ಸರ ಸರ ಪಡಿತರ.. 'ಒನ್ ನೇಷನ್, ಒನ್ ರೇಷನ್ ‌'..ಯಾರಿಗೆಲ್ಲ ಲಾಭ?

By Suvarna NewsFirst Published Mar 11, 2021, 4:58 PM IST
Highlights

ಕೇಂದ್ರ ಸರ್ಕಾರದ ಮಹತ್ವದ ಯೋಜನೆ/ ಒಂದು ದೇಶ, ಒಂದು ಪಡಿತರ/ ಯೋಜನೆ  ಅಳವಡಿಸಿಕೊಂಡ ಹದಿನೇಳು ರಾಜ್ಯಗಳು/ ಯಾರಿಗೆಲ್ಲ ಲಾಭವಾಗಲಿದೆ?

ನವದೆಹಲಿ(ಮಾ. 11)  ದೇಶದಾದ್ಯಂತ ಒಂದೇ ಪಡಿತರ ಚೀಟಿಯನ್ನು ಜಾರಿಗೆ ತರುವ ಉದ್ದೇಶ ಮಹತ್ವದ ಯೋಜನೆ 'ಒನ್ ನೇಷನ್, ಒನ್ ರೇಷನ್ ಕಾರ್ಡ್‌'  ಗೆ ಸಂಬಂಧಿಸಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಘೋಷಣೆಯನ್ನು ಕೇಂದ್ರ ಬಜೆಟ್ ನಲ್ಲಿ ಮಾಡಿದ್ದರು.

ಯೋಜನೆಯ ಜಾಲಕ್ಕೆ ಎಲ್ಲ ರಾಜ್ಯಗಳು ಹಾಗೂ 1 ಕೇಂದ್ರಾಡಳಿತ ಪ್ರದೇಶವನ್ನು ಒಳಪಡಿಸಲಾಗುತ್ತಿದೆ ಎಂದು ತಿಳಿಸಿದ್ದರು.  ಈ ಮಾತಿನಂತೆ ಹದಿನೇಳು ರಾಜ್ಯಗಳಲ್ಲಿ 'ಒನ್ ನೇಷನ್, ಒನ್ ರೇಷನ್ ಕಾರ್ಡ್‌'   ಅನುಷ್ಠಾನ ಆರಂಭವಾಗಿದ್ದು ಉತ್ತರಾಖಂಡ್ ಹೊಸದಾಗಿ ಸೇರಿಕೊಂಡಿದೆ.

ಗೃಹ ಪ್ರವೇಶದ ದಿನ ಬಡವರಿಗೆ ರೇಷನ್ ವಿತರಿಸಿದ ವ್ಯಾಪಾರಿ

ಈ ಯೋಜನೆ ಅಳವಡಿಕೆ ಮಾಡಿಕೊಳ್ಳುವ ರಾಜ್ಯಗಳಿಗೆ ಕೇಂದ್ರ ವಿಶೇಷ ಕೊಡುಗೆಗಳನ್ನು ಘೋಷಣೆ ಮಾಡಿದೆ. ಕೇಂದ್ರ ಹಣಕಾಸು ಇಲಾಖೆಯಿಂದ ಹೆಚ್ಚುವರಿಯಾಗಿ 37,600 ಕೋಟಿ ರೂ. ಪಡೆದುಕೊಳ್ಳಬಹುದು. 

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಈ ಯೋಜನೆ ಜಾರಿಯಾಗುತ್ತಿದೆ.  ನಾಗರಿಕ ಆಹಾರ ಪೂರೈಕೆ ವಿಚಾರದಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದೇ ಬಣ್ಣಿಸಲಾಗಿದೆ.

ಕಾರ್ಮಿಕರು, ದಿನಗೂಲಿ ನೌಕರರು, ನಗರ ಭಾಗದ  ಬಡ ಜನರು, ಬೀದಿ ಬದಿ ವ್ಯಾಪಾರಿಗಳು, ಅರೆಕಾಲಿಕ ನೌಕರರು, ಅಸಂಘಟಿತ ವಲಯದ ಕಾರ್ಮಿಕರಿಗೆ ಈ ಯೋಜನೆ ನೆರವಾಗಲಿದೆ.

