ಅವರಪ್ಪನಿಗೂ ಬಂಧಿಸುವ ತಾಕತ್ತಿಲ್ಲ: ರಾಮ್‌ದೇವ್ ಹೊಸ ಬಾಂಬ್!

Published : May 27, 2021, 08:28 PM ISTUpdated : May 27, 2021, 08:29 PM IST
ಅವರಪ್ಪನಿಗೂ ಬಂಧಿಸುವ ತಾಕತ್ತಿಲ್ಲ: ರಾಮ್‌ದೇವ್ ಹೊಸ ಬಾಂಬ್!

ಸಾರಾಂಶ

ಕೊರೋನಾ ನಡುವೆ ಅಲೋಪತಿ-ಆರ್ಯುವೇದಾ ಪದ್ದತಿ ಜಟಾಪಟಿ ನನ್ನ ಬಂಧಿಸುವ ತಾಖತ್ತು ಅವರಪ್ಪನಿಗೂ ಇಲ್ಲ ಎಂದು ಬಾಂಬ್ ಸಿಡಿಸಿದ ಯೋಗ ಗುರು ಆಲೋಪತಿ ಮೂರ್ಖ ಪದ್ಧತಿ ಎಂದ ರಾಮ್‌ದೇವ್ ವಿರುದ್ಧ IMA ಮೋದಿಗೆ ಪತ್ರ  

ನವದೆಹಲಿ(ಮೇ.27): ಕೊರೋನಾ ವೈರಸ್ ಚಿಕಿತ್ಸೆ ಸವಾಲಾಗಿ ಪರಿಣಿಮಿಸುತ್ತಿದೆ. ಇದರ ನಡುವೆ ಚಿಕಿತ್ಸೆ ಮಾರ್ಗದ ಕುರಿತು ಯುದ್ಧವೇ ನಡೆಯುತ್ತಿದೆ. ಯೋಗ ಗುರು ಬಾಬಾ ರಾಮ್‌ದೇವ್ ಆಲೋಪತಿ ಪದ್ಧತಿಯನ್ನೇ ಅಣಕಿಸಿದ್ದಾರೆ. ಅಲೋಪತಿ ಮೂರ್ಖಪದ್ದತಿ ಎಂದಿದ್ದಾರೆ. ಬಾಬಾ ಹೇಳಿಕೆಗೆ ಭಾರತೀಯ ಮೆಡಿಕಲ್ ಅಸೋಸಿಯೇಶನ್(IMA) 1,000 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹಾಗೂ ಪ್ರಧಾನಿ ಮೋದಿಗೆ ಪತ್ರ ಬರೆದಿದೆ. ಇದರ ಬೆನ್ನಲ್ಲೇ ರಾಮ್‌ದೇವ್ ಮತ್ತೊಂದು ಬಾಂಬ್ ಸಿಡಿಸಿದ್ದು, ನನ್ನ ಬಂಧಿಸುವ ತಾಖತ್ತು ಯಾರಿಗೂ ಇಲ್ಲ ಎಂದಿದ್ದಾರೆ.

ಬಾಬಾ ರಾಮ್‍ದೇವ್‌ಗೆ 1,000 ಕೋಟಿ ರೂ. ಮಾನನಷ್ಟ ನೋಟಿಸ್: ಕ್ಷಮೆ ಕೇಳಿದ್ರೆ ಬಚಾವ್!

ಮಾನನಷ್ಟ ಮೊಕದ್ದಮೆ, ಕೇಸ್, ಬಂಧಿಸುವಂತೆ ಪತ್ರಕ್ಕೆ ಬೆದರುವುದಿಲ್ಲ. ನನ್ನ ಬಂಧಿಸುವು ತಾಖತ್ತು ಯಾರಿಗೂ ಇಲ್ಲ. ಎಲ್ಲರೂ ಸುಮ್ಮನೆ ಸದ್ದು ಮಾತ್ರ ಮಾಡುತ್ತಾರೆ ಎಂದು ರಾಮ್‌ದೇವ್ ಹೇಳಿದ್ದಾರೆ.  ಇದೇ ವೇಳೆ ರಾಮ್‌ದೇವ್ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಅರೆಸ್ಟ್, ಗಿರಫ್ತಾರ್ ಸೇರಿದಂತೆ ಹಲವು ಹ್ಯಾಶ್‌ಟ್ಯಾಗ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೆಲವರು ಟ್ರೆಂಡ್ ಸೃಷ್ಟಿಸಿ ಶಬ್ದ ಮಾಡುತ್ತಾರೆ. ಅವರಿಂದ ಅಷ್ಟೇ ಸಾಧ್ಯ ಎಂದಿದ್ದಾರೆ.

 

ಕ್ಷಮೆ ಯಾಚಿಸಿದ್ದ 24 ಗಂಟೆಯೊಳಗೇ ಮತ್ತೆ 25 ಪ್ರಶ್ನೆ ಎಸೆದ ಬಾಬಾ ರಾಮ್‌ದೇವ್!

ಈ ಮೂಲಕ ಕ್ಷಮೆ ಯಾಚಿಸುವಂತೆ ಖಡಕ್ ಎಚ್ಚರಿ ಇದ್ದರೂ,  ಕ್ಷಮೆ ಕೇಳುವ ಪ್ರಮೇಯ ರಾಮ್‌ದೇವ್ ಮಾತುಗಳಲ್ಲಿ ಕಾಣಿಸುತ್ತಿಲ್ಲ.  IMA ಅಲೋಪತಿ ಮೂರ್ಖತನದ ಪದ್ಧತಿ ಹೇಳಿಕೆಗೆ ಭೇಷರತ್ ಕ್ಷಮೇ ಕೇಳುವಂತೆ ಸೂಚಿಸಿತ್ತು. ಇದಕ್ಕಾಗಿ 15 ದಿನಗಳ ಗಡುವು ನೀಡಿತ್ತು. ಆದರೆ ರಾಮ್‌ದೇವ್ ಈ ಎಚ್ಚರಿಕೆ ಬೆನ್ನಲ್ಲೇ ಹೊಸ ಬಾಂಬ್ ಸಿಡಿಸಿ ಅಲೋಪತಿ ಕ್ಷೇತ್ರದ ನಿದ್ದೆಗೆಡಿಸಿದ್ದಾರೆ.

ಕೊರೋನಾ ವೈರಸ್ ಚಿಕಿತ್ಸೆಗೆ ಅಲೋಪತಿ ಬಳೆಕೆಯಿಂದ ಏನಾಗಿದೆ. ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಲಸಿಕೆ ಪಡೆದ 10 ಸಾವಿರಕ್ಕೂ ಹೆಚ್ಚು ಮಂದಿ ವೈದ್ಯರು ಸಾವನ್ನಪ್ಪಿದ್ದಾರೆ. ಪ್ರಯೋಜನವಿಲ್ಲದ ಅಲೋಪತಿಯಿಂದ ಮೂರ್ಖತನ ಪದ್ಧತಿ ಎಂದು ರಾಮ್‌ದೇವ್ ಹೇಳಿದ್ದರು. ಈ ವಿಡಿಯೋ ಭಾರಿ ವೈರಲ್ ಆಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್