ಸ್ಪೇನ್‌ ಪತ್ರಿಕೆಯಲ್ಲಿ Indian Economy ಪ್ರಗತಿ ತೋರಿಸಲು ಹಾವಾಡಿಗನ ಚಿತ್ರ: ಜಾಲತಾಣಗಳಲ್ಲಿ ಟೀಕೆ

Published : Oct 15, 2022, 09:54 AM ISTUpdated : Oct 15, 2022, 10:13 AM IST
ಸ್ಪೇನ್‌ ಪತ್ರಿಕೆಯಲ್ಲಿ Indian Economy ಪ್ರಗತಿ ತೋರಿಸಲು ಹಾವಾಡಿಗನ ಚಿತ್ರ: ಜಾಲತಾಣಗಳಲ್ಲಿ ಟೀಕೆ

ಸಾರಾಂಶ

ಸ್ಪೇನ್‌ ಪತ್ರಿಕೆ  ‘ಲಾ ವ್ಯಾನ್‌ಗಾರ್ಡಿಯಾ ತನ್ನ ಮುಖಪುಟದಲ್ಲಿ’ ಭಾರತದ ಆರ್ಥಿಕ ಪ್ರಗತಿಯನ್ನು ತೋರಿಸಲು ಹಾವಾಡಿಗನ ಕಾರ್ಟೂನ್‌ ಚಿತ್ರವನ್ನು ಅಕ್ಟೋಬರ್‌ 9ರ ಸಂಚಿಕೆಯಲ್ಲಿ  ಬಳಸಿದೆ. ಈ ಚಿತ್ರ ಬಳಕೆ ಈ ಮೂಲಕ ಭಾರತಕ್ಕೆ ಅವಮಾನ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಕಿಡಿ ಕಾರಿದ್ದಾರೆ.

ನವದೆಹಲಿ: ಭಾರತದ ಆರ್ಥಿಕ ಪ್ರಗತಿಯನ್ನು ವರ್ಣಿಸಲು ಸ್ಪೇನಿನ ಪತ್ರಿಕೆಯೊಂದು ದಶಕಗಳ ಹಿಂದೆ ಭಾರತವನ್ನು ಹಾವಾಡಿಗರ ದೇಶ ಎಂದು ವ್ಯಂಗ್ಯವಾಡಲು ಬಳಸುತ್ತಿದ್ದ ಚಿತ್ರವೊಂದನ್ನು ಬಳಸಿರುವುದು ತೀವ್ರ ಟೀಕೆಗೆ ಗುರಿಯಾಗಿದೆ. ಅಕ್ಟೋಬರ್‌ 9ರ ಸಂಚಿಕೆಯ ಮುಖಪುಟದಲ್ಲಿ ‘ಲಾ ವ್ಯಾನ್‌ಗಾರ್ಡಿಯಾ’ ಭಾರತದ ಆರ್ಥಿಕ ಪ್ರಗತಿಯನ್ನು ತೋರಿಸಲು ಹಾವಾಡಿಗನ ಕಾರ್ಟೂನ್‌ ಚಿತ್ರವನ್ನು ಬಳಸಿದೆ. ‘ಭಾರತೀಯ ಆರ್ಥಿಕತೆಯ ಸಮಯ’ (‘The hour of the Indian Economy’) ಎಂಬ ಹೆಸರಿನ ಈ ಲೇಖನದಲ್ಲಿ ಹಾವಾಡಿಗನ ಚಿತ್ರವನ್ನು ಬಳಸಲಾಗಿದೆ. ಈ ಚಿತ್ರ ಬಳಕೆ ಈ ಮೂಲಕ ಭಾರತಕ್ಕೆ ಅವಮಾನ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಕಿಡಿ ಕಾರಿದ್ದಾರೆ. 

ಈ ಸಂಬಂಧ ಪ್ರತಿಕ್ರಿಯೆ ನೀಡಿದ ಬೆಂಗಳೂರು ಸೆಂಟ್ರಲ್‌ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ. ಮೋಹನ್‌, ‘ಭಾರತದ ಆರ್ಥಿಕತೆಯು ಶಕ್ತಿಶಾಲಿಯಾಗಿ ಜಗತ್ತಿನಲ್ಲಿ ಮನ್ನಣೆ ಗಳಿಸುತ್ತಿರುವಾಗ, ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ಭಾರತವನ್ನು ಹಾವಾಡಿಗರಂತೆ ಬಿಂಬಿಸಿದ್ದು ಶುದ್ಧ ಮೂರ್ಖತನ. ವಿದೇಶಿಗರ ಮನಸ್ಥಿತಿಯು ವಸಾಹತುಶಾಹಿಯಿಂದ ಹೊರಬರುವುದು ಒಂದು ಸಂಕೀರ್ಣ ಪ್ರಯತ್ನವಾಗಿದೆ’ ಎಂದಿದ್ದಾರೆ.

ಇದನ್ನು ಓದಿ: IMF on Indian Economy: ಭಾರತದ ಆರ್ಥಿಕ ಪರಿಸ್ಥಿತಿ ಬಗ್ಗೆ ಐಎಂಎಫ್‌ ಮೆಚ್ಚುಗೆ

ಇದೇ ವೇಳೆ ಬೆಂಗಳೂರಿನ ಉದ್ಯಮಿ, ಜಿರೋಧಾ ಸಿಇಒ ನಿಖಿಲ್‌ ಕಾಮತ್‌ ಕೂಡಾ ‘ಭಾರತದ ಪ್ರಗತಿಯನ್ನು ಜಗತ್ತು ಗಮನಿಸುತ್ತಿರುವುದು ಒಳ್ಳೆಯ ಸಂಗತಿ. ಆದರೆ ಭಾರತವನ್ನು ಪ್ರತಿನಿಧಿಸಲು ಹಾವಾಡಿಗನ ಸಾಂಸ್ಕೃತಿಕ ವ್ಯಂಗ್ಯಚಿತ್ರ ಬಳಸಿದ್ದು, ಅಪಮಾನವಾಗಿದೆ. ಇದನ್ನು ತಡೆಯಲು ಏನು ಮಾಡಬಹುದು: ಬಹುಶಃ ಜಾಗತಿಕ ಭಾರತೀಯ ಉತ್ಪನ್ನಗಳು?’ ಎಂದು ಟ್ವೀಟ್‌ ಮಾಡಿದ್ದಾರೆ.

