Kerala Human Sacrifice Case: ಶ್ರೀದೇವಿ ಎಂದೇಳಿ ಭಗವಾಲ್‌ಗೆ ಗಾಳ ಹಾಕಿದ್ದ ಮಾಂತ್ರಿಕ ರಶೀದ್‌!

Published : Oct 15, 2022, 02:45 AM IST
Kerala Human Sacrifice Case: ಶ್ರೀದೇವಿ ಎಂದೇಳಿ ಭಗವಾಲ್‌ಗೆ ಗಾಳ ಹಾಕಿದ್ದ ಮಾಂತ್ರಿಕ ರಶೀದ್‌!

ಸಾರಾಂಶ

* ಧಾರ್ಮಿಕ ಆಚರಣೆ ಭಾಗವಾಗಿ ಭಗವಾಲ್‌ ಪತ್ನಿ ಜೊತೆ ರಶೀದ್‌ ಸೆಕ್ಸ್‌ * ಹತ್ಯೆಗೀಡಾದ ಪದ್ಮಾಗೂ ಲೈಂಗಿಕ ಕಿರುಕುಳ ನೀಡಿದ್ದ ರಶೀದ್‌, ಲೈಲಾ * ಗುಪ್ತಾಂಗಳಿಗೆ ಚೂರಿ ಇರಿದು ವಿಕೃತಿ ಮೆರೆದಿದ್ದ ಮಂತ್ರವಾದಿ, ಲೈಲಾ

ಹೈದರಾಬಾದ್‌ (ಅ.15): ಕೇರಳ ನರಬಲಿ ಪ್ರಕರಣದ ಪ್ರಮುಖ ಆರೋಪಿ ರಶೀದ್‌ ಅಲಿಯಾಸ್‌ ಶಫಿಯ ಕೃತ್ಯಗಳ ಕುರಿತಾಗಿ ಮತ್ತಷ್ಟು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ‘ಶ್ರೀದೇವಿ’ ಎಂಬ ಮಹಿಳೆಯ ಹೆಸರಿನಲ್ಲಿ ಖಾತೆ ತೆರೆದು ಭಗವಾಲ್‌ಗೆ ಗಾಳ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ತೆರೆದಿದ್ದ ರಶೀದ್‌, ಹೂವುಗಳ ಫೋಟೋಗಳನ್ನು ಡಿ.ಪಿ.ಗಳಾಗಿ ಬಳಕೆ ಮಾಡುತ್ತಿದ್ದ. ಈ ಖಾತೆಯ ಮೂಲಕ ಭಗವಾಲ್‌ ಅವರ ಸಂಪರ್ಕ ಸಾಧಿಸಿ ಬಳಿಕ ತಾನೊಬ್ಬ ಮಾಂತ್ರಿಕ ಎಂಬ ಸತ್ಯವನ್ನು ಹೇಳಿದ್ದ. ಅಲ್ಲದೇ ಭಗವಾಲ್‌ ಅವರ ಕುಟುಂಬದಲ್ಲಾಗುತ್ತಿರುವ ಸಮಸ್ಯೆಗಳನ್ನು ಪೂಜೆ ಮಾಡಿ ಪರಿಹರಿಸುವುದಾಗಿ ಭರವಸೆ ನೀಡಿ, ನರಬಲಿ ನೀಡಲು ಅವರನ್ನು ಒಪ್ಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Kerala Human Sacrifice Case: ಕೊಂದ ನಂತರ ಮಾನವ ಶವದ ಮಾಂಸ ಬೇಯಿಸಿ ತಿಂದ ಆರೋಪಿಗಳು

ಲೈಲಾಳೊಂದಿಗೆ ರಶೀದ್‌ ಸೆಕ್ಸ್‌: ಮಾಂತ್ರಿಕ ರಶೀದ್‌, ಭಗವಾಲ್‌ ಅವರ ಪತ್ನಿ ಲೈಲಾ ಅವರೊಂದಿಗೆ ದೈಹಿಕ ಸಂಪರ್ಕವನ್ನು ಹೊಂದಿದ್ದ. ಅಲ್ಲದೇ ಇದನ್ನೂ ಸಹ ಧಾರ್ಮಿಕ ಆಚರಣೆಯ ಭಾಗ ಎಂದು ಅವರನ್ನು ನಂಬಿಸಿದ್ದ. ಇದನ್ನು ಸ್ವತಂತ್ರ್ಯವಾಗಿ ಸಾಬೀತು ಮಾಡಲು ಪುರಾವೆಗಳನ್ನು ಹುಡುಕುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ.

ಹತ್ಯೆಗೀಡಾದ ಪದ್ಮಾಳಿಗೂ ಲೈಂಗಿಕ ಕಿರುಕುಳ: ನರಬಲಿಯಲ್ಲಿ ಹತ್ಯೆಯಾದ ಇಬ್ಬರು ದುರ್ದೈವಿಗಳಲ್ಲಿ ಒಬ್ಬಳಾದ ಪದ್ಮಳಿಗೂ ರಶೀದ್‌ ಲೈಂಗಿಕ ಕಿರುಕುಳ ನೀಡಿದ್ದ. ರಶೀದ್‌ ಒಬ್ಬ ಸೈಕೋಪಾತ್‌ ಆಗಿದ್ದು, ಕೌರ್ಯದಲ್ಲಿ ಆನಂದವನ್ನು ಕಾಣುವ ಮನೋರೋಗಿಯಾಗಿದ್ದಾನೆ. ಶ್ರೀಮಂತರ ಸಮಸ್ಯೆಗಳನ್ನು ನರಬಲಿ ಮೂಲಕ ಪರಿಹರಿಸುವ ಭರವಸೆ ನೀಡಿ ಆ ಕ್ರೌರ್ಯವನ್ನು ಆನಂದಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

Kerala ನರಬಲಿ ಪ್ರಕರಣ ಆರೋಪಿ ವಿಕೃತ ಕಾಮಿ; ಇನ್ನೂ 19 ಮಹಿಳೆಯರು ಮಿಸ್ಸಿಂಗ್‌

ಗುಪ್ತಾಂಗಗಳಿಗೆ ಚೂರಿ ಇರಿದು ವಿಕೃತಿ: ನರಬಲಿ ನೀಡಲಾದ ಇಬ್ಬರು ಮಹಿಳೆಯರ ಗುಪ್ತಾಂಗಗಳಿಗೆ ಮಾಂತ್ರಿಕ ರಶೀದ್‌ ಚೂರಿಯಿಂದ ಇರಿದಿದ್ದ ಮತ್ತು ಅವರ ಕತ್ತನ್ನು ಸೀಳಿ ಹತ್ಯೆ ಮಾಡಿದ. ಬಳಿಕ ಅವರ ದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿ ಹಾಕಿದ. ಈ ವೇಳೆ ಅವರ ದೇಹದಿಂದ ರಕ್ತ ಹೊರ ಬೀಳುತ್ತಿದ್ದರೆ ಖುಷಿ ಪಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?