ರೈಲಿನ ಅಪ್ಪರ್ ಬರ್ತ್‌ನಲ್ಲಿ ಪುಟ್ಟ ಬಾಲಕನ ಸಂಗೀತಾ ರಸಮಂಜರಿಗೆ ಪಯಣಿಗರು ಫಿದಾ

Published : Dec 22, 2022, 04:21 PM ISTUpdated : Dec 22, 2022, 04:22 PM IST
ರೈಲಿನ ಅಪ್ಪರ್ ಬರ್ತ್‌ನಲ್ಲಿ ಪುಟ್ಟ ಬಾಲಕನ ಸಂಗೀತಾ ರಸಮಂಜರಿಗೆ ಪಯಣಿಗರು ಫಿದಾ

ಸಾರಾಂಶ

ರೈಲಿನ ಅಪ್ಪರ್ ಬರ್ತ್‌ನಲ್ಲಿ ಕುಳಿತಿದ್ದ 8 ವರ್ಷದ ಬಾಲಕನ ಶಾಸ್ತ್ರೀಯ ಸಂಗೀತಾದ ಮೋಡಿಗೆ ಆ ಬೋಗಿಯಲ್ಲಿದ್ದ ಪ್ರಯಾಣಿಕರೆಲ್ಲರೂ ಫಿದಾ ಆಗಿದ್ದಾರೆ. 8 ವರ್ಷದ ಚೆನ್ನೈ ಮೂಲದ ಬಾಲಕ ಸೂರ್ಯನಾರಾಯಣ ತನ್ನ ಹಾಡಿನಿಂದ ಬೋಗಿಯಲ್ಲಿದ್ದವರನ್ನು ಮೋಡಿ ಮಾಡಿದ್ದಾನೆ.

ಚೆನ್ನೈ: ಇದುವರೆಗೆ ರೈಲಿನಲ್ಲಿ ಸೀಟಿಗಾಗಿ ಕಿತ್ತಾಡುವ ವಿಡಿಯೋಗಳನ್ನು ನೀವು ನೋಡಿದ್ದೀರಿ. ಆದರೆ ಈಗ ರೈಲೊಂದರಲ್ಲಿ ಪುಟ್ಟ ಬಾಲಕ ಭಾವಪರವಶನಾಗಿ ಹಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಹ ಪ್ರಯಾಣಿಕರು ಒಳ್ಳೆಯ ಮನಸ್ಥಿತಿಯವರಾದರೆ, ನಿಮಗೆ ಒಳ್ಳೆಯ ಕಂಪನಿ ನೀಡುವವರಾದರೆ ರೈಲು ಪ್ರಯಾಣ ಎಷ್ಟೊಂದು ಸೊಗಸಾಗಿರುತ್ತದೆ ಎಂದು ಹೇಳಲಾಗದು. ಅದೇ ರೀತಿ ಇಲ್ಲಿ ಸಹ ಪ್ರಯಾಣಿಕನಾಗಿ ಸಿಕ್ಕ ಪುಟ್ಟ ಬಾಲಕನ ಸಂಗೀತಾ ರಸಮಂಜರಿಗೆ ಆತನ ಕಂಪಾರ್ಟ್‌ಮೆಂಟ್‌ನಲ್ಲಿದ್ದ ಪ್ರಯಾಣಿಕರೇ ಫುಲ್ ಫಿದಾ ಆಗಿದ್ದಾರೆ. 

