ಕುನೋ ಉದ್ಯಾನವನದಲ್ಲಿ 4 ಮರಿಗಳಿಗೆ ಜನ್ಮ ನೀಡಿದ ಚೀತಾ... ಮರಿಗಳ ವೀಡಿಯೋ ವೈರಲ್

Published : Mar 29, 2023, 03:16 PM ISTUpdated : Mar 29, 2023, 05:51 PM IST
ಕುನೋ ಉದ್ಯಾನವನದಲ್ಲಿ 4 ಮರಿಗಳಿಗೆ ಜನ್ಮ ನೀಡಿದ ಚೀತಾ... ಮರಿಗಳ ವೀಡಿಯೋ ವೈರಲ್

ಸಾರಾಂಶ

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾವೊಂದು ನಾಲ್ಕು ಮುದ್ದಾದ ಮರಿಗಳಿಗೆ ಜನ್ಮ ನೀಡಿದೆ. ಕಳೆದ ವರ್ಷ ಆಫ್ರಿಕಾದ ನಮೀಬಿಯಾದಿಂದ  8 ಚೀತಾಗಳನ್ನು ಕರೆತರಲಾಗಿತ್ತು.

ಭೋಪಾಲ್‌: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾವೊಂದು ನಾಲ್ಕು ಮುದ್ದಾದ ಮರಿಗಳಿಗೆ ಜನ್ಮ ನೀಡಿದೆ. ಕಳೆದ ವರ್ಷ ಆಫ್ರಿಕಾದ ನಮೀಬಿಯಾದಿಂದ  8 ಚೀತಾಗಳನ್ನು ಕರೆತರಲಾಗಿತ್ತು. ಅದರಲ್ಲಿ ಒಂದು ಹೆಣ್ಣು ಚೀತಾ ಈಗ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ಇತ್ತೀಚೆಗಷ್ಟೇ ಒಂದು ಚೀತಾ ಕಿಡ್ನಿ ಸಮಸ್ಯೆಯಿಂದಾಗಿ ಮೃತಪಟ್ಟಿತ್ತು. ಇದಾಗಿ ಮೂರು ದಿನಗಳ ಬಳಿಕ ಹೆಣ್ಣು ಚಿರತೆಯೊಂದು ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರು ಈ ವಿಚಾರವನ್ನು ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 

ಸಶಾ ಸೇರಿದಂತೆ ಒಟ್ಟು 7 ಚೀತಾಗಳನ್ನು ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ ಭಾರತಕ್ಕೆ ಕರೆತರಲಾಗಿತ್ತು. ಆದರೆ ನಾಲ್ಕೂವರೆ ವರ್ಷಕ್ಕಿಂತ ಹೆಚ್ಚು ಪ್ರಾಯದ ಹೆಣ್ಣು ಚೀತಾ ಸಶಾ ಸಾವಿನಿಂದಾಗಿ ಈ ಪ್ರಾಜೆಕ್ಟ್ ಚೀತಾಗೆ ಹಿನ್ನಡೆಯಾಗಿತ್ತು.  ಈ ಯೋಜನೆಯೂ ದೇಶದಲ್ಲಿ ವಿಶ್ವದ ಅತ್ಯಂತ ವೇಗದ  ಪ್ರಾಣಿಗಳ ಜನಸಂಖ್ಯೆಯನ್ನು ಮರು ಸ್ಥಾಪಿಸುವ ಗುರಿಯನ್ನು ಹೊಂದಿದೆ, ದೇಶದಲ್ಲಿ ಇವುಗಳು ಅಳಿದು ಹೋಗಿದ್ದು, ಈಗ ಅವುಗಳ ಮರುಸ್ಥಾಪನೆಗೆ ಪ್ರಯತ್ನ ಮಾಡಲಾಗುತ್ತಿದೆ.

 ಕುನೋದಲ್ಲಿ 20 ಚೀತಾಗಳಿಗೆ ಬೇಕಾದಷ್ಟುಆಹಾರವಿಲ್ಲ!

