
ನವದೆಹಲಿ(ಆ.03): ಪೂರೈಕೆ ಕೊರತೆಯಿಂದಾಗಿ ಟೊಮೆಟೋ ಬೆಲೆ ಮತ್ತೆ ಏರಿಕೆ ಕಂಡಿದ್ದು, ದೆಹಲಿಯಲ್ಲಿ ಮದರ್ ಡೈರಿ ತನ್ನ ಚಿಲ್ಲರೆ ಮಾರಾಟ ಅಂಗಡಿಗಳಲ್ಲಿ ಒಂದು ಕೇಜಿ ಟೊಮೆಟೋವನ್ನು 259 ರು.ಗೆ ಮಾರಾಟ ಮಾಡುತ್ತಿದೆ. ಇದು ಟೊಮೆಟೋದ ಈವರೆಗಿನ ಸಾರ್ವಕಾಲಿಕ ಗರಿಷ್ಠ ದರ ಎನ್ನಲಾಗಿದೆ.
ದೆಹಲಿಗೆ ಟೊಮೆಟೋ ಪೂರೈಕೆ ಮಾಡುವ ಪ್ರದೇಶಗಳಲ್ಲಿ ಇತ್ತೀಚೆಗೆ ಭಾರಿ ಮಳೆ ಸುರಿದ ಕಾರಣ ಟೊಮೆಟೋ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು ಬೆಲೆ ಏರಿಕೆಗೆ ಕಾರಣವಾಗಿದೆ. ದೆಹಲಿಗೆ ಅಗತ್ಯವಿರುವ ತರಕಾರಿಯನ್ನು ಪೂರೈಸುವ ಆಜಾದ್‌ಪುರ ಮಾರುಕಟ್ಟೆಯಲ್ಲಿ ಕಳೆದ 2 ದಿನಗಳಿಂದ ಟೊಮೆಟೋ ಕೊರತೆ ಉಂಟಾಗಿದೆ. ಇದ್ದಕ್ಕಿದ್ದಂತೆ ಪೂರೈಕೆ ಕುಂಠಿತವಾಗಿರುವುದರಿಂದ ಚಿಲ್ಲರೆ ಮಾರಾಟ ದರ ಏರಿಕೆಯಾಗಿದೆ ಎಂದು ಮದರ್ ಡೈರಿಯ ವಕ್ತಾರ ಹೇಳಿದ್ದಾರೆ. ಏಷ್ಯಾದ ಅತಿದೊಡ್ಡ ತರಕಾರಿ ಮಾರುಕಟ್ಟೆಯಾದ ಆಜಾದ್‌ಪುರ ಮಾರುಕಟ್ಟೆಯಲ್ಲಿ ಬುಧವಾರ ಟೊಮೆಟೋ ಸಗಟು ದರ 170ರಿಂದ 220 ರು.ವರೆಗೂ ಇತ್ತು.
ಗ್ರಾಹಕರ ಕೈಗೆ ಎಟುಕದ ಟೊಮೆಟೋ: ಹುಣಸೆ ಹಣ್ಣು ಕೂಡಾ ದುಬಾರಿ
‘ಭಾರಿ ಮಳೆಯ ಪರಿಣಾಮವಾಗಿ ಕಳೆದ 3 ದಿನಗಳಿಂದ ಪೂರೈಕೆ ಭಾರಿ ಕುಸಿತ ಕಂಡಿದೆ. ಬುಧವಾರ ಕೇವಲ ಶೇ.15ರಷ್ಟುಮಾತ್ರ ಟೊಮೆಟೋ ಪೂರೈಕೆಯಾಗಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶದಿಂದ 6 ಟ್ರಕ್‌ಗಳು ಮಾತ್ರ ಟೊಮೆಟೋ ಪೂರೈಸಿವೆ’ ಎಂದು ಆಜಾದ್ ಮಾರುಕಟ್ಟೆಟೊಮೆಟೋ ಅಸೋಸಿಯೇಶನ್‌ನ ಅಧ್ಯಕ್ಷ ಅಶೋಕ್ ಕೌಶಿಕ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