ಒಂದು ದೇಶ, ಒಂದು ರೇಷನ್ ಕಾರ್ಡ್ ಯೋಜನೆ ಜಾರಿಗೊಳ್ಳುವುದರಿಂದ 30 ರಾಜ್ಯಗಳಲ್ಲಿ 67 ಕೋಟಿ ಫಲಾನುಭವಿಗಳಿಗೆ ಪಡಿತರ ಸೌಲಭ್ಯ ಸಿಗಲಿದೆ. ಮಾರ್ಚ್ 2021ರೊಳಗೆ ಶೇ 100ರಷ್ಟು ಫಲಾನುಭವಿಗಳನ್ನು ಕಾಣುವುದು ಸರ್ಕಾರ ಗುರಿ. ಯಾವುದೇ ಕುಟುಂಬ ಅಥವಾ ವ್ಯಕ್ತಿ ಯಾವುದೇ ಊರಿಗೆ ಹೋದರೂ ಅಲ್ಲಿರುವ ಪಡಿತರ ವಿತರಣೆ ಅಂಗಡಿಯಲ್ಲಿ ರೇಷನ್ ಕಾರ್ಡ್‌ ತೋರಿಸಿ ಆಹಾರ ಪದಾರ್ಥಗಳನ್ನು ಪಡೆಯಬಹುದಾಗಿದೆ. ಅಂದರೆ ಈ ಯೋಜನೆ ಅಳವಡಿಕೆ ಮಾಡಿಕೊಂಡ ಯಾವುದೆ ರಾಜ್ಯದಲ್ಲಿ ಪಡಿತರ ಪಡೆದುಕೊಳ್ಳಬಹುದು.

ಇದು ಬೋಗಸ್ ಮತ್ತು ನಕಲಿ ಕಾರ್ಡ್ ಗಳಿಗೆ ಬ್ರೇಕ್ ಹಾಕಲಿದೆ. ಈ ಮೂಲಕ ಅರ್ಹರಿಗೆ ಲಾಭ ಸಿಗಲಿದ್ದು ಸೋರಿಕೆಯನ್ನು ತಡೆಯಲಿದೆ.  ಆಧುನಿಕತೆ ಅಳವಡಿಕೆ ಮತ್ತೊಂದು  ಹೆಜ್ಜೆಯಾಗಿದ್ದು ಸಂಬಂಧಿಸಿದವರ ಆಧಾರ್ ಲಿಂಕ್ ಮಾಡುವುದರಿಂದ ಸುಲಭವಾಗಲಿದೆ.  ಇದೆಲ್ಲದರ  ಜತೆಗೆ ಯೋಜನೆ ಅಳವಡಿಕೆ ಮಾಡಿಕೊಳ್ಳುವ ರಾಜ್ಯಗಳು  ತಮ್ಮ ಜಿಎಸ್‌ಡಿಪಿ(ರಾಜ್ಯಗಳ ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್)  ಯಲ್ಲಿ ಶೇ.  2ರಷ್ಟನ್ನು  ಈ ಯೋಜನೆಗಾಗಿ ಪಡೆದುಕೊಳ್ಳಲು ಸಾಧ್ಯವಿದೆ.

ಆರ್ಟಿಕಲ್ 370 ಮೊದಲು ಏನಿತ್ತು? ನಂತರ ಏನಾಯಿತು?

ಈ ಯೋಜನೆಯಡಿ ಯಾವ ಯಾವ ರಾಜ್ಯಗಳು ಎಷ್ಟು ಹಣ ಪಡೆದುಕೊಳ್ಳಬಹುದು ಎಂಬ ವಿವರವನ್ನು ನೀಡಲಾಗಿದೆ.
1. ಆಂಧ್ರ ಪ್ರದೇಶ-2,525(ಕೋಟಿ ರೂ.) 
2. ಗೋವಾ- 223
3. ಗುಜರಾತ್- 4,352
4. ಹರ್ಯಾಣಾ- 2,146
5. ಹಿಮಾಚಲ ಪ್ರದೇಶ- 438
6. ಕರ್ನಾಟಕ- 4,509
7. ಕೇರಳ- 2,261
8. ಮಧ್ಯ ಪ್ರದೇಶ- 2,373
9. ಮಣಿಪುರ- 75
10.ಓರಿಸ್ಸಾ- 1,429
11. ಪಂಜಾಬ್- 1,516
12. ರಾಜಸ್ಥಾನ- 2,731
13. ತಮಿಳು ನಾಡು- 4,813
14. ತೆಲಂಗಾಣ -2,508
15. ತ್ರಿಪುರಾ- 148
16. ಉತ್ತರಾಖಂಡ-702
17. ಉತ್ತರ ಪ್ರದೇಶ-  4,851

 

click me!