ಹತ್ರಾಸ್‌ ಗ್ಯಾಂಗ್‌ರೇಪ್‌, ಕೊಲೆ ಕೇಸ್‌: ಮೂವರನ್ನು ಖುಲಾಸೆಗೊಳಿಸಿದ ಕೋರ್ಟ್‌; ಒಬ್ಬರು ಮಾತ್ರ ದೋಷಿ

By BK Ashwin  |  First Published Mar 2, 2023, 3:24 PM IST

ತನ್ನ ತಾಯಿ ಮತ್ತು ಸಹೋದರನೊಂದಿಗೆ ಹುಲ್ಲು ಕತ್ತರಿಸುತ್ತಿದ್ದ ಸ್ಥಳದಿಂದ ತನ್ನನ್ನು ತನ್ನ ದುಪಟ್ಟಾ ಮೂಲಕ ಹೊಲಕ್ಕೆ ಎಳೆದೊಯ್ಯಲಾಗಿತ್ತು ಎಂದು ಪೊಲೀಸರಿಗೆ ಹೇಳಿಕೆ ನೀಡಲಾಗಿತ್ತು. ಈ ಪ್ರಕರಣವನ್ನು 2012 ರ ನಿರ್ಭಯಾ ಸಾಮೂಹಿಕ ಅತ್ಯಾಚಾರಕ್ಕೆ ಸಮಾನಾಂತರವಾಗಿದೆ ಎಂದೂ ಪರಿಗಣಿಸಲಾಗಿದೆ. 


ಹೊಸದಿಲ್ಲಿ (ಮಾರ್ಚ್‌ 2, 2023): ಉತ್ತರ ಪ್ರದೇಶದಲ್ಲಿ ವರದಿಯಾಗಿದ್ದ 2020ರ ಹತ್ರಾಸ್ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿತ್ತು. ಅಲ್ಲದೆ, ಹಲವರಿಂದ ತೀವ್ರ ಆಕ್ರೋಶವೂ ವ್ಯಕ್ತವಾಗಿತ್ತು. ಯುಪಿ ಪೊಲೀಸರು, ಸರ್ಕಾರದ ವಿರುದ್ಧವೂ ಈ ಆಕ್ರೋಶದ ಕಿಡಿ ಕೊರಹೊಮ್ಮಿತ್ತು. ಈ ಕುಖ್ಯಾತ ಹತ್ರಾಸ್ ಸಾಮೂಹಿಕ ಅತ್ಯಾಚಾರ-ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಉತ್ತರ ಪ್ರದೇಶದ ನ್ಯಾಯಾಲಯವು ಗುರುವಾರ ಖುಲಾಸೆಗೊಳಿಸಿದ್ದು, ಮುಖ್ಯ ಶಂಕಿತ ಆರೋಪಿಯನ್ನು ಅಪರಾಧಿ ಎಂದು ಘೋಷಿಸಲಾಗಿದೆ. 

ಇನ್ನು, ಪ್ರಮುಖ ಆರೋಪಿ ಎನ್ನಲಾಗಿದ್ದ ಸಂದೀಪ್ ಠಾಕೂರ್ (Sandeep Thakur)  ಅವರನ್ನು ಕಡಿಮೆ ಆರೋಪದಡಿಯಲ್ಲಿ ದೋಷಿ (Convicted) ಎಂದು ಘೋಷಿಸಲಾಗಿದೆ. ಅಂದರೆ ಅತ್ಯಾಚಾರ (Rape) ಅಥವಾ ಕೊಲೆ (Murder) ಪ್ರಕರಣದಡಿಯಲ್ಲಿ ಇವರನ್ನು ದೋಷಿ ಎಂದು ಪರಿಗಣಿಸಲಾಗಿಲ್ಲ. ಆದರೂ, ನರಹತ್ಯೆ (Homicide) ಆರೋಪದಡಿ ಇವರನ್ನು ದುತ್ತರ ಪ್ರದೇಶ ನ್ಯಾಯಾಲಯ ಇಂದು ದೋಷಿ ಎಂದು ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ, ಇತರ ಮೂವರು ಆರೋಪಿಗಳಾದ ಸಂದೀಪ್ ಅವರ ಚಿಕ್ಕಪ್ಪ ರವಿ ಮತ್ತು ಅವರ ಸ್ನೇಹಿತರಾದ ಲವ್ ಕುಶ್ ಹಾಗೂ ರಾಮು ಅವರನ್ನು ನ್ಯಾಯಾಲಯ  ಆರೋಪಗಳಿಂದ ಮುಕ್ತಗೊಳಿಸಲಾಗಿದೆ.

Tap to resize

Latest Videos

ಇದನ್ನು ಓದಿ: Gurugram Rape: ಕೆಲಸ ಕೊಡಿಸೋದಾಗಿ ಹೇಳಿ ಮಹಿಳಾ ಟೆಕ್ಕಿ ಮೇಲೆ ಅತ್ಯಾಚಾರ..!

