
ನವದೆಹಲಿ: ‘ಕಳೆದ 10 ವರ್ಷಗಳಲ್ಲಿ ದೇಶದ 25 ಕೋಟಿಗೂ ಅಧಿಕ ಜನ ಬಡತನದಿಂದ ಹೊರಬಂದಿದ್ದಾರೆ. ಸಾರ್ವಜನಿಕ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಗೆ ಕೇಂದ್ರ ಸರ್ಕಾರ ವಿಶೇಷ ಗಮನ ಹರಿಸಿದ್ದರಿಂದ ಕಳೆದ 11 ವರ್ಷಗಳಲ್ಲಿ ದೇಶ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಸಾಧಿಸಿದೆ’ ಎಂದು ಪ್ರಧಾನಿ ಮೋದಿ ತಿಳಿಸಿದರು.
ಶನಿವಾರ 16ನೇ ಆವೃತ್ತಿಯ ರೋಜಗಾರ್ ಮೇಳದಲ್ಲಿ 51,000ಕ್ಕೂ ಅಧಿಕ ನೇಮಕಾತಿ ಪತ್ರಗಳನ್ನು ವಿತರಿಸಿ, ವರ್ಚುವಲ್ ಮೂಲಕ ಅವರು ಮಾತನಾಡಿದರು.
‘ಬಡವರಿಗಾಗಿ 4 ಕೋಟಿಗೂ ಹೆಚ್ಚು ಮನೆಗಳ ನಿರ್ಮಾಣ, 10 ಕೋಟಿಗೂ ಹೆಚ್ಚು ಹೊಸ ಎಲ್‌ಪಿಜಿ ಸಂಪರ್ಕ, ಸೌರಶಕ್ತಿ ಮೇಲ್ಛಾವಣಿ ಯೋಜನೆ ಮೊದಲಾದ ಸರ್ಕಾರೀ ಯೋಜನೆಗಳು ಲಕ್ಷಾಂತರ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿವೆ. ಕಳೆದ 10 ವರ್ಷಗಳಲ್ಲಿ ದೇಶದ 25 ಕೋಟಿಗೂ ಅಧಿಕ ಜನ ಬಡತನದಿಂದ ಹೊರಬಂದಿದ್ದಾರೆ. 11 ವರ್ಷಗಳಲ್ಲಿ ಎಲೆಕ್ಟ್ರಾನಿಕ್ ಉತ್ಪಾದನೆಯು 5 ಪಟ್ಟು ಹೆಚ್ಚಾಗಿ 11 ಲಕ್ಷ ಕೋಟಿ ರು.ಗಳಿಗೆ ತಲುಪಿದೆ. ಈ ಮೊದಲು 2-4 ಇದ್ದ ಮೊಬೈಲ್ ಉತ್ಪಾದನಾ ಘಟಕಗಳ ಸಂಖ್ಯೆ ಸುಮಾರು 300ಕ್ಕೆ ತಲುಪಿದೆ’ ಎಂದು ತಿಳಿಸಿದರು.
ಬಹುತೇಕ ಬಡತನ ನಿರ್ಮೂಲನ ಮಾಡಿದ ಭಾರತ
ವಿದೇಶಾಂಗ ನೀತಿ, ಆರ್ಥಿಕತೆ, ಜಿಡಿಪಿ, ಭದ್ರತೆ, ದ್ವಪಕ್ಷೀಯ ಸಂಬಂಧ ಸೇರಿದಂತೆ ಎಲ್ಲಾ ವಿಚಾರಗಳಲ್ಲಿ ಭಾರತ ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ಸೆಡ್ಡು ಹೊಡೆಯುತ್ತಿದೆ. ಇದರ ನಡುವೆ ಇದೀಗ ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ. ಭಾರತದ ಅತೀ ಬಡತನ ತೀವ್ರವಾಗಿ ಇಳಿಮುಖವಾಗಿದೆ. ವಿಶ್ವಬ್ಯಾಂಕ್ ಸಂಶೋಧನಾ ವರದಿ ಬಿಡುಗಡೆಯಾಗಿದ್ದು ಭಾರತದ ತೀವ್ರ ಬಡನ ಸೇಕಡಾ 12.3ಕ್ಕೆ ಇಳಿಕೆಯಾಗಿದೆ.
2011ರಿಂದ 2019ರ ಅವಧಿಯಲ್ಲಿ ಭಾರತದ ತೀವ್ರ ಬಡನತ ರೇಖೆ ಇಳಿಮುಖವಾಗಿದೆ. 2011ರಲ್ಲಿ ಶೇಕಡಾ 22.5ರಷ್ಟಿದ್ದ ಕಡು ಬಡತನ ಪ್ರಮಾಣ 2019ರಲ್ಲಿ ಶೇಕಜಾ 10.2ಕ್ಕೆ ಕುಸಿತ ಕಂಡಿದೆ. ಬಡತನ ಇಳಿಮುಖ ಪ್ರಮಾಣದಲ್ಲಿ ಗ್ರಾಮೀಣ ಭಾಗಗಳಲ್ಲೇ ಹೆಚ್ಚಾಗಿದೆ ಎಂದು ವರದಿ ಹೇಳಿದೆ.
ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕೂಡ ಭಾರತದಲ್ಲಿ ಕಡುಬಡತನ ಬಹುತೇಕ ನಿರ್ಮೂಲನೆಯಾಗಿದೆ. ಸರ್ಕಾರಗಳು ಉಚಿತ ಆಹಾರ ಪೂರೈಸುತ್ತಿರುವುದರಿಂದ ಭಾರತದಲ್ಲಿನ ತೀವ್ರತರ ಬಡತನ ಕಳೆದ 40 ವರ್ಷಗಳಲ್ಲೇ ಈಗ ಕನಿಷ್ಠಕ್ಕೆ ಕುಸಿದಿದೆ ಎಂದು ಹೇಳಿತ್ತು. ಅದರ ಬೆನ್ನಲ್ಲೇ ಈಗ ವಿಶ್ವಬ್ಯಾಂಕ್ ಕೂಡ ಭಾರತದಲ್ಲಿ ಕಡುಬಡವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಕುಸಿದಿರುವ ಬಗ್ಗೆ ಹೇಳಿರುವುದು ಆಶಾಭಾವನೆ ಮೂಡಿಸಿದೆ.
ವಿಶೇಷವೆಂದರೆ, ಭಾರತದ ನಗರ ಪ್ರದೇಶಗಳಿಗಿಂತ ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ಬಡತನ ಇಳಿಕೆಯ ಪ್ರಮಾಣ ಹೆಚ್ಚಿದೆ. ನಗರ ಪ್ರದೇಶಗಳಲ್ಲಿ ಬಡತನ ಕುಸಿತದ ಪ್ರಮಾಣ ಶೇ.7.9 ಇದ್ದರೆ ಗ್ರಾಮೀಣ ಪ್ರದೇಶದಲ್ಲಿ ಶೇ.14.7ರಷ್ಟಿದೆ. ‘ಭಾರತದಲ್ಲಿ ಬಡವರ ಸಂಖ್ಯೆ ಇಳಿಕೆಯಾಗಿದೆ. ಆದರೆ, ಈ ಹಿಂದೆ ಅಂದುಕೊಂಡಷ್ಟುಪ್ರಮಾಣದಲ್ಲಿ ಇಳಿಕೆಯಾಗಿಲ್ಲ’ ಎಂದೂ ವರದಿ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