
ಕೋಲ್ಕತಾ: ಕೋಲ್ಕತಾದ ಕಾನೂನು ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರದ ಕರಾಳ ಘಟನೆ ಮಾಸುವ ಮುನ್ನವೇ, ಇನ್ನೊಂದು ಅತ್ಯಾಚಾರ ಪ್ರಕರಣ ಸದ್ದು ಮಾಡಿದೆ. ಆಪ್ತ ಸಮಾಲೋಚಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಕೋಲ್ಕತಾದ ಐಐಎಂ ಕಾಲೇಜಿನ ವಿದ್ಯಾರ್ಥಿಯೊಬ್ಬ ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ತೆಯ ದೂರಿನ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಏನಿದು ಪ್ರಕರಣ?: ಮಹಿಳೆ ಐಐಎಂ ಕಾಲೇಜಿನ ವಸತಿಗೃಹಕ್ಕೆ ಆಪ್ತ ಸಮಾಲೋಚನೆ ನಡೆಸಲು ತೆರಳಿದ್ದಳು. ಆಗ ನೀಡಲಾದ ಡ್ರಗ್ಸ್ ಮಿಶ್ರಿತ ಪಾನೀಯವನ್ನು ಸೇವಿಸಿದ ಬಳಿಕ ಮಹಿಳೆ ಪ್ರಜ್ಞೆ ತಪ್ಪಿದರು. ಎಚ್ಚರವಾದಾಗ ತನ್ನ ಮೇಲೆ ಅತ್ಯಾಚಾರ ನಡೆದಿರುವುದು ತಿಳಿದ ಮಹಿಳೆಯ, ಹರಿದೇವಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ವಿಷಯ ಬಹಿರಂಗಪಡಿಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುವುದು ಎಂದು ಆರೋಪಿ ಬೆದರಿಸಿದ್ದಾಗಿಯೂ ಆಕೆ ದೂರಿದ್ದಾರೆ. ಈ ಹಿನ್ನೆಲೆ ಕಾಲೇಜಿನ ವಿದ್ಯಾರ್ಥಿಯೊಬ್ಬನನ್ನು ಬಂಧಿಸಲಾಗಿದೆ.
ಅತ್ತ ಸಂತ್ರಸ್ತೆಯ ತಂದೆ, ‘ನನ್ನ ಮಗಳು ಆಟೋದಿಂದ ಬಿದ್ದು ಪ್ರಜ್ಞೆ ತಪ್ಪಿದ್ದಳು. ಆಕೆಯ ಮೇಲೆ ಅತ್ಯಾಚಾರ ನಡೆದಿಲ್ಲ’ ಎಂದು ಹೇಳಿದ್ದರು.
ಕೋಲ್ಕತ್ತಾದ ಸೀಲ್ದಾ ನ್ಯಾಯಾಲಯವು ಕಬಿತಾ ಸರ್ಕಾರ್ ಅವರನ್ನು ಸಂಜಯ್ ರಾಯ್ ಅವರ ವಕೀಲರನ್ನಾಗಿ ನೇಮಿಸಿದೆ.
ಕೊಲ್ಕತ್ತಾ ಆರ್ ಜಿ ಆರ್ ಮೆಡಿಕಲ್ ಕಾಲೇಜಿ (Kolkata RGR Medical College) ನಲ್ಲಿ ನಡೆದ ಟ್ರೈನಿ ವೈದ್ಯೆ ಅತ್ಯಾಚಾರ ಹಾಗೂ ಕೊಲೆ (trainee doctor raped and murder) ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಮುಖ್ಯ ಆರೋಪಿ ಸಂಜಯ್ ರಾಯ್ (Sanjay Roy) ನನ್ನು ಸಿಬಿಐ ವಶಕ್ಕೆ ಪಡೆದಿದೆ. ಸಂಜಯ್ ರಾಯ್ ವಿರುದ್ಧ ಸಾಕಷ್ಟು ಸಾಕ್ಷ್ಯ ಸಿಕ್ಕಿದ್ದು, ಆತನಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂಬ ಆಗ್ರಹ ಕೇಳಿ ಬಂದಿದೆ. ಈ ಮಧ್ಯೆ ಕೋಲ್ಕತ್ತಾದ ಸೀಲ್ದಾ ನ್ಯಾಯಾಲಯವು ಕಬಿತಾ ಸರ್ಕಾರ್ ಅವರನ್ನು ಸಂಜಯ್ ರಾಯ್ ಅವರ ವಕೀಲರನ್ನಾಗಿ ನೇಮಿಸಿದೆ.
ಸಂಜಯ್ ರಾಯ್ ಗೆ ಪಾಲಿಗ್ರಾಫ್ ಪರೀಕ್ಷೆ ಸಹ ನಡೆಸಲಾಗಿದೆ. ಇದ್ರಲ್ಲಿ ಸಂಜಯ್ ತಾನು ತಪ್ಪು ಮಾಡಿರೋದನ್ನು ಒಪ್ಪಿಕೊಂಡಿದ್ದಾನೆ. ಸಂಜಯ್ ಮೇಲೆ ಇಡೀ ದೇಶವೇ ಆಕ್ರೋಶ ವ್ಯಕ್ತಪಡಿಸುತ್ತಿರುವ ಈ ಸಮಯದಲ್ಲಿ ಆತನ ಪರ ವಾದ ಮಾಡಲು ವಕೀಲರು ಮುಂದಾಗಿದ್ದಾರೆ ಎಂದಾಗ ಅಚ್ಚರಿ ಆಗೋದು ಸಹಜ. ಬಹುತೇಕರು ಕಬಿತಾ ಸರ್ಕಾರ್ ವಿರುದ್ಧವೂ ಕೆಂಡಕಾರಿದ್ದಾರೆ. ಈ ಬಗ್ಗೆ ಕಬಿತಾ ಸರ್ಕಾರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸಂಜಯ್ ರಾಯ್ ಪರ ವಾದ ಮಂಡಿಸಲಿರುವ ಕಬಿತಾ ಸರ್ಕಾರ್ ಹೇಳೋದೇನು? : ಕಬಿತಾ ಸರ್ಕಾರ್, ಕಳೆದ 25 ವರ್ಷಗಳಿಂದ ವಕೀಲ ವೃತ್ತಿಯಲ್ಲಿದ್ದಾರೆ. ಅವರು ಅಲಿಪುರ ನ್ಯಾಯಾಲಯದಿಂದ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಸಂಜಯ್ ರಾಯ್ ಕೇಸ್ ಒಪ್ಪಿಕೊಂಡ ಕಬಿತಾ, ಯಾವುದೇ ವ್ಯಕ್ತಿ, ಆರೋಪಿಯಾಗಿದ್ದರೂ ನ್ಯಾಯಯುತ ವಿಚಾರಣೆಗೆ ಎಲ್ಲರಿಗೂ ಹಕ್ಕು ನೀಡಲಾಗಿದೆ. ಸಂಜಯ್ ಪರ ವಾದ ಮಂಡಿಸೋದು ನನ್ನ ಕರ್ತವ್ಯ. ಕಾನೂನು ಸಹಾಯ ನೀಡುವ ವಕೀಲನಾಗಿರುವ ಕಾರಣ, ಎಲ್ಲ ಪ್ರಕರಣದಂತೆ ಈ ಪ್ರಕರಣದಲ್ಲೂ ಕಾನೂನು ಪ್ರಕಾರ ನಾನು ನನ್ನ ಕರ್ತವ್ಯವನ್ನು ಮಾಡ್ತಿದ್ದೇನೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