10ಕಿ.ಮೀ ಮ್ಯಾರಥಾನ್ ಓಡಿದ 20ರ ಹರೆಯದ ವಿದ್ಯಾರ್ಥಿಗೆ ಹೃದಯಾಘಾತ, ಕುಸಿದು ಬಿದ್ದು ಸಾವು!

Published : Jul 24, 2023, 10:23 AM IST
10ಕಿ.ಮೀ ಮ್ಯಾರಥಾನ್ ಓಡಿದ 20ರ ಹರೆಯದ ವಿದ್ಯಾರ್ಥಿಗೆ ಹೃದಯಾಘಾತ, ಕುಸಿದು ಬಿದ್ದು ಸಾವು!

ಸಾರಾಂಶ

ಫಿಟ್ನೆಸ್ ಹಾಗೂ ಜಾಗೃತಿಗಾಗಿ 10 ಕಿಲೋಮೀಟರ್ ಮ್ಯಾರಥಾನ್ ಓಡಿದ 20 ವರ್ಷದ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ಮ್ಯಾರಥಾನ್ ಓಡಿದ ಬೆನ್ನಲ್ಲೇ ಕುಸಿದು ಬಿದ್ದು ವಿದ್ಯಾರ್ಥಿ ಮೃತಪಟ್ಟ ಘಟನೆ ನಡೆದಿದೆ.

ಮಧುರೈ(ಜು.24) ಹೃದಯಾಘಾತ ಹಾಗೂ ಸಾವು ಪ್ರಕರಣಗಳು ವೈದ್ಯ ಲೋಕಕ್ಕೆ ಸವಾಲಾಗಿ ಪರಿಣಮಿಸುತ್ತಿದೆ.  ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಅಂತರವಿಲ್ಲದೆ ಹೃದಯಾಘಾತ ಸಂಭವಿಸುತ್ತಿದೆ. ತಮಿಳುನಾಡಿನ ಮಧುರೈನಲ್ಲಿ ಆಯೋಜಿಸಿದ ರಕ್ತದಾನ ಜಾಗೃತಿ ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡ 20 ವರ್ಷದ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. 20 ವರ್ಷದ ಎಂ ದಿನೇಶ್ ಕುಮಾರ್ ಎಂಬ ವಿದ್ಯಾರ್ಥಿ ಮೃತಪಟ್ಟ ದುರ್ದೈವಿ. 10 ಕಿಲೋಮೀಟರ್ ಓಟ ಮುಗಿಸಿದ ಬೆನ್ನಲ್ಲೇ ದಿನೇಶ್ ಕುಮಾರ್‌ ಅಸ್ವಸ್ಥಗೊಂಡಿದ್ದಾರೆ. ದಿಢೀರ್ ಕುಸಿದು ಬಿದ್ದಿದ್ದಾನೆ. ಆಸ್ಪತ್ರೆ ದಾಖಲಿಸುವ ಮೊದಲೇ ವಿದ್ಯಾರ್ಥಿ ಮೃತಪಟ್ಟಿದ್ದಾನೆ.

ಫಿಟ್ನೆಸ್ ಹಾಗೂ ರಕ್ತದಾನ ಜಾಗೃತಿಗಾಗಿ ಆಯೋಜಿಸಿದ್ದ ಉದಿರಂ 2023 ಮ್ಯಾರಥಾನ್ ಓಟ ಆಯೋಜಿಸಲಾಗಿತ್ತು. ಮಧುರೈ ಮೆಡಿಕಲ್ ಕಾಲೇಜು ಆಯೋಜಿಸಿದ ಈ ಮ್ಯಾರಾಥಾನ್ ಓಟದಲ್ಲಿ 4,500 ಮಂದಿ ಪಾಲ್ಗೊಂಡಿದ್ದರು. ಇಂದು ಬೆಳಗ್ಗೆ 6 ಗಂಟೆಗೆ ಆರೋಗ್ಯ ಸಚಿವ ಮಾ ಸುಬ್ರಮಣಿಯನ್, ವಾಣಿಜ್ಯ ತೆರಿಗೆ ಸಚಿವ ಪಿ ಮೂರ್ತಿ ಜಂಟಿಯಾಗಿ ಮ್ಯಾರಾಥಾನ್‌ಗೆ ಚಾಲನೆ ನೀಡಿದ್ದರು. 10 ಕಿಲೋಮೀಟರ್ ಮ್ಯಾರಥಾನ್ ಮಧುರೈ ಮೆಡಿಕಲ್ ಕಾಲೇಜಿನಿಂದ ಆರಂಭಗೊಂಡು, ಮತ್ತೆ ಕಾಲೇಜಿನಲ್ಲೇ ಅಂತ್ಯಗೊಳ್ಳುತ್ತಿತ್ತು.

