
ನ್ಯೂಯಾರ್ಕ್/ವಾಷಿಂಗ್ಟನ್: ಹೊಸದಾಗಿ ನೀಡುವ ಎಚ್1ಬಿ ವೀಸಾ ಮೇಲೆ 90 ಲಕ್ಷ ರು. ಶುಲ್ಕ ವಿಧಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರದ ವಿರುದ್ಧ ಅಮೆರಿಕದ 20 ರಾಜ್ಯಗಳು ಕಾನೂನು ಹೋರಾಟಕ್ಕೆ ಮುಂದಾ ಗಿವೆ. ಟ್ರಂಪ್‌ರ ಈ ನಿರ್ಧಾರದಿಂದ ಆರೋಗ್ಯ ಶಿಕ್ಷಣ, ತಂತ್ರಜ್ಞಾನದಂಥ ಕ್ಷೇತ್ರಗಳಲ್ಲಿ ಕಾರ್ಮಿಕರ ಕೊರತೆ ಸೃಷ್ಟಿಯಾಗಲಿದೆ ಎಂದು ತಮ್ಮ ದಾವೆಯಲ್ಲಿ ಎಚ್ಚರಿಸಿವೆ.
ಮೆಸಾಚುಸೆಟ್ಸ್ ಜಿಲ್ಲಾ ಕೋರ್ಟ್‌ನಲ್ಲಿ ಈ ಸಂಬಂಧ ಮೊಕದ್ದಮೆ ದಾಖಲಿಸಿರುವ ನ್ಯೂಯಾರ್ಕ್‌ನ ಅಟಾರ್ನಿ ಜನರಲ್ ಲೆಟಿಟಿಯಾ ಜೇಮ್ಸ್ ಮತ್ತು ಇತರೆ 19 ಅಟಾರ್ನಿ ಜನರಲ್‌ಗಳು ಟ್ರಂಪ್ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಚ್1ಬಿ ವೀಸಾ ಶುಲ್ಕವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸುವ ನಿರ್ಧಾರವನ್ನು ಸೂಕ್ತ ಪ್ರಕ್ರಿಯೆಗಳನ್ನು ನಡೆಸದೆ ಕೈಗೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ಎಚ್ 1ಬಿ ವೀಸಾವು ಉನ್ನತ ಕೌಶಲ್ಯ ಹೊಂದಿರುವ ವಿದೇಶಿ ಕಾರ್ಮಿಕರಿಗೆ ತಾತ್ಕಾಲಿಕವಾಗಿ ಅಮೆರಿಕದಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡುತ್ತದೆ. ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಈ ವೀಸಾದ ಲಾಭ ಪಡೆಯುತ್ತಿದ್ದರು. ಇದೀಗ ಟ್ರಂಪ್ ಸರ್ಕಾರದ ಕ್ರಮವು ಆರೋಗ್ಯ, ಶಿಕ್ಷಣ, ತಂತ್ರಜ್ಞಾನ ಮತ್ತು ಇತರೆ ಅಗತ್ಯ ಸೇವೆಗಳ ಕ್ಷೇತ್ರಗಳಲ್ಲಿ ಎಚ್1 ಬಿ ವೀಸಾ ಮೇಲೆ ಅವಲಂಬಿತ ಸರ್ಕಾರಿ ಹಾಗೂ ಸೇವಾ ಸಂಸ್ಥೆಗಳ ಉದ್ಯೋಗದಾತರಿಗೆ ಸಂಕಷ್ಟ ತಂದೊಡ್ಡಲಿದೆ.
ಇದನ್ನೂ ಓದಿ: ನಿರ್ಮಲಾ ಸೀತಾರಾಮನ್ ಭಾರತದ ನಂ.1 ಪ್ರಭಾವಿ ಮಹಿಳೆ: ವಿಶ್ವದ ಪ್ರಭಾವಿಗಳಲ್ಲಿ ಭಾರತದ ಮೂವರಿಗೆ ಸ್ಥಾನ
ಟ್ರಂಪ್ ಸರ್ಕಾರ ನಮ್ಮ ಆರ್ಥಿಕತೆಗೆ ಹೊಡೆತ ನೀಡಲಿದೆ. ವಲಸಿಗರ ಮೇಲಿನ ದಾಳಿಯ ವಿರುದ್ಧ ನನ್ನ ಹೋರಾಟವನ್ನು ಮುಂದುವರಿಸುತ್ತೇನೆ ಎಂದು ನ್ಯೂಯಾರ್ಕ್ ಅಟಾರ್ನಿ ಜನರಲ್ ಜೇಮ್ಸ್ ಹೇಳಿದ್ದಾರೆ. ಸೆಪ್ಟೆಂಬರ್‌ನಲ್ಲಿ ಟ್ರಂಪ್ ಹೊಸ ಎಚ್ 1 ಬಿ ವೀಸಾಗೆ 90 ಲಕ್ಷ ರು. ಶುಲ್ಕ ವಿಧಿಸುವ ನಿರ್ಧಾರ ಪ್ರಕಟಿಸಿದ್ದರು.
