ಭ್ರಷ್ಟಾಚಾರಕ್ಕೆ ಅನುಮತಿ ಕೊಡಬಾರದು, ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಿ: ರಾಹುಲ್‌ ಗಾಂಧಿ

Published : Aug 02, 2023, 07:48 PM IST
ಭ್ರಷ್ಟಾಚಾರಕ್ಕೆ ಅನುಮತಿ ಕೊಡಬಾರದು, ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಿ: ರಾಹುಲ್‌ ಗಾಂಧಿ

ಸಾರಾಂಶ

ರಾಜ್ಯ ಸರ್ಕಾರದ ಹಿರಿಯ ಸಚಿವರು, ಶಾಸಕರು, ಸಿಎಂ-ಡಿಸಿಎಂ ಜೊತೆಗಿನ ಸಭೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಭ್ರಷ್ಟಾಚಾರಕ್ಕೆ ಯಾವುದೇ ರೀತಿಯ ಅನುಮತಿಯನ್ನೂ ಕೊಡಬಾರದು. ಆ ನಿಟ್ಟಿನಲ್ಲಿ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ.  

ನವದೆಹಲಿ (ಆ.2): ಮುಂದಿನ ಲೋಕಸಭೆ ಚುನಾವಣೆಗೆ ರಣತಂತ್ರ ಎನ್ನುವ ನಿಟ್ಟಿನಲ್ಲಿ ಕಾಂಗ್ರೆಸ್‌ ಹೈಕಮಾಂಡ್‌, ಬುಧವಾರ ದೆಹಲಿಯಲ್ಲಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌, ಹಿರಿಯ ಶಾಸಕರು ಹಾಗೂ ಸಚಿವರನ್ನು ಒಳಗೊಂಡು ಸಭೆ ನಡೆಸಿತು. ಈ ವೇಳೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪಕ್ಷದ ನಾಯಕರಿಗೆ ಹಲವು ಮಹತ್ವದ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ. ಲೋಕಸಭೆ ಚುನಾವಣೆಗೆ ರಣತಂತ್ರ ಎನ್ನುವ ನಿಟ್ಟಿನಲ್ಲಿ ನಡೆದ ಮೊದಲ ಸಭೆಯಲ್ಲೂ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಕೆಲಸಗಳ ಬಗ್ಗೆಯೇ ಚರ್ಚೆ ನಡೆದಿದೆ. 'ಗ್ಯಾರಂಟಿ ಯೋಜನೆಗಳು ಫಲಾನುಭವಿಗಳ ಜಿಲ್ಲಾವಾರು ಸಭೆ ಮಾಡಬೇಕು ಎಂದು ರಾಹುಲ್‌ ಗಾಂಧಿ ತಿಳಿಸಿದ್ದು, ಯುವಜನಾಂಗವನ್ನು ಸೆಳೆಯುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳನ್ನು ಮತ್ತಷ್ಟು ಸದೃಢಗೊಳಿಸಿ ಎಂದು ಸೂಚನೆ ನೀಡಿದ್ದಾರೆ. ಇನ್ನು ಬಿಜೆಪಿ ಹಿಂದೂ- ಮುಸ್ಲಿಂ ನೀತಿಗೆ ಪ್ರತಿ ತಂತ್ರ ರೂಪಿಸುವಂತೆ ತಿಳಿಸಿದ್ದು, ಹಿಂದೂ ಮುಸ್ಲಿಂ ನೀತಿಯಿಂದ ನೊಂದ ಸಣ್ಣ ಸಣ್ಣ ಸಮುದಾಯಗಳನ್ನು ಒಟ್ಟುಗೂಡಿಸುವಂತೆ ಸೂಚಿಸಿದ್ದಾರೆ.

ಭ್ರಷ್ಟಾಚಾರಕ್ಕೆ ಪೂರ್ತಿ ಕಡಿವಾಣ ಬೀಳಬೇಕು. ಇದರ ಬಗ್ಗೆ ಎಲ್ಲರೂ ಜಾಗರೂಕತೆಯಿಂದ ವರ್ತಿಸಿ ಎಂದು ರಾಜ್ಯ ಸರ್ಕಾರದ ನಾಯಕರಿಗೆ ಸೂಚನೆ ನೀಡಿದ್ದಾರೆ. ರಾಜ್ಯಗಳಲ್ಲಿ ಬಿಜೆಪಿ ಘಟಕ ಅಥವಾ ಆಡಳಿತ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲ. ಇದನ್ನು ಆದಷ್ಟು ಪಕ್ಷದ ಪರವಾಗಿ ಜನಾಭಿಪ್ರಾಯ ಬರುವಂತೆ ರೂಪಿಸಿಕೊಳ್ಳಿ. ಸಣ್ಣ ಸಣ್ಣ ಸಮುದಾಯದಗಳನ್ನು ಒಟ್ಟು ಮಾಡಿ, ಗ್ಯಾರಂಟಿ ಗಳನ್ನು ಶಾಸಕರಾದಾಗಿಯಾಗಿ ಫಲಾನುಭವಿಗಳ ಮನೆಗೆ ಮುಟ್ಟಿಸಿ ಎಂದು ಹೇಳಿದ್ದಾರೆ.

