
ನವದೆಹಲಿ (ಮೇ.28): ಕೊರೋನಾ ಸೋಂಕಿತರಿಗೆ ಇತ್ತೀಚೆಗಷ್ಟೇ ಭಾರತದಲ್ಲಿ ಬಿಡುಗಡೆಯಾದ ಆ್ಯಂಟಿಬಾಡಿ ಕಾಕ್‌ಟೇಲ್ ಔಷಧ ಭಾರೀ ಪರಿಣಾಮಕಾರಿಯೆಂದು ಸಾಬೀತಾಗಿದೆ.
ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ದಾಖಲಾಗಿದ್ದ 84 ವರ್ಷದ ಮೊಹಬ್ಬತ್ ಸಿಂಗ್ ಎಂಬ ಸೋಂಕಿತರೊಬ್ಬರಿಗೆ ಅಮೆರಿಕದ ರೋಚಿಸ್ ಕಂಪನಿ ಅಭಿವೃದ್ಧಿಪಡಿಸಿರುವ ಈ ಔಷಧವನ್ನು ಮಂಗಳವಾರ ನೀಡಲಾಗಿತ್ತು. ಅದಾದ 2 ದಿನದಲ್ಲಿ ಅವರು ಚೇತರಿಸಿಕೊಂಡಿದ್ದು, ಅವರನ್ನು ಬುಧವಾರವೇ ಬಿಡುಗಡೆ ಮಾಡಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಈ ಆ್ಯಂಟಿಬಾಡಿ ಕಾಕ್‌ಟೇಲ್ ಔಷಧದ ಪ್ರತಿ ಪ್ಯಾಕ್ 1200 ಎಂಜಿಯದ್ದಾಗಿರಲಿದೆ. ಇದರಲ್ಲಿ 600 ಎಂಜಿ ಕ್ಯಾಸಿರಿವಿಮ್ಯಾಬ್ ಮತ್ತು 600 ಎಂಜಿಯಷ್ಟುಇಮ್‌ಡೆವಿಮ್ಯಾಬ್ ಅಂಶಗಳು ಇರುತ್ತದೆ. ಒಂದು ಡೋಸ್‌ನ ಈ ಔಷಧಕ್ಕೆ 59750 ರು. ದರ ನಿಗದಿ ಮಾಡಲಾಗಿದೆ.
ಡೊನಾಲ್ಡ್ ಟ್ರಂಪ್‌ಗೆ ನೀಡಿದ್ದ ಕೊರೋನಾ ಔಷಧ ಇದೀಗ ಭಾರತದಲ್ಲಿ: ದರ 59,750 ರು.! ..
ಯಾರಿಗೆ ಲಾಭ?: ಸೋಂಕಿನ ಅತ್ಯಂತ ಅಪಾಯ ಇರುವ ವ್ಯಕ್ತಿಗಳಿಗೆ, ಪರಿಸ್ಥಿತಿ ಗಂಭೀರವಾಗುವ ಮೊದಲೇ ನೀಡಿದರೆ, ಅವರು ಆಸ್ಪತ್ರೆಗೆ ದಾಖಲಾಗುವ ಮತ್ತು ಸಾವನ್ನಪ್ಪುವ ಪ್ರಮಾಣ ಶೇ.70ರಷ್ಟುಇಳಿಯುತ್ತದೆ. ಅವರ ಚೇತರಿಸಿಕೊಳ್ಳಲು ಬೇಕಾಗುವ ಸಮಯ 4 ದಿನಗಳಷ್ಟುಕಡಿಮೆಯಾಗುತ್ತದೆ. 12 ವರ್ಷ ಮೇಲ್ಪಟ್ಟವರಿಗೆ ಇದನ್ನು ನೀಡಬಹುದು ಇತ್ತೀಚೆಗೆ ಕಂಪನಿ ಹೇಳಿಕೊಂಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