ದೆಹಲಿಯಿಂದ (Delhi) ಸುಮಾರು 200 ಕಿಮೀ ದೂರದಲ್ಲಿರುವ ಉತ್ತರ ಪ್ರದೇಶದ (Uttar Pradesh) ಹತ್ರಾಸ್‌ನಲ್ಲಿರುವ (Hthras) ತನ್ನ ಗ್ರಾಮದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ 15 ದಿನಗಳ ನಂತರ 20 ವರ್ಷದ ದಲಿತ ಮಹಿಳೆ ದೆಹಲಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಹಲವು ದಿನಗಳ ಕಾಲ ಆಕೆ ರಾಷ್ಟ್ರ ರಾಜಧಾನಿಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಳು.

ತನ್ನ ತಾಯಿ ಮತ್ತು ಸಹೋದರನೊಂದಿಗೆ ಹುಲ್ಲು ಕತ್ತರಿಸುತ್ತಿದ್ದ ಸ್ಥಳದಿಂದ ತನ್ನನ್ನು ತನ್ನ ದುಪಟ್ಟಾ ಮೂಲಕ ಹೊಲಕ್ಕೆ ಎಳೆದೊಯ್ಯಲಾಗಿತ್ತು ಎಂದು ಪೊಲೀಸರಿಗೆ ಹೇಳಿಕೆ ನೀಡಲಾಗಿತ್ತು. ಇನ್ನು, ಆಕೆ ಮೃತಪಟ್ಟ ಬಳಿಕ ಜಿಲ್ಲಾಡಳಿತವೇ ಮಧ್ಯರಾತ್ರಿ ಅಂತ್ಯಕ್ರಿಯೆ ನಡೆಸಿತ್ತು. ಅಲ್ಲದೆ, ಮಹಿಳೆಯ ಕುಟುಂಬಕ್ಕೂ ಅಂತ್ಯಸಂಸ್ಖಾರಕ್ಕೆ ಅವಕಾಶ ನೀಡಿರಲಿಲ್ಲ, ಅವರನ್ನು ಮನೆಯಲ್ಲೇ ಕೂಡಿ ಹಾಕಲಾಗಿತ್ತು. ಆರೋಪಿಗಳನ್ನು ಬಚಾವ್‌ ಮಾಡಲು ಹೀಗೆ ಮಾಡಲಾಗಿದೆ ಎಂದು ಯೋಗಿ ಆದಿತ್ಯನಾಥ್‌ ನೇತೃತ್ವದ ಬಿಜೆಪಿ ಸರ್ಕಾರದ ವ್ಯಾಪಕ ಖಂಡನೆಗೂ ಕಾರಣವಾಗಿದೆ.

ಇದನ್ನೂ ಓದಿ: ಕೈ ಕಾಲುಗಳನ್ನು ಕಟ್ಟಿಹಾಕಿ 14 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ: ಇಬ್ಬರು ಕಾಮುಕರ ಬಂಧನ

ಈ ಮಹಿಳೆಗೆ ಸಾಕಷ್ಟು ಪೆಟ್ಟು, ಫ್ರಾಕ್ಚರ್‌ ಆಗಿದ್ದು, ಆಕೆಯ ನಾಲಿಗೆಯಲ್ಲೂ ಗಾಯಗಳಾಗಿತ್ತು. ಒಟ್ಟಾರೆ ಆಕೆಗೆ ತೀವ್ರ ಚಿತ್ರಹಿಂಸೆ ನೀಡಲಾಗಿದೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆ ಈ ಪ್ರಕರಣವನ್ನು 2012 ರ ನಿರ್ಭಯಾ ಸಾಮೂಹಿಕ ಅತ್ಯಾಚಾರಕ್ಕೆ ಸಮಾನಾಂತರವಾಗಿದೆ ಎಂದೂ ಪರಿಗಣಿಸಲಾಗಿದೆ. 

ಆಕೆಯ ಕುತ್ತಿಗೆಗೆ ಆದ ಗಾಯಗಳಿಂದ ಆಕೆ ಪಾರ್ಶ್ವವಾಯುವಿಗೆ ಒಳಗಾಗಿದ್ದಳು ಮತ್ತು ಉಸಿರಾಡಲು ಕಷ್ಟಪಡುತ್ತಿದ್ದಳು ಎಂದು ವೈದ್ಯರು ಹೇಳಿದರು. ದಾಳಿಕೋರರು ಆಕೆಯ ಕತ್ತು ಹಿಸುಕಲು ಯತ್ನಿಸಿದಾಗ ಆಕೆ ತನ್ನ ನಾಲಿಗೆಯನ್ನು ಕಚ್ಚಿಕೊಂಡದ್ದಳು ಎಂದೂ ಹೇಳಲಾಗಿದೆ.

ಇದನ್ನೂ ಓದಿ: ಚರ್ಚ್ ಪಾದ್ರಿಗಳಿಂದ 5,000 ಹೆಣ್ಮಕ್ಕಳ ಮೇಲೆ ರೇಪ್​, ಪೋರ್ಚುಗಲ್‌ನಲ್ಲಿ ಮಾನವ ಕುಲವೇ ತಲೆತಗ್ಗಿಸು ಘಟನೆ!

click me!