ಸಾವಿನಲ್ಲೂ ಸಾರ್ಥಕತೆ: 11 ಜನರ ಬಾಳಲ್ಲಿ ಬೆಳಕಾದ ಯೋಧ

By Anusha KbFirst Published Jan 20, 2023, 12:22 PM IST
Highlights

ಮೂರು ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಗಳ ಕುಟುಂಬದವರು ಅಂಗಾಂಗ ದಾನ ಮಾಡಿ ತಮ್ಮವರ ಸಾವಿನ ನೋವಿನ ನಡುವೆಯೂ ಅವರ ಜೀವನ ಸಾರ್ಥಕತೆ ಕಾಣಲು ಬಯಸ್ಸಿದ್ದರಿಂದ 11 ಜನರ ಬಾಳಲ್ಲಿ ಬೆಳಕಾಗಿದೆ.

ನವದೆಹಲಿ: ಮೆದುಳು ನಿಷ್ಕ್ರಿಯಗೊಂಡಿದ್ದ ಯೋಧ ಸೇರಿದಂತೆ ಮೂವರ ಅಂಗಾಂಗ ದಾನದಿಂದ 11 ಜನರ ಬಾಳಲ್ಲಿ ಬೆಳಕು ಮೂಡಿದೆ. ಒಟ್ಟು ಮೂರು ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಗಳ ಕುಟುಂಬದವರು ಅಂಗಾಂಗ ದಾನ ಮಾಡಿ ತಮ್ಮವರ ಸಾವಿನ ನೋವಿನ ನಡುವೆಯೂ ಅವರ ಜೀವನ ಸಾರ್ಥಕತೆ ಕಾಣಲು ಬಯಸ್ಸಿದ್ದರಿಂದ ಎರಡು ಅಂಗಾಂಗ ದಾನ ಪ್ರಕ್ರಿಯೆಗಳು ದೆಹಲಿಯ ಆರ್ ಆರ್ ಆಸ್ಪತ್ರೆಯಲ್ಲಿ ಹಾಗೂ ಮತ್ತೊಂದು ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ನಡೆದಿದೆ. 

ಅಂಗಾಂಗಾ ದಾನಿಗಳಲ್ಲಿ ಓರ್ವ ಯುವ ಯೋಧರೂ ಸೇರಿದ್ದಾರೆ. ಕಳೆದ ವರ್ಷ ಡಿಸೆಂಬರ್ 24 ರಂದು ಅಂದರೆ ಕೇವಲ ಒಂದು ತಿಂಗಳ ಹಿಂದಷ್ಟೇ ಈ ಯೋಧ ಸಿಪಾಯಿಯಾಗಿ ತರಬೇತಿ ಮುಗಿಸಿ ಭಾರತೀಯ ಸೇನೆ ಸೇರಿದ್ದರು. ಅವರ ಕುಟುಂಬದವರು ದೇಹದ ಬಹುತೇಕ ಅಂಗಾಂಗಗಳನ್ನು ದಾನ ಮಾಡಲು ಬಯಸಿದ್ದರಿಂದ ಒಟ್ಟು 11 ಜನರಿಗೆ ಇದರಿಂದ ಜೀವದಾನವಾಗಿದೆ.  ಅಪಘಾತಕ್ಕೀಡಾದ 25 ವರ್ಷದ ಯೋಧ ಅಮಿತ್ (Amith) ಅವರ ಮಿದುಳು ನಿಷ್ಕ್ರಿಯಗೊಂಡಿತ್ತು.  ಅಮಿತ್ ತಮ್ಮ ಪೋಷಕರ ಏಕೈಕ ಪುತ್ರನಾಗಿದ್ದರು. ಅಮಿತ್ ಪೋಷಕರು ಹರ್ಯಾಣದ (Haryana) ಜಜ್ಜರ್‌ನಲ್ಲಿ(Jhajjar) ವಾಸವಿದ್ದಾರೆ.

ಅಂಗಾಂಗ ದಾನದಲ್ಲಿ ದೇಶಕ್ಕೇ ಕರ್ನಾಟಕ ನಂ.2: ಪುನೀತ್‌, ಸಂಚಾರಿ ವಿಜಯ್‌ ಪ್ರೇರಣೆ

ನಾವು ಅಮಿತ್ ಬಗ್ಗೆ ಸಾಕಷ್ಟು ಭರವಸೆ ಹೊಂದಿದ್ದೆವು. ಆದರೆ ಆತನ ದಿಢೀರ್ ಅಗಲಿಕೆಯಿಂದ ನಾವು ಭರವಸೆ ಕಳೆದುಕೊಂಡಿದ್ದೇವೆ. ಆತನಿಲ್ಲದೇ ಉಳಿದ ಜೀವನವನ್ನು ಹೇಗೆ ಕಳೆಯುವುದೋ ಗೊತ್ತಾಗುತ್ತಿಲ್ಲ.  ಆದರೂ ಆತನ ಅಂಗಾಂಗ ದಾನದಿಂದ (Organ donation) ಸ್ವಲ್ಪ ಸಮಾಧಾನವಾಗಿದೆ ಎಂದು ಅಮಿತ್ ಪೋಷಕರಾದ ರಮೇಶ್ (Ramesh) ಹೇಳಿದ್ದಾರೆ.  ಅಲ್ಲದೇ ಅಮಿತ್ ಅಂಗಾಂಗ ದಾನ ಪಡೆದ ಎಲ್ಲರಲ್ಲಿ ತನ್ನ ಮಕ್ಕಳನ್ನು ಕಾಣುವುದಾಗಿ  ಹೇಳಿದ್ದಾರೆ.  ಆತನ ಕಿಡ್ನಿ(Kidney), ಹೃದಯ (Heart), ಯಕೃತ್ತುಗಳನ್ನು ಆರ್ ಆರ್ ಆಸ್ಪತ್ರೆಯಲ್ಲಿ ಅಗತ್ಯವಿದ್ದವರಿಗೆ ಕಸಿ ಮಾಡಲಾಗಿದೆ. ಹಾಗೆಯೇ ಮತ್ತೊಂದು ಕಿಡ್ನಿಯನ್ನು ಏಮ್ಸ್‌ನಲ್ಲಿ ಆಸ್ಪತ್ರೆಯಲ್ಲಿದ್ದ ರೋಗಿಯೊಬ್ಬರಿಗೆ ನೀಡಲಾಗಿದೆ. ಹಾಗೆಯೇ ಕಣ್ಣುಗಳನ್ನು ಅಗತ್ಯವಿರುವವರಿಗಾಗಿ ಸಂರಕ್ಷಿಸಿ ಇಡಲಾಗಿದೆ ಎಂದು ರಾಷ್ಟ್ರೀಯ ಅಂಗಾಂಗ ಹಾಗೂ ಟಿಶ್ಯೂ ಕಸಿ ಸಂಸ್ಥೆಯಲ್ಲಿ ಕನ್ಸಲ್ಟೆಂಟ್ ಆಗಿರುವ ಡಾ. ಅರ್ಚನಾ (Archan) ಹೇಳಿದ್ದಾರೆ. 

ಮಗನ ಸಾವಿನ ದುಃಖದಲ್ಲೂ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪೋಷಕರು

click me!