ರೈಲಿನ ಅಪ್ಪರ್ ಬರ್ತ್‌ನಲ್ಲಿ ಕುಳಿತಿದ್ದ 8 ವರ್ಷದ ಬಾಲಕನ ಶಾಸ್ತ್ರೀಯ ಸಂಗೀತಾದ ಮೋಡಿಗೆ ಆ ಬೋಗಿಯಲ್ಲಿದ್ದ ಪ್ರಯಾಣಿಕರೆಲ್ಲರೂ ಫಿದಾ ಆಗಿದ್ದಾರೆ. 8 ವರ್ಷದ ಚೆನ್ನೈ ಮೂಲದ ಬಾಲಕ ಸೂರ್ಯನಾರಾಯಣ ತನ್ನ ಹಾಡಿನಿಂದ ಬೋಗಿಯಲ್ಲಿದ್ದವರನ್ನು ಮೋಡಿ ಮಾಡಿದ್ದಾನೆ. ಈ ಬೋಗಿಯಲ್ಲಿದ್ದವರೆಲ್ಲರೂ ವಾರಾಣಾಸಿಯಲ್ಲಿ ನಡೆದ ಕಾಶಿ ತಮಿಳು ಸಂಗಂನ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದರು. ನೀವು ಮ್ಯೂಸಿಕ್ ಪ್ರೇಮಿಗಳಾಗಿದ್ದರೆ, ಈ ಪುಟ್ಟ ಬಾಲಕನ ಕಂಠಸಿರಿಗೆ ನೀವು ಮನಸೋಲುವುದು ಮಾತ್ರ ಗ್ಯಾರಂಟಿ. ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಸಂಗೀತಾ ವಾರಿಯರ್ (Sangitha Varier) ಎಂಬ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು, 2 ನಿಮಿಷಗಳ ಈ ವಿಡಿಯೋವನ್ನು ಒಂದು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಇತ್ತ ಬಾಲಕನ ಸಂಗೀತಾ ಪಾಂಡಿತ್ಯಕ್ಕೆ ಅನೇಕರು ಚಪ್ಪಾಳೆ ತಟ್ಟಿದ್ದಾರೆ. ಅನೇಕರಿಗೆ ಈ ಸಂಗೀತಾ ಹೃದಯಕ್ಕೆ ಹತ್ತಿರವಾಗಿದೆ.

ರೈಲಿನ ಅಪ್ಪರ್ ಬರ್ತ್‌ನಲ್ಲಿ ಶಾಸ್ತ್ರೀಯ ಸಂಗೀತಾ (classical concert) ರಸಮಂಜರಿ. ಚೆನ್ನೈನ ಸೂರ್ಯನಾರಾಯಣ (Sooryanarayanan), ಸಂಗೀತಾದ ಭಾವವನ್ನು ನೋಡಿ, ಮಾತುಗಳೇ ಬರುತ್ತಿಲ್ಲ ಎಂದು ಈ ವಿಡಿಯೋ ಪೋಸ್ಟ್ ಮಾಡಿ ಬರೆಯಲಾಗಿದೆ. ಆತ ಏನು ಹಾಡಿದ ಎಂದು ಅರ್ಥವಾಗಲಿಲ್ಲ. ಆದರೆ ಆತನಲ್ಲಿ ದೈವಿಕ ಭಾವವಿತ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಕಾಶಿ ತಮಿಳು ಸಂಗಮಮ್ (Kashi Tamil Sangamam) ಅನ್ನು ಪ್ರಧಾನಿ ನರೇಂದ್ರ ಮೋದಿ ನವಂಬರ್ 19 ರಂದು ವಾರಾಣಾಸಿಯಲ್ಲಿ ಉದ್ಘಾಟನೆ ಮಾಡಿದ್ದರು. ಉತ್ತರಪ್ರದೇಶದ ವಾರಣಾಸಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾಶಿ (Kashi) ಹಾಗೂ ತಮಿಳುನಾಡಿನ (Tamil Nadu) ನಡುವೆ ಇರುವ ಪುರಾತನ ಬಾಂಧವ್ಯದ ಸಂಭ್ರಮಾಚರಣೆಯ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನವಂಬರ್ 16 ರಿಂದ ಆರಂಭವಾದ ಈ ಕಾರ್ಯಕ್ರಮ ಡಿಸೆಂಬರ್ 16 ರಂದು ಅಂತ್ಯಗೊಂಡಿತ್ತು. 

ಈಗ ಪ್ರಯಾಣಿಸಿ, ನಂತರ ಪಾವತಿಸಿ;ಟಿಕೆಟ್ ಗೆ ಹಣ ನೀಡದೆ ರೈಲು ಪ್ರಯಾಣ ಸಾಧ್ಯ!

 

ಉಚಿತ ರೈಲು ಪ್ರಯಾಣಕ್ಕೆ ಮುಗಿಬಿದ್ದ ಜನ: ಐಷಾರಾಮಿ ಸೌಕರ್ಯಕ್ಕೆ ಫಿದಾ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!