
ಕೋಲ್ಕತಾ(ಸೆ.03) ತೃಣಮೂಲ ಕಾಂಗ್ರೆಸ್ ಸಂಸದೆ, ಬಂಗಾಳಿ ನಟಿ ನುಸ್ರತ್ ಜಹಾನ್ ಗಂಡು ಮಗುವಿನ ತಾಯಿಯಾದ ಸಂತಸದಲ್ಲಿದ್ದಾರೆ. ಇದರ ಜೊತೆಗೆ ಮಗುವಿನ ತಂದೆ ಯಾರು ಅನ್ನೋ ಪ್ರಶ್ನೆ ಇನ್ನಿಲ್ಲದಂತೆ ಕಾಡುತ್ತಿದೆ. ಮಗುವಿನ ತಂದೆ ಯಾರು ಎಂದು ಸಾಮಾಜಿಕ ಜಾಲತಾಣದಲ್ಲಿ ನುಸ್ರತ್ ಪ್ರಶ್ನೆಗಳ ಸುರಿಮಳೆ ಎದುರಿಸಿದ್ದರು. ಇದೀಗ ಸಾಮಾಜಿಕ ಜಾಲತಾಣದ ಮೂಲಕವೇ ಕುತೂಹಲಕಾರಿ ಉತ್ತರ ನೀಡಿದ್ದಾರೆ.
ಬಾಯ್‌ಫ್ರೆಂಡ್ ಯಶ್ ಮಡಿಲಲ್ಲಿ ಸಂಸದೆ ನುಸ್ರತ್ ಮಗು, ನೆಟ್ಟಿಗರ ಪ್ರಶ್ನೆಗೆ ನಟಿ ದಂಗು!
ನುಸ್ರತ್ ಜಹಾನ್ ಹಾಗೂ ನಿಖಿಲ್ ಜೈನ್ ವಿವಾಹಿಕ ಸಂಬಂಧ ಕಡಿದ ಬಳಿಕ ಏಕಾಂಗಿಯಾಗಿದ್ದ ನುಸ್ರತ್ ಜೊತೆ ನಟ ಯಶ್ ದಾಪ್ ಗುಪ್ತ ಹೆಸರು ಕೇಳಿಬಂದಿತ್ತು. ಇದರ ನಡುವೆ ಮಗುವಿಗೆ ಜನ್ಮ ನೀಡಿ ನುಸ್ರತ್ ತಂದೆ ಯಾರು ಅನ್ನೋ ಪ್ರಶ್ನೆ ಎದುರಿಸಬೇಕಾಯಿತು. ಇದೀಗ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಾಕಿದ್ದಾರೆ. ಈ ಫೋಟೋದಲ್ಲಿ ತನ್ನ ಪತಿ ಯಾರೆಂದು ಬಹಿರಂಗಪಡಿಸಿಲ್ಲ. ಬದಲಾಗಿ, ಮತ್ತೆ ಗೌಪ್ಯತೆ ಕಾಪಾಡಿಕೊಂಡಿದ್ದಾರೆ.
ತನ್ನ ಫೋಟೋ ಪೋಸ್ಟ್ ಮಾಡಿರುವ ನುಸ್ರತ್ ಜಹಾನ್, ಜನರಿಂದ ಸಲಹೆ ತೆಗೆದುಕೊಳ್ಳುವುದಿಲ್ಲ ಎಂದಾದ ಮೇಲೆ ಟೀಕೆಗಳನ್ನು ಸ್ವೀಕರಿಸುವ ಅಗತ್ಯವಿಲ್ಲ. ಫೋಟೋ ಕೃಪೆ ತಂದೆ ಎಂದು ಬರೆದಿದ್ದಾರೆ. ಈ ಮೂಲಕ ಮತ್ತೆ ತನ್ನ ಪತಿ ವಿಚಾರ ಗೌಪ್ಯವಾಗಿಟ್ಟಿದ್ದಾರೆ.
ಗಂಡು ಮಗುವಿಗೆ ಜನ್ಮ ನೀಡಿದ ನಟಿ: ಅಮ್ಮನಾದ TMC ಸಂಸದೆ ನುಸ್ರತ್
ತಾಯಿಗೆ ತನ್ನ ಮಗುವಿನ ತಂದೆಯ ಹೆಸರನ್ನು ಗೌಪ್ಯವಾಗಿಡುವ ಅಥವಾ ಬಹಿರಂಗಪಡಿಸುವ ಸ್ವಾತಂತ್ರ್ಯವಿದೆ. ಅದರಲ್ಲು ಮಹಿಳೆಗೆ ತನ್ನ ಮಗುವಿನ ತಂದೆ ವಿಚಾರವನ್ನು ಗೌಪ್ಯವಾಡುವ ಹಕ್ಕಿದೆ. ಇದನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ತಂದೆ ಯಾರು ಅನ್ನೋ ಪ್ರಶ್ನೆಗೆ ನುಸ್ರತ್ ಉತ್ತರ ಕೊಡಬೇಕಿಲ್ಲ ಎಂದು ಬಂಗಾಳಿ ಚಿತ್ರ ನಿರ್ದೇಶಕಿ ಅನಿದಿಂತಾ ಸರ್ಬದಿಕಾರಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