚಿಕಲ್ 32ರ ಅಡಿಯಲ್ಲಿ ರಕ್ಷಣೆಗಾಗಿ ಸುಪ್ರೀಂಕೋರ್ಟ್‌ಗೆ ಬಂದಿದ್ದೀರಿ? ನೀವು ಏನು ಹೇಳಿದ್ದೀರಿ ಹಾಗೂ ಅದರ ಪರಿಣಾಮ ಏನು ಎಂಬುದರ ಬಗ್ಗೆ ನಿಮಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿತ್ತು.

ಇದಕ್ಕೆ ಪ್ರತಿಯಾಗಿ ಸ್ಟಾಲಿನ್ ಪರ ವಾದ ಮಂಡಿಸಿದ್ದ ಸಿಂಘ್ವಿ,  ಅರ್ನಾಬ್ ಗೋಸ್ವಾಮಿ, ನೂಪುರ್ ಶರ್ಮಾ, ಮೊಹ್ಮದ್ ಜುಬೇರ್, ಅಮೀಶ್ ದೇವಗನ್‌  ಅವರ ವಿರುದ್ಧ ಹಲವು ಕಡೆ  ದಾಖಲಾಗಿದ್ದ ಎಫ್‌ಐಆರ್‌ಗಳನ್ನು ಕ್ರೋಡೀಕರಿಸಲಾಗಿತ್ತು. ಅದೇ ರೀತಿ ಈಗ ಡಿಎಂಕೆ ನಾಯಕನ ಪ್ರಕರಣವನ್ನು ನೋಡುವಂತೆ ಮನವಿ ಮಾಡಿದರು.

ನಾನು ಆರು ಹೈಕೋರ್ಟ್‌ಗಳಿಗೆ ಹೋಗಬೇಕಾದರೆ, ನಾನು ನಿರಂತರವಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಬಂಧಿಸಲ್ಪಡುತ್ತೇನೆ  ಇದು ವಿಚಾರಣೆಯ ಮೊದಲು ಕಿರುಕುಳ ಎಂದ ಸ್ಟಾಲಿನ್ ಗೆ ಪ್ರತಿಯಾಗಿ ನ್ಯಾಯಾಲಯವೂ ನೀವು ಜನಸಾಮಾನ್ಯರಲ್ಲ, ನೀವು ಓರ್ವ ಮಂತ್ರಿ ನಿಮ್ಮ ಹೇಳಿಕೆಗಳ ಪರಿಣಾಮದ ಬಗ್ಗೆ ನಿಮಗೆ ತಿಳಿದಿರಬೇಕು ಎಂದು ಹೇಳಿ ವಿಚಾರಣೆಯನ್ನು ಮಾರ್ಚ್ 15ಕ್ಕೆ ಮುಂದೂಡಿದೆ. ಸನಾತನ ಧರ್ಮವೂ ಮಲೇರಿಯಾ ಡಂಗ್ಯೂ ಇದ್ದಂತೆ, ಅದೂ ಜಾತಿ ಪದ್ಧತಿ ಹಾಗೂ ವರ್ಣಬೇಧವನ್ನು ಹೊಂದಿದೆ, ಅದನ್ನು ತಳಮಟ್ಟದಿಂದಲೇ ತೊಡೆದು ಹಾಕಬೇಕು ಎಂದು ಉದಯನಿಧಿ ಸ್ಟಾಲಿನ್ ಹೇಳಿಕೆ ನೀಡಿದ್ದರು. 

ಸನಾತನ ಧರ್ಮವನ್ನು ಡೆಂಗ್ಯು, ಮಲೇರಿಯಾಗೆ ಹೋಲಿಸಿದ್ದ ಉದಯನಿಧಿ, ಬೆಂಗಳೂರು ಕೋರ್ಟ್‌ನಿಂದ ಸಮನ್ಸ್‌!

click me!