ಸಿಕ್ಕಿಂ: ಸೇನಾ ಟ್ರಕ್ ಒಂದು ಕಡಿದಾದ ತಿರುವಿನಲ್ಲಿ ಪಲ್ಟಿಯಾದ ಪರಿಣಾಮ 16 ಯೋಧರು ದಾರುಣವಾಗಿ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿಕ್ಕಿಂನ ಝೆಮಾದಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ವಾಹನ 3-ಬೆಂಗಾವಲು ವಾಹನದ ಭಾಗವಾಗಿದ್ದು, ಬೆಳಗ್ಗೆ ಚಾಟೆನ್‌ನಿಂದ ಥಂಗು ಕಡೆಗೆ ಚಲಿಸಿತ್ತು. ಝೆಮಾ ಬಳಿ ಕಡಿದಾದ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಜಾರಿನ ಜೊತೆ ತಿರುವಿನಲ್ಲಿ ಸಾಗುತ್ತಿದ್ದಾಗ ಉರುಳಿದ್ದು, ಪರಿಣಾಮ 16 ಯೋಧರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೂಡಲೇ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಲಾಗಿದ್ದು, ತೀವ್ರ ಗಾಯಗೊಂಡ ನಾಲ್ವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.
ಅಪಘಾತ ಸ್ಥಳದಿಂದ 16 ಯೋಧರ ಮೃತದೇಹವನ್ನು ಸ್ಥಳಾಂತರಿಸಲಾಗಿದೆ. ಗಂಭೀರ ಗಾಯಗೊಂಡಿರುವ ಯೋಧರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ ಎಂದು ಛುಂಗ್ತಾಂಗ್ (Chungthang) ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಅರುಣ್ ಥತಲ್ (Arun Thatal) ಮಾಹಿತಿ ನೀಡಿದ್ದಾರೆ. ಅವರು ತಮ್ಮ ಪೊಲೀಸ್ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯೋಧರ ಪಾರ್ಥಿವ ಶರೀರಗಳನ್ನು ಗಂಗ್ಟಾಕ್‌ನಲ್ಲಿರುವ ಸರ್ಕಾರಿ ಸ್ವಾಮ್ಯದ ಎಸ್‌ಟಿಎನ್‌ಎಂ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಹುತಾತ್ಮ ಯೋಧರು ಯಾವ ರೆಜಿಮೆಂಟ್‌ಗೆ ಸೇರಿದವರೆಂದು ಇನ್ನಷ್ಟೇ ಖಚಿತವಾಗಬೇಕಿದೆ. ಈ ಅವಘಡಕ್ಕೆ ಕೇಂದ್ರ ರಕ್ಷಣಾ ಸಚಿವ (Defence Minister) ರಾಜನಾಥ್ ಸಿಂಗ್ (Rajnath Singh ) ಸಂತಾಪ ವ್ಯಕ್ತಪಡಿಸಿದ್ದು, ಉತ್ತರ ಸಿಕ್ಕಿಂನಲ್ಲಿ (Sikkim) ನಡೆದ ಭೀಕರ ಅಪಘಾತದಿಂದ ತುಂಬಾ ದುಃಖವಾಗಿದ್ದು, ಅಪಘಾತದಲ್ಲಿ ಮಡಿದ ಯೋಧರ ಸೇವೆಗೆ ನಾನು ಅಪಾರವಾಗಿ ಕೃತಜ್ಞನಾಗಿದ್ದೇನೆ. ಅಪಘಾತದಲ್ಲಿ ಮಡಿದ ಯೋಧರ ಕುಟುಂಬಕ್ಕೆ ನನ್ನ ಸಂತಾಪಗಳು. ಗಾಯಾಳುಗಳು ಆದಷ್ಟು ಬೇಗ ಗುಣಮುಖರಾಗಲಿ ಎಂದು ಅವರು ಟ್ವಿಟ್ ಮಾಡಿದ್ದಾರೆ.
ಈ ಬಾರಿ ಬೆಂಗಳೂರಿನಲ್ಲಿ ಭಾರತೀಯ ಸೇನಾ ಪಥಸಂಚಲನ ದಿನ, ಫೀಲ್ಡ್ ಮಾರ್ಷಲ್ ಕಾರ್ಯಪ್ಪಗೆ ಗೌರವ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