ಯಾವ ರಾಜ್ಯಗಳಿಂದ ವಿರೋಧ?: ಅರಿಜೋನಾ, ಕ್ಯಾಲಿಫೋರ್ನಿಯಾ, ಕೊಲರಾಡೋ, ಕನೆಕ್ಟಿಕಟ್, ಡೆಲಾವರ್, ಹವಾಯಿ, ಇಲಿನಾಯ್ಸ್, ಮೇರಿಲ್ಯಾಂಡ್, ಮೆಸಾಚುಸೆಟ್ಸ್, ಮಿಚಿಗನ್, ಮಿನ್ನೆಸೊಟಾ, ನಾರ್ಥ್ ಕೆರೋಲಿನಾ, ನ್ಯೂಜೆನ್ಸಿ, ಓರೇಗನ್, ರೋಡ್ ಐಲ್ಯಾಂಡ್, ವರ್ಮೌಂಟ್, ವಾಷಿಂಗ್ಟನ್ ಮತ್ತು ವಿಲ್ಡನ್ಸಿನ್ ರಾಜ್ಯಗಳು ಟ್ರಂಪ್ ವಿರುದ್ಧ ಸಮರಕ್ಕೆ ಮುಂದಾಗಿವೆ.
ನ್ಯೂಯಾರ್ಕ್/ವಾಷಿಂಗ್ಟನ್: 'ತೆರಿಗೆ ಎಂಬುದಕ್ಕಿಂತ ಸುಂದರ ಪದವಿಲ್ಲ' ಎನ್ನುತ್ತಾ ತಮ್ಮ ವ್ಯಾಪಾರ ಪಾಲುದಾರ ದೇಶಗಳಿಗೆ ಮನಸೋಇಚ್ಚೆ ತೆರಿಗೆ ಬರೆ ಎಳೆಯುತ್ತಿರುವ ಅಧ್ಯಕ್ಷ ಟ್ರಂಪ್ ಅವರಿಗೆ ಅಮೆರಿಕನರಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ಭಾರತದ ಮೇಲೆ ಹೇರಿದ ಶೇ.50ರಷ್ಟು ತೆರಿಗೆಯನ್ನು ನಿಲ್ಲಿಸಬೇಕು ಎಂದು ಮೂವರು ಪ್ರಭಾವಿ ಸಂಸದರು ಸಂಸತ್ತಿನಲ್ಲಿ ನಿರ್ಣಯ ಮಂಡಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮಾಡಿದ್ದೆಲ್ಲಾ ತಪ್ಪು ಅನ್ನೋದು ತಪ್ಪು: ಕೈಗೆ ಮಾಜಿ ಕಾಂಗ್ರೆಸ್ಸಿಗನ ಸಲಹೆ
ಟ್ರಂಪ್ ನಡೆಯನ್ನು ಬೇಜವಾಬ್ದಾರಿಯುತ ಎಂದು ಕರೆದಿರುವ ಉತ್ತರ ಕ್ಯಾರೊಲಿನಾದ ಡೆಬೊರಾ ರಾಸ್, ಟೆಕ್ಸಸ್ ಮಾರ್ಕ್ ವೆಸಿ ಮತ್ತು ಇಲ್ಲಿನಾಯ್ಸ್‌ನ ರಾಜಾ ಕೃಷ್ಣಮೂರ್ತಿ, 'ಇದರಿಂದ ಉಭಯ ದೇಶಗಳ ನಡುವಿನ ಸಂಬಂಧ ದುರ್ಬಲವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಭಾರತ ಮೂಲದ ಕೃಷ್ಣಮೂರ್ತಿ, 'ಈ ತೆರಿಗೆಯು ಭಾರತದ ಸಂಬಂಧವನ್ನು ಹಾಳು ಮಾಡುತ್ತದೆ. ಅಮೆರಿಕದ ಹಿತಾಸಕ್ತಿ ರಕ್ಷಣೆಯಾಗುವ ಬದಲು, ಪೂರೈಕೆ ಸರಪಳಿಗೆ ಹೊಡೆತ ಬೀಳುತ್ತದೆ, ಅಮೆರಿಕದ ನೌಕರರಿಗೆ ಸಮಸ್ಯೆಯಾಗುತ್ತದೆ, ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಈ ತೆರಿಗೆಯನ್ನು ರದ್ದುಗೊಳಿಸುವುದರಿಂದ ಸಂಬಂಧ ವೃದ್ಧಿಯಾಗುತ್ತದೆ' ಎಂದು ಹೇಳಿದ್ದಾರೆ. ಇನ್ನಿಬ್ಬರು ಸಂಸದರು ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬ್ರೆಜಿಲ್ ಮೇಲಿನ ಸುಂಕವನ್ನು ಕೊನೆಗೊಳಿಸುವ ಮಸೂದೆ ಅಮೆರಿಕದ ಸೆನೆಟ್‌ನಲ್ಲಿ ಅಂಗೀಕಾರವಾದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