2024ರ ಲೋಕಸಭಾ ಚುಣಾವಣೆ :ಗೆಲ್ಲಲೇಬೇಕಾದ ಸೀಟುಗಳ ಟಾರ್ಗೆಟ್ ಹೆಚ್ಚಿಸಿದ ಬಿಜೆಪಿ

By Kannadaprabha NewsFirst Published Dec 20, 2022, 10:28 AM IST
Highlights

2019ರಲ್ಲಿ ಸೋತ, ಆದರೆ 2024ರಲ್ಲೇ ಗೆಲ್ಲಲೇಬೇಕೆಂದು ಪಟ್ಟಿಮಾಡಿರುವ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಬಿಜೆಪಿ 144ರಿಂದ 160ಕ್ಕೆ ಹೆಚ್ಚಳ ಮಾಡಿದೆ. ಈ ಹೆಚ್ಚಳ ಬಿಹಾರ ಮತ್ತು ತೆಲಂಗಾಣದಿಂದ ಬಂದಿದೆ.

ನವದೆಹಲಿ: 2019ರಲ್ಲಿ ಸೋತ, ಆದರೆ 2024ರಲ್ಲೇ ಗೆಲ್ಲಲೇಬೇಕೆಂದು ಪಟ್ಟಿಮಾಡಿರುವ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಬಿಜೆಪಿ 144ರಿಂದ 160ಕ್ಕೆ ಹೆಚ್ಚಳ ಮಾಡಿದೆ. ಈ ಹೆಚ್ಚಳ ಬಿಹಾರ ಮತ್ತು ತೆಲಂಗಾಣದಿಂದ ಬಂದಿದೆ. ಕಳೆದ ಬಿಹಾರದಲ್ಲಿ ಜೆಡಿಯು ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿತ್ತು. ಆದರೆ ಈ ಬಾರಿ ಏಕಾಂಗಿಯಾಗಿ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ಗೆಲ್ಲಲು ಕಷ್ಟವಿರುವ ಸ್ಥಾನಗಳು ಪಟ್ಟಿಸೇರ್ಪಡೆಯಾಗಿದೆ. ಮತ್ತೊಂದೆಡೆ ತೆಲಂಗಾಣದಲ್ಲಿ ಪಕ್ಷವನ್ನು ವಿಸ್ತರಣೆ ಮಾಡಲು ಆದ್ಯತೆ ನೀಡಲಾಗಿದ್ದು, ಆ ಕಾರಣ ಅಲ್ಲಿಯ ಒಂದಿಷ್ಟುಸ್ಥಾನಗಳು ಪಟ್ಟಿಸೇರ್ಪಡೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಹೀಗೆ ಗೆಲ್ಲಲೇಬೇಕಾದ ಕ್ಷೇತ್ರಗಳನ್ನು 2 ವರ್ಷಗಳ ಹಿಂದೆಯೇ ಗುರುತಿಸಿದ್ದ ಬಿಜೆಪಿ, ಅಲ್ಲಿಗೆಂದೇ ಪ್ರತ್ಯೇಕ ಯೋಜನೆ ರೂಪಿಸಿ, ಪಕ್ಷದ ನಾಯಕರು, ಕೇಂದ್ರ ಸಚಿವರನ್ನು ಅದಕ್ಕೆ ನಿಯೋಜಿಸಿತ್ತು. ಹೀಗೆ ನಿಯೋಜನೆಗೊಂಡ ನಾಯಕರು ಸೋಮವಾರ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ವರದಿ ಸಲ್ಲಿಸಿದ್ದಾರೆ.

2.8 ಲಕ್ಷ ಮತಗಳ ಅಂತರದಿಂದ ಗೆದ್ದ ಡಿಂಪಲ್ ಯಾದವ್: ಸಮಾಜವಾದಿ ಪಕ್ಷದ ‘ಬಹು’ಗೆ ಗೆಲುವಿನ ಪರಾಕ್‌..!

Mysuru : ' 2024ರ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ '

click me!