ಕಳೆದ ವರ್ಷ ಸೆಪ್ಟೆಂಬರ್ ಮಧ್ಯದಲ್ಲಿ ನಮೀಬಿಯಾದಿಂದ 8 ಚಿರತೆಗಳನ್ನು ಭಾರತಕ್ಕೆ ಕರೆ ತರಲಾಯಿತು ಮತ್ತು ಮಧ್ಯಪ್ರದೇಶದ ಶಿಯೋಪುರ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಇಡಲಾಗಿತ್ತು. ಉಳಿದ 7 ಚೀತಾಗಳು ಆರೋಗ್ಯವಾಗಿದ್ದು,  ಉದ್ಯಾನವನದ ತೆರೆದ ಜಾಗದಲ್ಲಿ ಅವುಗಳನ್ನು ಬಿಡಲಾಗಿದೆ.  ಅವುಗಳು ಸಂಪೂರ್ಣ ಆರೋಗ್ಯವಾಗಿದ್ದು,  ಸಾಮಾನ್ಯ  ಎಂಬಂತೆ ಬೇಟೆಯಾಡುತ್ತವೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೆಎಸ್ ಚೌಹಾಣ್‌ (JS Chauhan) ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಇವುಗಳು ಅಲ್ಲದೇ ಕಳೆದ ತಿಂಗಳು ದಕ್ಷಿಣ ಆಫ್ರಿಕಾದಿಂದ ಮತ್ತೆ 12 ಚೀತಾಗಳನ್ನು ಕರೆತರಲಾಗಿದ್ದು, ಅವುಗಳನ್ನು ಸದ್ಯದ ಮಟ್ಟಿಗೆ ಕ್ವಾರೆಂಟೈನ್‌ನಲ್ಲಿ ಇರಿಸಲಾಗಿದೆ. ಅವುಗಳು ಆರೋಗ್ಯವಾಗಿದ್ದು, ಮುಂದಿನ ದಿನಗಳಲ್ಲಿ ಅವುಗಳನ್ನು ಕಾಡಿಗೆ ಬಿಡಲಾಗುವುದು ಎಂದು ಸುದ್ದಿಸಂಸ್ಥೆ ಪಿಟಿಐಗೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಇದಕ್ಕೂ ಮೊದಲು ಸೆಪ್ಟೆಂಬರ್ 17 ರಂದು ಐದು ಹೆಣ್ಣು ಹಾಗೂ ಮೂರು ಗಂಡು ಚಿರತೆಗಳನ್ನು ಕುನೋ ಕಾಡಿಗೆ ಬಿಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮೋದಿ ಭಾಗಿಯಾಗಿದ್ದರು.  1947ರಲ್ಲಿ ಕೊನೆಯ ಬಾರಿಗೆ ದೇಶದಲ್ಲಿ ಛತ್ತಿಸ್‌ಗಢ (Chhattisgarh) ರಾಜ್ಯದ ಕೊರಿಯಾ (Koriya) ಜಿಲ್ಲೆಯಲ್ಲಿ ಚಿರತೆ ಕಾಣಿಸಿಕೊಂಡಿತ್ತು.  ಆದರೆ 1952ರಲ್ಲಿ ಭೂಮಿ ಮೇಲಿನ  ಅತ್ಯಂತ ವೇಗದ ಪ್ರಾಣಿ ಎನಿಸಿದ್ದ ಚೀತಾ ದೇಶದಲ್ಲಿ ಮರೆಯಾಗಿತ್ತು. 

ಮತ್ತೆ ಭಾರತಕ್ಕೆ ಬಂದ 12 ಚೀತಾಗಳು: ದಕ್ಷಿಣ ಆಫ್ರಿಕಾದಿಂದ ಆಗಮಿಸಿದ ಅತಿಥಿಗಳು..!

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೇಗುಲ ಪ್ರವೇಶಿಸುವುದಿಲ್ಲ ಎಂದ ಕ್ರಿಶ್ಚಿಯನ್ ಮಿಲಿಟರಿ ಅಧಿಕಾರಿಯ ಅಮಾನತು ಎತ್ತಿ ಹಿಡಿದ ಸುಪ್ರೀಂಕೋರ್ಟ್‌ ಹೇಳಿದ್ದೇನು?
ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