ಕೋಬ್ರಾ ವಾರಿಯರ್‌ ಸಮರಾಭ್ಯಾಸ: ರಾಯಲ್ ಏರ್‌ಫೋರ್ಸ್ ಜೊತೆ ಮಿರಾಜ್ ಹಾರಾಟ

By Kannadaprabha NewsFirst Published Mar 2, 2023, 11:58 AM IST
Highlights

ಎಕ್ಸಸೈಸ್ ಕೋಬ್ರಾ ವಾರಿಯರ್ ಎಂಬ ಹೆಸರಿನಲ್ಲಿ ನಡೆಯಲಿರುವ ಹೆಚ್ಚಿನ ತೀವ್ರತೆಯ ಸಿಮ್ಯುಲೇಟೆಡ್ ಯುದ್ಧ ಸಂದರ್ಭದ ಅಭ್ಯಾಸದಲ್ಲಿ ಭಾರತೀಯ ವಾಯುಪಡೆ ಫಿನ್‌ಲ್ಯಾಂಡ್, ಸಿಂಗಾಪುರ, ದಕ್ಷಿಣ ಆಫ್ರಿಕಾ, ಸ್ವೀಡನ್, ಯುಕೆ, ಹಾಗೂ ಅಮೆರಿಕಾದ ಪಡೆಗಳೊಂದಿಗೆ ಕಾರ್ಯಾಚರಿಸಲಿದೆ.


ಲೇಖಕರು: ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಬೆಂಗಳೂರು: ಎಕ್ಸಸೈಸ್ ಕೋಬ್ರಾ ವಾರಿಯರ್ ಎಂಬ ಹೆಸರಿನಲ್ಲಿ ನಡೆಯಲಿರುವ ಹೆಚ್ಚಿನ ತೀವ್ರತೆಯ ಸಿಮ್ಯುಲೇಟೆಡ್ ಯುದ್ಧ ಸಂದರ್ಭದ ಅಭ್ಯಾಸದಲ್ಲಿ ಭಾರತೀಯ ವಾಯುಪಡೆ ಫಿನ್‌ಲ್ಯಾಂಡ್, ಸಿಂಗಾಪುರ, ದಕ್ಷಿಣ ಆಫ್ರಿಕಾ, ಸ್ವೀಡನ್, ಯುಕೆ, ಹಾಗೂ ಅಮೆರಿಕಾದ ಪಡೆಗಳೊಂದಿಗೆ ಕಾರ್ಯಾಚರಿಸಲಿದೆ. ಭಾರತೀಯ ವಾಯುಪಡೆ ಈಗಾಗಲೇ ತನ್ನ ಸದಸ್ಯರನ್ನು ಯುಕೆಯಲ್ಲಿ ನಡೆಯಲಿರುವ ದ್ವೈವಾರ್ಷಿಕ ಕೋಬ್ರಾ ವಾರಿಯರ್ 2023 ಸಮರಾಭ್ಯಾಸದಲ್ಲಿ ಭಾಗವಹಿಸಲು ಕಳುಹಿಸಿದೆ ಎಂದು ಭಾರತದ ರಕ್ಷಣಾ ಸಚಿವಾಲಯ ಫೆಬ್ರವರಿ 26ರಂದು ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಕೋಬ್ರಾ ವಾರಿಯರ್ (Cobra warrior) ನೂತನ ಆವೃತ್ತಿಯು ಮಾರ್ಚ್ 6ರಿಂದ ಮಾರ್ಚ್ 24ರ ತನಕ ಯುಕೆಯ ಲಿಂಕನ್‌ಶೈರ್‌ನಲ್ಲಿರುವ ಆರ್‌ಎಎಫ್ ವ್ಯಾಡಿಂಗ್‌ಟನ್‌ನಲ್ಲಿ ನಡೆಯಲಿದ್ದು, ಇದರಲ್ಲಿ ಭಾಗವಹಿಸಲಿರುವ ಭಾರತೀಯ ವಿಮಾನಗಳು, ತಂಡಗಳು ಈಗಾಗಲೇ ಗುಜರಾತಿನ(Gujarat)  ಜಾಮ್‌ನಗರದ (Jamnagar) ವಾಯುನೆಲೆಯಿಂದ (Airfield) ತೆರಳಿದ್ದಾರೆ.

ಅಮೆರಿಕಾದಲ್ಲಿ ನಮ್ಮ ಯೋಧರ ಸಮರಾಭ್ಯಾಸ; ಬೇಡ ನಮ್ಮತ್ತ ಕಣ್ಣೆತ್ತಿ ನೋಡೋ ಸಾಹಸ!

