ಕೇಂದ್ರ ಗೃಹ ಸಚಿವ Amit Shah ನಿವಾಸದಲ್ಲಿ ಕಾಣಿಸಿಕೊಂಡ 5 ಅಡಿ ಉದ್ದದ ಹಾವು..!

Published : Oct 15, 2022, 11:21 AM IST
ಕೇಂದ್ರ ಗೃಹ ಸಚಿವ Amit Shah ನಿವಾಸದಲ್ಲಿ ಕಾಣಿಸಿಕೊಂಡ 5 ಅಡಿ ಉದ್ದದ ಹಾವು..!

ಸಾರಾಂಶ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದಲ್ಲಿ ಹಾವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಅವರ ನಿವಾಸದ ಆವರಣದಲ್ಲಿ ಕೆಲ ಕಾಲ ಆತಂಕ ಕಾಣಿಸಿಕೊಂಡಿತ್ತು. ನಂತರ 5 ಅಡಿ ಉದ್ದದ ಹಾವನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ. 

ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ ನಿವಾಸದಲ್ಲಿ ಗುರುವಾರ ಹಾವು (Snake)ಕಾಣಿಸಿಕೊಂಡಿದ್ದು, ಈ ಹಿನ್ನೆಲೆ ಅವರ ಮನೆಯ ಆವರಣದಲ್ಲಿ ಕೆಲ ಕಾಲ ಆತಂಕದ ವಾತಾವರಣ ಉಂಟು ಮಾಡಿತ್ತು ಎಂದು ತಿಳಿದುಬಂದಿದೆ.  ಏಷ್ಯಾಟಿಕ್ ವಾಟರ್ ಸ್ನೇಕ್ (Asiatic Water Snake) ಎಂದು ಕರೆಯಲಾಗುವ  ಐದು ಅಡಿ ಉದ್ದದ ಚೆಕ್ಕರ್ಡ್‌ ಕೀಲ್‌ಬ್ಯಾಕ್ (Checkered Keelback) ಎಂಬ ಹಾವು ಕೇಂದ್ರ ಸಚಿವರ ಮನೆಯಲ್ಲಿ ಕಾಣಿಸಿಕೊಂಡಿದ್ದು, ಈ ಹಿನ್ನೆಲೆ ಭದ್ರತಾ (Security) ಸಿಬ್ಬಂದಿ ಕೆಲ ಕಾಲ ಆತಂಕಕ್ಕೀಡಾಗಿದ್ದರು. ನಂತರ, ಅಮಿತ್‌ ಶಾ ನಿವಾಸದಲ್ಲಿ ಹಾವು ಬಂದಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ ನಂತರ ಅದನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ. 

ಭದ್ರತಾ ಸಿಬ್ಬಂದಿ ಕಾವಲು ಕೊಠಡಿಯ ಬಳಿ ವಿಷಕಾರಿಯಲ್ಲದ ಹಾವನ್ನು ಕಂಡು ವನ್ಯಜೀವಿ ರಕ್ಷಣೆ ಮತ್ತು ಸಂರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಎನ್‌ಜಿಒ ವನ್ಯಜೀವಿ ಎಸ್‌ಒಎಸ್‌ಗೆ (SOS) ಮಾಹಿತಿ ನೀಡಿದರು. ನಂತರ, ಮರದ ಫಲಕಗಳ ನಡುವೆ ಆಶ್ರಯ ಪಡೆದಿದ್ದ ಹಾವನ್ನು ಎನ್‌ಜಿಒನ (NGO) ಇಬ್ಬರು ಸದಸ್ಯರ ತಂಡ ರಕ್ಷಿಸಿದೆ.

ಇದನ್ನು ಓದಿ: Ind vs SA: ಗುವಾಹಟಿ ಸ್ಟೇಡಿಯಂನಲ್ಲಿ ಪಂದ್ಯಕ್ಕೆ ಅಡ್ಡಿಪಡಿಸಿದ ಹಾವು!

"ಗುರುವಾರ ಬೆಳಗ್ಗೆ, ನವದೆಹಲಿಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಂಗಲೆಯ ಆವರಣದಲ್ಲಿ ಚೆಕರ್ಡ್ ಕೀಲ್‌ಬ್ಯಾಕ್ ಹಾವು ಬಂದಿರುವುದನ್ನು ನೋಡಿ ಭದ್ರತಾ ಸಿಬ್ಬಂದಿ ಆಘಾತಕ್ಕೊಳಗಾದರು. ಗಾರ್ಡ್ ರೂಮ್ ಬಳಿ ಸರೀಸೃಪವನ್ನು (Reptile) ಗಮನಿಸಿದ ಅವರು ತಕ್ಷಣವೇ 24x7 ಸಹಾಯವಾಣಿ ಸಂಖ್ಯೆಗೆ ವನ್ಯಜೀವಿ SOS ಗೆ ಎಚ್ಚರಿಕೆ ನೀಡಿದರು. ಬಳಿಕ, "ರಕ್ಷಣಾ ಉಪಕರಣಗಳೊಂದಿಗೆ ಸಜ್ಜಾದ ಇಬ್ಬರು ಸದಸ್ಯರ ರಕ್ಷಣಾ ತಂಡವು ಹಾವಿನ ಸಹಾಯಕ್ಕೆ ಧಾವಿಸಿದರು. ಇನ್ನು, ಕಾವಲು ಕೊಠಡಿಯ ಸುತ್ತಲಿನ ಮರದ ಫಲಕಗಳ ನಡುವಿನ ಅಂತರದೊಳಗೆ ಹಾವು ತನ್ನ ದಾರಿ ಮಾಡಿಕೊಂಡು ಇಲ್ಲಿಗೆ ಬಂದಿದೆ" ಎಂದು ವನ್ಯಜೀವಿ SOS ಮಾಹಿತಿ ನೀಡಿದೆ.

