ಮುಂಬೈ ಫುಟ್‌ಪಾಥ್‌ನಿಂದ 1BHK ಮನೆಗೆ ; ಕನಸು ನನಸಾದ ಆಸ್ಮಾಳ ರೋಚಕ ಕತೆ!

By Suvarna NewsFirst Published Sep 3, 2021, 7:24 PM IST
Highlights
  • ಫುಟ್‌ಪಾಥ್‌ನಲ್ಲಿ ಜೀವನ ಅಂತ್ಯಗೊಳಿಸಿ ಮುಂಬೈನ ಅಪಾರ್ಟ್‌ಮೆಂಟ್‌ಗೆ ಆಸ್ಮಾ ಕುಟುಂಬ
  • ಫುಟ್‌ಪಾತ್ ಬೆಳಕಿನಲ್ಲಿ ಓದಿ 10ನೆ ತರಗತಿ ಪಾಸಾದ ಆಸ್ಮಾ ಶೇಕ್, 
  • ಸೃಹೃದಯಿಗಳಿಂದ ಆಸ್ಮಾ ಕುಟುಂಬಕ್ಕೆ ನೆರವು, ನನಸಾಯಿತು ಕನಸು

ಮುಂಬೈ(ಸೆ.3): ಕೊರೋನಾ ನೀಡಿದ ಹೊಡೆತಕ್ಕೆ ಹಲವು ಕುಟುಂಬಗಳು ಬೀದಿಗೆ ಬಿದ್ದಿದೆ. ಹಲವು ಕುಟುಂಬ ಹೊಡೆತದಿಂದ ಮೇಲೇಳಲು ಸಾಧ್ಯವಾಗದೆ ಪರದಾಡುತ್ತಿದೆ. 17 ವರ್ಷದ ಆಸ್ಮಾ ಶೇಕ್ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ. ದಕ್ಷಿಣ ಮುಂಬೈನ ಆಸ್ಮಾ ಶೇಕ್ ಹಾಗೂ ಕುಟುಂಬ ಸದಸ್ಯರು ಮುಂಬೈನ ಫುಟ್‌ಪಾಥ್‌ನಲ್ಲಾಗಿತ್ತು. ತಾನು ಓದಿ ಉತ್ತಮ ಉದ್ಯೋಗ ಪಡೆದು ಫುಟ್‌ಪಾಥ್ ಜೀವನ ಅಂತ್ಯಗೊಳಿಸಬೇಕು ಅನ್ನೋ ಆಸ್ಮಾ ಶೇಕ್ ಕನಸು ಬಹುಬೇಗನೆ ನನಸಾಗಿದೆ. 

ಪೋಷಕರ ಜೊತೆ ಫುಟ್‌ಪಾತ್‌ನಲ್ಲಿ ಪಾತ್ರೆ ತೊಳೆಯುತ್ತಿದ್ದ ಬಾಲಕಿಗೆ PUCಯಲ್ಲಿ 93% ಅಂಕ..!

ಅಸ್ಮಾ ಶೇಕ್ ಕಣ್ಣೀರ ಕತೆ 2020ರಲ್ಲಿ ಭಾರಿ ಸದ್ದು ಮಾಡಿತ್ತು. 10ನೇ ತರಗತಿ ಪರೀಕ್ಷೆಯನ್ನು ಫುಟ್‌ಪಾಥ್ ದೀಪದಲ್ಲಿ ಓದಿ ಪಾಸಾಗಿದ್ದ ಆಸ್ಮಾ ಮಾಧ್ಯಮದಲ್ಲಿ ಭಾರಿ ಸದ್ದು ಮಾಡಿದ್ದಳು. ಕಾರಣ ಕೊರೋನಾ ಹೊಡೆತದಿಂದ ಬೀದಿ ಬದಿಯಲ್ಲಿ ಜ್ಯೂಸ್ ಮಾರಾಟ ಮಾಡಿ ಸಾಗುತ್ತಿದ್ದ ಆಸ್ಮಾ ಪೋಷಕರಿಗೆ ಮಗಳ ಓದು ಹಾಗು ಕುಟಂಬ ನಿರ್ವಹಣೆ ಕಷ್ಟವಾಗಿತ್ತು. ಆಸ್ಮಾ ತಂದೆ ಸಲೀಮ್ ಶೇಕ್ ಮಗಳನ್ನು ಕಾಲೇಜು ಸೇರಿಸಲು ಇನ್ನಿಲ್ಲದ ಕಷ್ಟಪಟ್ಟಿದ್ದರು.