ಯುಕೆಗೆ ತೆರಳಿರುವ ಭಾರತೀಯ ವಾಯುಪಡೆಯ ವಿಮಾನಗಳಲ್ಲಿ ಎರಡು ಸಿ-17 ಗ್ಲೋಬ್‌ಮಾಸ್ಟರ್ III ಹೆವಿ ಲಿಫ್ಟ್ ವಿಮಾನ, ಐದು ಮಿರೇಜ್ 2000 ಯುದ್ಧ ವಿಮಾನಗಳು, ಒಂದು ಇಲ್ಯುಶಿನ್ II - 78ಎಂ ಟ್ಯಾಂಕರ್ ವಿಮಾನಗಳು ಸೇರಿವೆ. ಅಂದಾಜು 145 ಭಾರತೀಯ ವಾಯುಪಡೆಯ ಸಿಬ್ಬಂದಿಗಳು ಈ ಸಮರಾಭ್ಯಾಸದಲ್ಲಿ ಭಾಗವಹಿಸಲಿದ್ದಾರೆ.

ಈ ಕಾರ್ಯಾಚರಣೆಯ ಉದ್ದೇಶ ವೈವಿಧ್ಯಮಯ ಯುದ್ಧ ವಿಮಾನಗಳ ಕಾರ್ಯಾಚರಣೆಗಳಲ್ಲಿ ಭಾಗವಹಿಸಿ, ಆ ಮೂಲಕ ವಿವಿಧ ವಾಯು ಪಡೆಗಳ ಅತ್ಯುತ್ತಮ ವಿಧಾನಗಳಿಂದ ಕಲಿತುಕೊಳ್ಳುವುದು ಎಂದು ಭಾರತೀಯ ವಾಯುಪಡೆಯ ವಕ್ತಾರರಾದ ವಿಂಗ್ ಕಮಾಂಡರ್ (Wing commander) ಆಶಿಶ್ ಮೊಘೆ (Ashish Moghe)ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾರತೀಯ ವಾಯುಪಡೆ ಪ್ರಸ್ತುತ ಐದು ದೇಶೀಯ ನಿರ್ಮಾಣದ ತೇಜಸ್ ಯುದ್ಧ ವಿಮಾನಗಳು, ಎರಡು ಸಿ-17ಎಸ್, ಹಾಗೂ 110 ಸಿಬ್ಬಂದಿಗಳನ್ನು ಯುಎಇಯ (UAE) ಅಲ್ ದರ್ಗಾ ವಾಯುನೆಲೆಯಲ್ಲಿ (Al Dargah Air Base) ಇರಿಸಿದ್ದು, ಅವರು ಫೆಬ್ರವರಿ 27ರಿಂದ ಮಾರ್ಚ್ 17ರ ತನಕ ನಡೆಯುವ ಬಹುರಾಷ್ಟ್ರೀಯ ಅಭ್ಯಾಸವಾದ ಎಕ್ಸಸೈಸ್ ಡೆಸರ್ಟ್ ಫ್ಲಾಗ್ 8ರಲ್ಲಿ ಭಾಗವಹಿಸುತ್ತಿದ್ದಾರೆ.

ದೇಶದ ನಾರಿಶಕ್ತಿಗೆ ಮತ್ತೂಂದು ಗರಿ, ಜಪಾನ್ ವಾಯು ಪಡೆ ಸಮರಾಭ್ಯಾಸಕ್ಕೆ ಭಾರತೀಯ ಮಹಿಳಾ ಪೈಲಟ್​

ಯುಕೆ ಜಗತ್ತಿನಾದ್ಯಂತ ಹಲವು ಸಮರಾಭ್ಯಾಸಗಳಲ್ಲಿ ಭಾಗವಹಿಸುತ್ತಾ, ಹಲವು ಅಭ್ಯಾಸಗಳನ್ನು ಆಯೋಜಿಸುತ್ತಾ ಬಂದಿದೆ. ಆದರೆ ಕೋಬ್ರಾ ವಾರಿಯರ್ ರಾಯಲ್ ಏರ್‌ಫೋರ್ಸ್ ಆಯೋಜಿಸುತ್ತಿರುವ ಅತಿದೊಡ್ಡ ಅಭ್ಯಾಸವಾಗಿದೆ. ಇದರಲ್ಲಿ ನ್ಯಾಟೋ ಮಿತ್ರ ರಾಷ್ಟ್ರಗಳು ಹಾಗೂ ಸಹಯೋಗಿ ರಾಷ್ಟ್ರಗಳು ವಿವಿಧ ಆಯುಧ ಬೋಧಕ ಅವಧಿಗಳು ಹಾಗೂ ಅತ್ಯಂತ ತೀವ್ರವಾದ ಸಿಮ್ಯುಲೇಟೆಡ್ ಯುದ್ಧ ಅಭ್ಯಾಸಗಳಲ್ಲಿ ಭಾಗಿಯಾಗುತ್ತವೆ.

ನಿಮ್ಮ ಕೆಲಸ ನೋಡಿಕೊಳ್ಳಿ, ಭಾರತದ ಜೊತೆ ಜಂಟಿ ಸಮರಾಭ್ಯಾಸ ಪ್ರಶ್ನಿಸಿದ ಚೀನಾಗೆ ಅಮೆರಿಕ ತಿರುಗೇಟು!

click me!