ಇದ್ದಕ್ಕಿದ್ದಂತೆ ಮೂರ್ಛೆ ಹೋಗೋದು 'ಅಪಾಯ'! ತಕ್ಷಣ ವೈದ್ಯರ ಸಂಪರ್ಕಿಸಿ

ಅತೀವ ಉತ್ಸಾಹದಿಂದ ಪಾಲ್ಗೊಂಡ ದಿನೇಶ್ ಕುಮಾರ್, 10 ಕಿಲೋಮೀಟರ್ ಮ್ಯಾರಥಾನ್ ಓಟ ಪೂರೈಸಿ ಕಾಲೇಜಿಗೆ ಮರಳಿದ್ದಾನೆ. ಆದರೆ ತೀವ್ರ ಅಸ್ವಸ್ಥಗೊಂಡ ದಿನೇಶ್ ಕುಮಾರ್ ವಿಶ್ರಾಂತಿ ಕೊಠಡಿಗೆ ತೆರಳಿದ್ದಾನೆ. ಅಷ್ಟರಲ್ಲೇ ದಿನೇಶ್ ಕುಮಾರ್‌ಗೆ ತೀವ್ರ ಹೃದಯಾಘಾತ ಸಂಭಿವಿಸಿದೆ. ಇದರ ಪರಿಣಾಮ ದಿನೇಶ್ ಕುಮಾರ್ ದಿಢೀರ್ ಕುಸಿದು ಬಿದ್ದಿದ್ದಾನೆ. 

ಮ್ಯಾರಥಾನ್‌ನಲ್ಲಿ ಪಾಲ್ಗೊಂಡ ಇತರ ಸ್ಪರ್ಧಿಗಳು ತಕ್ಷಣವೇ ದಿನೇಶ್ ಕುಮಾರ್‌ನನ್ನು ಪರಿಶೀಲಿಸಿದ್ದಾರೆ. ಸ್ಥಳದಲ್ಲೇ ಇದ್ದ ಆ್ಯಂಬುಲೆನ್ಸ್ ಮೂಲಕ ರಾಜಾಜಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.  8.45ರ ವೇಳೆಗೆ ಆಸ್ಪತ್ರೆ ದಾಖಲಿಸಲಾಗಿದೆ. ನಾಡಿ ಮಿಡಿತ ಹಾಗೂ ಕಡಿಮೆ ರಕ್ತದೊತ್ತಡವೂ ದಿನೇಶ್ ಕುಮಾರ್‌ಗೆ ಕಾಡಿತ್ತು. ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ಆರಂಭಿಸಲಾಗಿತ್ತು. ದಿನೇಶ್ ಕುಮಾರ್ ಪ್ರಜ್ಞಾಹೀನಾ ಸ್ಥಿತಿ ಪೋಷಕರ ಆತಂಕ ಹೆಚ್ಚಿಸಿತ್ತು. ಇತ್ತ ವೈದ್ಯರು ಎಲ್ಲಾ ಪ್ರಯತ್ನ ಮಾಡಿದರೂ ದಿನೇಶ್ ಕುಮಾರ್ ಬದುಕಲಿಲ್ಲ. ಹೃದಯಾಘಾತದಿಂದ ದಿನೇಶ್ ಕುಮಾರ್ ಮೃತಪಟ್ಟಿದ್ದಾನೆ.

ವಿಮಾನದಲ್ಲಿ ಮಹಿಳೆಗೆ ಹೃದಯಸ್ತಂಭನ, ಚಿಕಿತ್ಸೆ ನೀಡಿ ರಕ್ಷಿಸಿದ ಎಸ್‌ಎಂ ಕೃಷ್ಣ ಅಳಿಯ!

ತ್ಯಾಗರಾಜರ್ ಎಂಜಿನೀಯರ್ ಕಾಲೇಜಿನ ಅಂತಿಮ ವರ್ಷದ ಬಿಇ ಮೆಕಾನಿಕಲ್ ಎಂಜಿನಿಯರ್ ವಿದ್ಯಾರ್ಥಿಯಾಗಿದ್ದ ದಿನೇಶ್ ಕುಮಾರ್‌ಗೆ ಯಾವುದೇ ಆರೋಗ್ಯ ಸಮಸ್ಯೆಗಳೂ ಇರಲಿಲ್ಲ. ಆರೋಗ್ಯವಾಗಿದ್ದ ದಿನೇಶ್ ಕುಮಾರ್ ದಿಢೀರ್ ದುರಂತ ಅಂತ್ಯಕೊಂಡಿದ್ದಾರೆ.ಕಲ್ಲಾಕುರುಚಿ ಜಿಲ್ಲೆಯ ದಿನೇಶ್ ಕುಮಾರ್ ನಿಧನಕ್ಕೆ ಆರೋಗ್ಯ ಸಚಿವ, ತೆರಿಗೆ ಸಚಿವ, ಮಧುರೈ ಮೆಡಿಕಲ್ ಕಾಲೇಜು ಸಂತಾಪ ಸೂಚಿಸಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್