ಅಲ್ಲದೆ, ಲೇಖಕ ರಜತ್ ಸೇಥಿ ಸಹ ಈ ಬಗ್ಗೆ ಟ್ವೀಟ್‌ ಮಾಡಿದ್ದು, ‘'ಭಾರತದ ಆರ್ಥಿಕತೆಯ ಸಮಯ" ಎಂದು ತನ್ನ ಕವರ್ ಪೇಜ್‌ನಲ್ಲಿ ಪ್ರಮುಖ ಸ್ಪ್ಯಾನಿಷ್ ದೈನಿಕ ಲಾ ವ್ಯಾನ್‌ಗಾರ್ಡಿಯಾ ಹೇಳುತ್ತದೆ. ಜಗತ್ತು ಭಾರತದ ಆರ್ಥಿಕ ಪರಾಕ್ರಮವನ್ನು ಗಮನಿಸುತ್ತಿರುವಾಗ, ಭಾರತೀಯ ಹಾವಾಡಿಗರ ಜನಾಂಗೀಯ ವ್ಯಂಗ್ಯಚಿತ್ರವು ಅಡೆತಡೆಯಿಲ್ಲದೆ ಮುಂದುವರಿಯುತ್ತದೆ’’ ಎಂದು ಟೀಕಿಸಿದ್ದಾರೆ. 

ಇದನ್ನೂ ಓದಿ: ಭಾರತದ ಆರ್ಥಿಕ ಬೆಳವಣಿಗೆ ದರ ಪರಿಷ್ಕರಿಸಿದ ವಿಶ್ವಬ್ಯಾಂಕ್, ಇತರ ರಾಷ್ಟ್ರಗಳಿಗಿಂತ ಅತ್ಯಧಿಕ ವೇಗದಲ್ಲಿ ಚೇತರಿಕೆ!

ಈ ಮಧ್ಯೆ, ಇತರ ಟ್ವಿಟ್ಟರ್ ಬಳಕೆದಾರರೂ ಸಹ ಸ್ಪೇನ್‌ ಪತ್ರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೂ, ಕೆಲವರು ಇದು ಸತ್ಯ ಎಂಬಂತೆಯೂ ಬರೆದಿದ್ದಾರೆ.

‘’ಭಾರತವು ಇನ್ನೂ ಅತ್ಯಂತ ಬಡ ದೇಶವಾಗಿದೆ. ಜನಸಂಖ್ಯೆಯ ಅಗ್ರ 10 ಪ್ರತಿಶತವನ್ನು ಬಿಟ್ಟುಬಿಡಿ, ಭಾರತದ ಇತರೆ ಜನರು ಶೋಚನೀಯ ಪರಿಸ್ಥಿತಿಗಳಲ್ಲಿ ವಾಸಿಸುತ್ತಿದ್ದಾರೆ. ಈ ಸಮಯ ಬದಲಾಗುವವರೆಗೆ, ಅಂತಹ ವ್ಯಂಗ್ಯಚಿತ್ರಗಳ ಬಗ್ಗೆ ಕೆಟ್ಟದಾಗಿ ಭಾವಿಸುವುದರಲ್ಲಿ ಅರ್ಥವಿಲ್ಲ. ನಾವು ನಿಜವಾಗಿ ಹೇಗಿದ್ದೇವೆ ಎಂಬುದರ ಮೇಲೆ ಜಗತ್ತು ನಮ್ಮನ್ನು ಹೇಗೆ ಗ್ರಹಿಸುತ್ತದೆ ಎಂದು ಹೆಚ್ಚಾಗಿ ಉದ್ಭವಿಸುತ್ತದೆ" ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Indian Economy: ಸ್ವಾತಂತ್ರ್ಯ ನಂತರದ 75 ವರ್ಷಗಳಲ್ಲಿ ಭಾರತ ಸಾಧಿಸಿದ್ದೇನು? ಸಾಧಿಸಬೇಕಾದ್ದೇನು?

ಹಾಗೂ, "ಇದು ಹೇಗೆ ಅವಮಾನ? ಬಹುಶಃ ಅವರು ಭಾರತವನ್ನು ಹೆಚ್ಚು ನೋಡದಿರುವುದು ನಮ್ಮ ನ್ಯೂನತೆ" ಎಂದು ಇನ್ನೊಬ್ಬ ಬಳಕೆದಾರರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Anand Mahindra: ಭಾರತ ಆರ್ಥಿಕತೆಯಲ್ಲಿ ಬ್ರಿಟನ್‌ ಹಿಂದಿಕ್ಕಿದ್ದು ''ಕರ್ಮ ಸಿದ್ಧಾಂತದ ಫಲ'' ಎಂದ ಉದ್ಯಮಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಶಿಲ್ಪಾ ಶೆಟ್ಟಿ ಅವರ ಎಐ ಫೋಟೋ ತೆಗೆಯಲು ಕೋರ್ಟ್ ಆದೇಶ
ಬಾಂಗ್ಲಾ ಹಿಂದೂ ಹಂತಕರ ಶಿಕ್ಷಿಸಿ : ಭಾರತ ಆಗ್ರಹ