
ಲಖನೌ: ಬಿಜೆಪಿ ನಾಯಕ ವರುಣ್ ಗಾಂಧಿ ಪಕ್ಷ ತೊರೆಯಲಿದ್ದಾರೆ ಎಂಬ ವದಂತಿಗಳ ನಡುವೆಯೇ ತಮ್ಮ ಮುತ್ತಾತ ಜವಹರಲಾಲ್ ನೆಹರು ಅವರನ್ನು ಹೊಗಳಿದ್ದಾರೆ. ಪಿಲಿಭೀತ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವರುಣ್, ನೆಹರು ಬಡವರ ಪರವಾಗಿದ್ದರು. ವಿಶೇಷವಾಗಿ ರೈತರ ಪರವಾಗಿದ್ದರು. ಹೀಗಾಗಿಯೇ ಅವರು ಸರ್ಕಾರಿ ವೇತನ, ಬಂಗಲೆ, ಇತರ ಭತ್ಯೆಗಳನ್ನು ತ್ಯಾಗ ಮಾಡಿದ್ದರು. ಸಾರ್ವಜನಿಕ ಹಣದಲ್ಲಿ ಯಾವುದೇ ಬಂಗಲೆ, ಕಾರು ಖರೀದಿಸಿರಲಿಲ್ಲ. ನಾನು ಕೂಡಾ ಇದೇ ಕಾರಣಕ್ಕಾಗಿ ಸರ್ಕಾರದ ವೇತನ, ಬಂಗಲೆ ತಿರಸ್ಕರಿಸಿದ್ದೇನೆ ಎಂದು ಹೇಳಿದ್ದಾರೆ.
ಬಡವರ ಅನ್ನ ಕಸಿದು ರಾಷ್ಟ್ರಧ್ವಜ ಕೊಳ್ಳಲು ಒತ್ತಾಯಿಸುವುದು ನಾಚಿಕೆಗೇಡು: ವರುಣ್ ಗಾಂಧಿ ಟೀಕೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