 

ಈ ಕುರಿತು ಬಿಬಿಸಿ ವರದಿ ಪ್ರಸಾರ ಮಾಡಿತ್ತು. ಈ ವೇಳೆ ಆಸ್ಮಾ ತಾನು ಉನ್ನತ ವಿದ್ಯಭ್ಯಾಸ ಮಾಡಿ ಪೋಷಕರ ಸಂಕಷ್ಟವನ್ನು ಅಂತ್ಯಗೊಳಿಸಬೇಕು. ಬೀದಿ ಬದಿ ಜೀವನ ಅಂತ್ಯಗೊಳಿಸಿ ಮುಂಬೈನಲ್ಲಿ ಮನ ಖರೀದಿಸಬೇಕು ಎಂದಿದ್ದಳು. ಮಾಧ್ಯಮಗಳಲ್ಲಿ ಅಸ್ಮಾ ಕತೆ ಪ್ರಕಟವಾಗುತ್ತಿದ್ದಂತೆ ವಿದೇಶದಲ್ಲಿದ್ದ ಹಲವು ಭಾರತೀಯರು ಆಸ್ಮಾಗಳಿಗೆ ನೆರವಾಗಲು ನಿರ್ಧರಿಸಿದ್ದಾರೆ. 

1.2 ಲಕ್ಷಕ್ಕೂ ಅಧಿಕ ಹಣ ಹೊಂದಿಸಿದ ವಿದೇಶಿದಲ್ಲಿರುವ ಭಾರತೀಯರು ಮುಂಬೈನ ಮೊಹಮ್ಮದ್ ಅಲಿ ರೋಡ್‌ನಲ್ಲಿ 1 ಬೆಡ್‌ರೂಂ ಬಾಡಿಗೆ ಮನೆ ನೀಡಿದ್ದಾರೆ. ಈಗಾಗಲೇ 3 ವರ್ಷದ ಬಾಡಿಗೆ, ನೀರಿನ ಬಿಲ್ ಸೇರಿದಂತೆ ಇತರ ಎಲ್ಲಾ ಬಿಲ್ ನೀಡಲಾಗಿದೆ. ಇತ್ತ ಖತಾರ್‌ನ ಪೆಟ್ರೋಲಿಯಂ ಮ್ಯಾನಜೇರ್ ನೌಸೀರ್ ಶಾ, ಆಸ್ಮಾ ವಿದ್ಯಾಭ್ಯಾಸಕ್ಕೆ ಪ್ರತಿ ತಿಂಗಳು 3,000 ರೂಪಾಯಿ ಘೋಷಿಸಿದ್ದಾರೆ. 

2.5 ಕೋಟಿ ಪಡೆಯೋ ಈ ನಟಿ ನೋಡಲು 5 ದಿನ ರಸ್ತೇಲಿ ಮಲಗಿದ ಫ್ಯಾನ್!

ಆಸ್ಮಾ ವಿದ್ಯಾಭ್ಯಾಸ ಪೂರ್ತಿಯಾಗುವವರೆಗೆ ಪ್ರತಿ ತಿಂಗಳು 3,000 ರೂಪಾಯಿ ನೀಡುವುದಾಗಿ ನೌಸೀರ್ ಶಾ ಘೋಷಿಸಿದ್ದಾರೆ. ಬೀದಿ ಬದಿಯಲ್ಲಿನ ಬುದುಕು ಅಂತ್ಯಗೊಳಿಸಿದ ಅಸ್ಮಾ ಶೇಕ್ ಕುಟುಂಬ ಇದೀಗ ಮುಂಬೈನ ಅಪಾರ್ಟ್‌ಮೆಂಟ್‌ಗೆ ಸ್ಥಳಾಂತರವಾಗಿದ್ದಾರೆ. ನನ್ನ ಕನಸು ಇಷ್ಟೇ ಬೇಗ ನನಸಾಗುತ್ತೆ ಅನ್ನೋದನ್ನು ಊಹಿಸಿರಲಿಲ್ಲ. ನನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ನನ್ನ ನಮನ ಎಂದಿದ್ದಾಳೆ.
 

click me!