Breaking ಮಧ್ಯ ಪ್ರದೇಶದಲ್ಲಿ ತರಬೇತಿ ವಿಮಾನ ಪತನ, ಮಹಿಳಾ ಪೈಲೆಟ್ ನಾಪತ್ತೆ!

By Suvarna NewsFirst Published Mar 18, 2023, 8:51 PM IST
Highlights

ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿ ಭಾರತದ ತರಬೇತಿ ವಿಮಾನ ಪತನಗೊಂಡಿದೆ. 40 ಕಿಲೋಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಇದೀಗ  ವಿಮಾನದಲ್ಲಿದ್ದ ಮಹಿಲಾ ತರಬೇತಿ ಪೈಲೆಟ್‌ಗಾಗಿ ಶೋಧಕಾರ್ಯ ಆರಂಭಗೊಂಡಿತು.

ಭೋಪಾಲ್(ಮಾ.18): ಇಬ್ಬರು ತರಬೇತಿ ಪೈಲೆಟ್ ಹೊತ್ತು ಸಾಗಿದ ತರಬೇತಿ ವಿಮಾನ ಮಧ್ಯಪ್ರೇದಶದ ಬಾಲಘಟ ಜಿಲ್ಲೆಯ ಪರ್ವತ ಪ್ರದೇಶದಲ್ಲಿ ಪತನಗೊಂಡಿದೆ. ಓರ್ವ ಪೈಲೆಟ್ ಮೃತದೇಹ ಪತ್ತೆಯಾಗಿದೆ. ಆದರೆ ವಿಮಾನದಲ್ಲಿದ್ದ ಮಹಿಳಾ ತರಬೇತಿ ಪೈಲೆಟ್‌ಗಾಗಿ ಶೋಧ ಕಾರ್ಯ ಆರಂಭಗೊಡಿದೆ.ಭೀಕರ ಅಪಘಾತದಲ್ಲಿ ವಿಮಾನ ಸಂಪೂರ್ಣ ಹೊತ್ತಿ ಉರಿದಿದೆ. ಘಟನಾ ಸ್ಥಳದಿಂದ 40 ಕಿಲೋಮೀಟರ್ ದೂರದಲ್ಲಿ ಪುರುಷ ಪೈಲೆಟ್ ಮೃತದೇಹ ಪತ್ತೆಯಾಗಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ.

ಮಹಾರಾಷ್ಟ್ರ ಗೊಂಡಾ ಜಿಲ್ಲೆಯ ಬಿರ್ಸಿ ವಿಮಾನ ನಿಲ್ದಾಣದ ತರಬೇತಿ ವಿಮಾನ ಇದಾಗಿದೆ. ಅನುಭವಿ ಪುರುಷ ಪೈಲೆಟ್ ಹಾಗೂ ತರಬೇತಿ ಪಡೆಯುತ್ತಿದ್ದ ಮಹಿಳಾ ಪೈಲೆಟ್ ಈ ವಿಮಾನದಲ್ಲಿದ್ದರು. ಬುಕ್ಕುಟೋಲಾದಲ್ಲಿರುವ ದಟ್ಟ ಕಾಡಿನ ನಡುವೆ ವಿಮಾನ ಅಪಘಾತಗೊಂಡಿದೆ. ಘಟನಾ ಸ್ಥಳ ಕಿರನಪುರ್ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡಲಿದೆ. ವಿಮಾನ ಪತನದ ಸದ್ದುಕೇಳಿಸುತ್ತಿದ್ದಂತೆ ಕಾಡಂಚಿನಲ್ಲಿದ್ದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದಾರೆ. ಇದೇ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

 

Madhya Pradesh: ಪತನಗೊಂಡ ಯುದ್ಧ ವಿಮಾನದ ಬ್ಲಾಕ್‌ಬಾಕ್ಸ್‌ ಪತ್ತೆ

ವಿಮಾನ ಪತನಕ್ಕೆ ಕಾರಣಗಳು ಸ್ಪಷ್ಟವಾಗಿಲ್ಲ. ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಇತ್ತ ನಾಪತ್ತೆಯಾಗಿರುವ ಮಹಿಳಾ ಪೈಲೆಟ್‌ಗಾಗಿ ಶೋಧ ಕಾರ್ಯ ಆರಂಭಗೊಂಡಿದೆ. ಇದೇ ಕಿರನಪುರ ಪ್ರದೇಶಕ್ಕೆ ಮಾರ್ಚ್ 20 ರಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಸರ್ಕಾರಿ ಕಾರ್ಯಕ್ರಮಕ್ಕಾಗಿ ಆಗಮಿಸಲಿದ್ದಾರೆ. ಕೆಲ ಯೋಜನೆಗಳ ಉದ್ಘಾಟನೆ ಮಾಡಲಿದ್ದಾರೆ. ಇದೇ ಪ್ರದೇಶದ ಸನಿಹದಲ್ಲಿರುವ ಕಾಡಿನಲ್ಲಿ ಭೀಕರ ಅಪಘಾತ ಸಂಭವಿಸಿದೆ.

