ಸಲಿಂಗ ವಿವಾಹಕ್ಕೆ ಬಿಜೆಪಿ ಸಂಸದ ಸುಶೀಲ್‌ ಮೋದಿ ಪ್ರಬಲ ವಿರೋಧ

By Kannadaprabha News  |  First Published Dec 20, 2022, 9:36 AM IST

ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ಸಿಗುವಂತೆ ಮಾಡಲು ಹಲವಾರು ಎಡಪಂಥೀಯ ಹೋರಾಟಗಾರರು ಪ್ರಯತ್ನಿಸುತ್ತಿದ್ದಾರೆ. ಇಂತಹ ಪ್ರಯತ್ನಗಳನ್ನು ಸರ್ಕಾರ ಪ್ರಬಲವಾಗಿ ವಿರೋಧಿಸಬೇಕು’ ಎಂದು ಹಿರಿಯ ಬಿಜೆಪಿ ಸಂಸದ ಸುಶೀಲ್‌ ಕುಮಾರ್‌ ಮೋದಿ ಸೋಮವಾರ ಹೇಳಿದ್ದಾರೆ.


ನವದೆಹಲಿ: ‘ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ಸಿಗುವಂತೆ ಮಾಡಲು ಹಲವಾರು ಎಡಪಂಥೀಯ ಹೋರಾಟಗಾರರು ಪ್ರಯತ್ನಿಸುತ್ತಿದ್ದಾರೆ. ಇಂತಹ ಪ್ರಯತ್ನಗಳನ್ನು ಸರ್ಕಾರ ಪ್ರಬಲವಾಗಿ ವಿರೋಧಿಸಬೇಕು’ ಎಂದು ಹಿರಿಯ ಬಿಜೆಪಿ ಸಂಸದ ಸುಶೀಲ್‌ ಕುಮಾರ್‌ ಮೋದಿ ಸೋಮವಾರ ಹೇಳಿದ್ದಾರೆ. ಸಂಸತ್ತಿನ ಅಧಿವೇಶನದ ಶೂನ್ಯ ವೇಳೆಯಲ್ಲಿ ಮಾತನಾಡಿದ ಸುಶೀಲ್‌ ಮೋದಿ, ‘ಭಾರತದಲ್ಲಿ ಸಲಿಂಗ ವಿವಾಹ ಅಧಿಕೃತವಲ್ಲ. ಮುಸ್ಲಿಂ ವೈಯಕ್ತಿಕ ಕಾನೂನು ಅಥವಾ ಯಾವುದೇ ರೀತಿ ಧಾರ್ಮಿಕ ಕಾನೂನುಗಳಲ್ಲೂ ಇದಕ್ಕೆ ಅವಕಾಶವನ್ನು ನೀಡಿಲ್ಲ. ದೇಶದ ಸಂಸ್ಕೃತಿಗೆ ಇದು ವಿರುದ್ಧವಾಗಿದೆ. ಹೀಗಾಗಿ ನ್ಯಾಯಾಲಯದಲ್ಲಿ ಕುಳಿತ ಇಬ್ಬರು ನ್ಯಾಯಾಧೀಶರು ಇಂತಹ ಮಹತ್ವದ ಸಾಮಾಜಿಕ ವಿಚಾರಗಳ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಬಾರದು. ದೇಶದ ಜನರನ್ನು ಪ್ರತಿನಿಧಿಸುವ ಸಂಸತ್ತಿನಲ್ಲಿ ಈ ವಿಚಾರದ ಚರ್ಚೆಗೆ ಅವಕಾಶ ನೀಡಬೇಕು’ ಎಂದು ವಿನಂತಿಸಿಕೊಂಡರು.

ಹಸೆಮಣೆ ಏರಲು ಸಿದ್ಧರಾದ ಕೇರಳದ ಸಲಿಂಗಿ ಜೋಡಿ: ಫೋಟೋ ಶೂಟ್ ವೈರಲ್

Tap to resize

Latest Videos

ಸಲಿಂಗಿ ವಿವಾಹಕ್ಕೆ ಅಮೆರಿಕಾ ಸಂಸತ್ ಸಮ್ಮತಿ

click me!