ಇನ್ನು ಪ್ರತಿ ವಿಧಾನಸಭಾ ಕ್ಷೇತ್ರಕ್ಕೊಂದರಂತೆ ಪಕ್ಷದ ಕಚೇರಿಯನ್ನ ತೆಗೆಯಬೇಕು. ಜಿಲ್ಲಾ ಮಟ್ಟದಲ್ಲಿ ಪಕ್ಷದ ಕಾರ್ಯಾಲಯ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಲೋಕಸಭೆಗೆ ಕೆಳಹಂತದಿಂದಲೆ ಪಕ್ಷ ಸಂಘಟನೆ ಈಗಿನಿಂದಲೇ ಮಾಡಬೇಕು. ಕರ್ನಾಟಕದಿಂದ 15 ರಿಂದ 20 ಕ್ಷೇತ್ರ ಲೋಕಸಭೆಗೆ ನಿರೀಕ್ಷೆ ಮಾಡುತ್ತಿದ್ದೇವೆ. ಜೊತೆಗೆ ಇದನ್ನ ಗೆಲ್ಲುವ ಸಾಮರ್ಥ್ಯ ಸಹ ಇದೆ. ಸಚಿವರು ಕಾರ್ಯಕರ್ತರ ಜೊತೆ ಪ್ರತಿ ಜಿಲ್ಲಾವಾರು ಸಂಪರ್ಕದಲ್ಲಿರಬೇಕು ಕಾರ್ಯಕರ್ತರನ್ನ ಸಕ್ರಿಯವಾಗಿಟ್ಟು, ಕಾರ್ಯಕ್ರಮಗಳನ್ನ ಮಾಡಬೇಕು. 1991 ರ ನಂತರ ಈ ಬಾರಿ ಹೆಚ್ಚಿನ ಲೋಕಸಭಾ ಕ್ಷೇತ್ರಗೆಲ್ಲುವ ಅವಕಾಶ ಈ ಬಾರಿ ರಾಜ್ಯದಲ್ಲಿದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಬಿಜೆಪಿ ಬಳಿ ವಿಚಾರವಿಲ್ಲ: ಸಭೆಯಲ್ಲಿ ಮೊದಲ ಬಾರಿಗೆ ಭಾಗಿಯಾಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬಿಜೆಪಿಯ ಬಳಿ ಯಾವುದೇ ವಿಚಾರವಿಲ್ಲ. ಅವರು ಮೋದಿಯನ್ನ ಮಾತ್ರ ನಂಬಿಕೊಂಡಿದ್ದಾರೆ. ಅದರ ಸದುಪಯೋಗ ನಾವು ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿಗೆ ಸೂಕ್ತವಾದ ಹುಡುಗಿ ಹುಡುಕಿ ಕೊಡಿ: ಮಹಿಳೆಯರಿಗೆ ಸೋನಿಯಾ ಮನವಿ

ಸಭೆಯಲ್ಲಿ ಮಾತನಾಡಿದ ಶಾಸಕ ವಿನಯ್‌ ಕುಲಕರ್ಣಿ: ಕಳೆದ ಸರ್ಕಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರ ಮೇಲೆ ವಿನಾಕಾರಣ ಕೇಸ್ ಹಾಕಲಾಗಿದೆ. ಈ ರೀತಿ ರಾಜ್ಯಾದ್ಯಂತ 30 ರಿಂದ 40 ಪ್ರಮುಖ ಪ್ರಕರಣಗಳಿವೆ. ಈ ಪ್ರಕರಣಗಳ ಬಗ್ಗೆ ಮತ್ತೊಂದು ಬಾರಿ ಪರಿಶೀಲನೆ ಮಾಡಬೇಕು ಎಂದು ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಕೇಸ್ ಹಾಕಿದಾಗ‌ ಆಗುವ ನೋವು ಎಷ್ಟು ಇರುತ್ತೆ ಅಂಥಾ ತಮ್ಮ ಘಟನೆಯನ್ನೇ ಹೇಳಿದ್ದಾರೆ ಎನ್ನಲಾಗಿದೆ.

ಭಾರತ್‌ ಜೋಡೋ ಯಾತ್ರೆ ಬಳಿಕ ರಾಹುಲ್‌ ಗಾಂಧಿಗೆ ಮಂಡಿನೋವು: ಕೇರಳದಲ್ಲಿ ಆಯುರ್ವೇದಿಕ್‌ ಚಿಕಿತ್ಸೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!