ಮಧ್ಯಪ್ರೇದಶದಲ್ಲಿ ತರಬೇತಿ ವಿಮಾನ ಪತನ ಪ್ರಕರಣ ಹೆಚ್ಚಾಗುತ್ತಿದೆ. ಈ ವರ್ಷದ ಆರಂಭದಲ್ಲಿ ರೇವಾ ಜಿಲ್ಲೆಯಲ್ಲಿ ತರಬೇತಿ ವಿಮಾನ ಪತನಗೊಂಡಿತ್ತು.  ಮಧ್ಯಪ್ರದೇಶದ ರೇವಾ ಜಿಲ್ಲೆಯ ಚೋರ್‌ಹಟ್ಟದಲ್ಲಿ ಖಾಸಗಿ ತರಬೇತಿ ವಿಮಾನ ಪತನಗೊಂಡು ಪೈಲಟ್‌ ಕ್ಯಾ ವಿಮಲ್‌ ಕುಮಾರ್‌ (53) ಸ್ಥಳದಲ್ಲೇ ಸಾವನ್ನಪ್ಪಿದ್ದಾರು. ಇನ್ನೊಬ್ಬ ತರಬೇತಿ ಪೈಲಟ್‌ ಸೋನು ಯಾದವ್‌ (23) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆರಾತ್ರಿ 11:30ರ ವೇಳೆಗೆ ಸಂಭವಿಸಿದ್ದು, ವಿಮಾನ ಇಳಿಸುವ ವೇಳೆ ದಟ್ಟಮಂಜು ಕವಿದಿದ್ದ ಕಾರಣ ಹಲವು ಬಾರಿ ಸುತ್ತಿ ನಂತರ ದೇಗುಲದ ಗೋಪುರಕ್ಕೆ ಡಿಕ್ಕಿ ಹೊಡೆದಿದೆ. ‘ಫಾಲ್ಕನ್‌ ಏವಿಯೇಶನ್‌ ಅಕಾಡೆಮಿ’ಗೆ ಸೇರಿದ್ದ ಸೆಸ್ನಾ ವಿಮಾನವನ್ನು ಇವರು ಚಲಾಯಿಸುತ್ತಿದ್ದರು. ಈ ಬಗ್ಗೆ ತನಿಖೆ ಮಾಡಲಾಗುವುದು ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ ಮಿಶ್ರಾ ಹೇಳಿದ್ದಾರೆ.

ಮಧ್ಯ ಪ್ರದೇಶದ ಮೊರೆನಾ ಬಳಿ 2 ಯುದ್ಧ ವಿಮಾನ ಪತನ; ಓರ್ವ ಪೈಲಟ್‌ ಸಾವು

ಮಿಗ್‌ 29ಕೆ ಯುದ್ಧ ವಿಮಾನ ಪತನ: ಅಪಾಯದಿಂದ ಪೈಲಟ್‌ ಪಾರು
ಮಿಗ್‌ 29ಕೆ ಯುದ್ಧ ವಿಮಾನ ತಾಂತ್ರಿಕ ದೋಷದ ಹಿನ್ನಲೆಯಲ್ಲಿ ಗೋವಾ ಬಳಿ ಪತನಗೊಂಡಿದೆ. ಆದರೆ ಪೈಲಟ್‌ ಅಪಾಯದಿಂದ ಪಾರಾಗಿದ್ದಾರೆ.ಎಂದಿನಂತೆ ಹಾರಾಟ ಪ್ರಾರಂಭಿಸಿದ ಮಿಗ್‌ ವಿಮಾನ ತನ್ನ ಬೇಸ್‌ಗೆ ಮರಳುವ ವೇಳೆ ಗೋವಾ ಬಳಿ ತಾಂತ್ರಿಕ ದೋಷ ಉಂಟಾಗಿ ಪತನಗೊಂಡಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲು ನೌಕಾಪಡೆ ತನಿಖಾ ಸಮಿತಿ ರಚಿಸಿದೆ.

click me!