ಸರೋವರಗಳು, ನದಿಗಳು ಮತ್ತು ಕೊಳಗಳು, ಚರಂಡಿಗಳು, ಕೃಷಿ ಭೂಮಿಗಳು, ಬಾವಿಗಳು ಮುಂತಾದ ಜಲಮೂಲಗಳಲ್ಲಿ ಚೆಕರ್ಡ್ ಕೀಲ್‌ ಬ್ಯಾಕ್‌ ಹೆಚ್ಚಾಗಿ ಕಂಡುಬರುತ್ತದೆ. ವನ್ಯಜೀವಿ (ರಕ್ಷಣೆ) ಕಾಯಿದೆ, 1972 ರ ಶೆಡ್ಯೂಲ್‌ II ರ ಅಡಿಯಲ್ಲಿ ಈ ಹಾವಿನ ಜಾತಿಗಳನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಹೇಯ್ ಎದ್ದೆಳೋ ಅಂತಿದ್ದಂಗೆ ರಫ್ ಅಂತ ಹೆಡೆಯೇರಿಸಿ ನಿಂತ ನಾಗರಹಾವು

"ಈ ತುರ್ತು ಪರಿಸ್ಥಿತಿಯ ಬಗ್ಗೆ ವನ್ಯಜೀವಿ SOS ಅನ್ನು ಎಚ್ಚರಿಸಿದ್ದಕ್ಕಾಗಿ ಕೇಂದ್ರ ಗೃಹ ಸಚಿವರ ನಿವಾಸದಲ್ಲಿ ಕೆಲಸ ಮಾಡುವ ಭದ್ರತಾ ಸಿಬ್ಬಂದಿಗೆ ನಾವು ಕೃತಜ್ಞರಾಗಿರುತ್ತೇವೆ. ಇದು ಅವರ ಕಡೆಯಿಂದ ಹೆಚ್ಚಿನ ಮಟ್ಟದ ಸಹಾನುಭೂತಿಯನ್ನು ತೋರಿಸುತ್ತದೆ ಮತ್ತು ಇತರರಿಗೆ  ಇದನ್ನು ಅನುಸರಿಸಲು ಮಾದರಿಯಾಗಿದೆ’’ ಎಂದು ಶ್ಲಾಘಿಸಿದ್ದಾರೆ.

ಅಲ್ಲದೆ, ಆಗಾಗ್ಗೆ ನಗರದಲ್ಲಿ ವನ್ಯಜೀವಿಗಳ ದುಃಸ್ಥಿತಿಯನ್ನು ತಳ್ಳಿಹಾಕಲಾಗುತ್ತದೆ. ಏಕೆಂದರೆ ಜನರು ಅವುಗಳನ್ನು ಒಂದು ಉಪದ್ರವವೆಂದು ಪರಿಗಣಿಸುತ್ತಾರೆ" ಎಂದು ವೈಲ್ಡ್‌ಲೈಫ್ ಎಸ್‌ಒಎಸ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಕಾರ್ತಿಕ್ ಸತ್ಯನಾರಾಯಣ್ ಹೇಳಿದ್ದಾರೆ. 

ಇದನ್ನೂ ಓದಿ: ಸ್ಪೇನ್‌ ಪತ್ರಿಕೆಯಲ್ಲಿ Indian Economy ಪ್ರಗತಿ ತೋರಿಸಲು ಹಾವಾಡಿಗನ ಚಿತ್ರ: ಜಾಲತಾಣಗಳಲ್ಲಿ ಟೀಕೆ

ಇನ್ನು, ಈ ಬಾರಿಯ ಮಳೆಗಾಲದಲ್ಲಿ ದೆಹಲಿಯ ವಿವಿಧ ಭಾಗಗಳಿಂದ 70 ಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ. ಹಾವುಗಳು ಮತ್ತು ಇತರ ಕೀಟಗಳು ಮಣ್ಣಿನ ಕೆಳಗೆ ಆಳವಾದ ಬಿಲಗಳಲ್ಲಿ ವಾಸಿಸುತ್ತವೆ. ಹಾವಿನ ದೇಹದ ಉಷ್ಣತೆಯನ್ನು ಅದರ ಸುತ್ತಮುತ್ತಲಿನ ತಾಪಮಾನದಿಂದ ನಿರ್ಧರಿಸಲಾಗುತ್ತದೆ. ಮಣ್ಣು ಅವುಗಳನ್ನು ತೀವ್ರ ಶಾಖ ಮತ್ತು ಶೀತದಿಂದ ರಕ್ಷಿಸುತ್ತದೆ. ಆದರೆ, ಮಳೆಯಾದಾಗ, ಬಿಲಗಳು ನೀರಿನಿಂದ ತುಂಬಿರುತ್ತವೆ. ಈ ಹಿನ್ನೆಲೆ ಮಳೆಯಿಂದ ರಕ್ಷಣೆ ಪಡೆಯಲು ಅಥವಾ ಒಣ ಪ್ರದೇಶದಲ್ಲಿ ಆಶ್ರಯ ಪಡೆಯಲು ಹಾವುಗಳು ಹೊರಕ್ಕೆ ಬರುತ್ತವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?
Indigo Crisis: ಮಗಳಿಗೆ ರಕ್ತ ಸೋರ್ತಿದೆ, ಸ್ಯಾನಿಟರಿ ಪ್ಯಾಡ್​ ಕೊಡಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ತಂದೆಯ ಕಣ್ಣೀರು