ಲಾರಿಯಿಂದ ಬಿದ್ದ ಮದಿರೆಗಾಗಿ ಮುಗಿಬಿದ್ದ ಜನ... ವಿಡಿಯೋ ವೈರಲ್

By Anusha Kb  |  First Published Dec 23, 2022, 3:53 PM IST

ಮದ್ಯ ಸಾಗಿಸುತ್ತಿರುವ ಲಾರಿಯೊಂದು ಅಪಘಾತಕ್ಕೀಡಾಗಿದ್ದು, ಅದರಿಂದ ಬಿದ್ದ ಮದ್ಯದ ಬಾಟಲಿಗಾಗಿ ಕುಡುಕರು ಮುಗಿಬಿದ್ದ ಘಟನೆ ಕೇರಳದ ಕೋಝಿಕೋಡ್‌ನಲ್ಲಿ ನಡೆದಿದೆ. 


ಕೋಜಿಕೋಡ್: ಯಾವುದೇ ವಸ್ತುವಾದ್ರೂ ಧರ್ಮಕ್ಕೆ ಸಿಕ್ಕಿದರೆ ಯಾರಿಗೆ ಬೇಡ ಅದರಲ್ಲೂ ಸರಾಯಿ ಬಾಟಲ್ ಸಿಕ್ಕರೆ ಬೇಡ ಅನ್ನೋರು ಯಾರಿದ್ದಾರೆ ಹೇಳಿ. ಕುಡುಕರ ಪಾಲಿಗಂತು ಅದೇ ಸ್ವರ್ಗ. ಹೀಗಿರುವಾಗ ಮದ್ಯ ಸಾಗಿಸುತ್ತಿರುವ ಲಾರಿಯೊಂದು ಅಪಘಾತಕ್ಕೀಡಾಗಿದ್ದು, ಅದರಿಂದ ಬಿದ್ದ ಮದ್ಯದ ಬಾಟಲಿಗಾಗಿ ಕುಡುಕರು ಮುಗಿಬಿದ್ದ ಘಟನೆ ಕೇರಳದ ಕೋಝಿಕೋಡ್‌ನಲ್ಲಿ ನಡೆದಿದೆ.  ಮದ್ಯವನ್ನು ಸಾಗಿಸುತ್ತಿದ್ದ ಟ್ರಕ್ ಕಬ್ಬಿಣದ ಸೇತುವೆಗೆ ಡಿಕ್ಕಿ ಹೊಡೆದಿದ್ದರಿಂದ ಅದರಲ್ಲಿದ್ದ ಬಾಟಲ್‌ಗಳು ಕೆಳಗೆ ಬಿದ್ದು, ಕುಡುಕರ ಪಾಲಿಗೆ ಸಂತಸದ ಹೊಳೆ ಹರಿಸಿದೆ. ಅಪಘಾತದ ನಂತರ ಟ್ರಕ್ ನಿಲ್ಲದೇ ಮುಂದೆ ಸಾಗಿದ ಪರಿಣಾಮ ಕೆಳಗೆ ಬಿದ್ದ ಮದ್ಯದ ಬಾಟಲ್‌ನ್ನು ಹೆಕ್ಕಲು ಕುಡುಕರು ಮುಗಿಬಿದ್ದಿದ್ದಾರೆ. ವಿಡಿಯೋದಲ್ಲಿ ಜನ ಬಿಟ್ಟಿಯಾಗಿ ಸಿಕ್ಕಿ ಮದ್ಯದ ಬಾಟಲನ್ನು ಪಡೆಯಲು ಮುಗಿಬೀಳುತ್ತಿರುವ ದೃಶ್ಯ ಸೆರೆ ಆಗಿದೆ. 

ಮಲೆಯಾಳಂ ಟಿವಿ ಚಾನಲ್ ಮನೋರಮಾ (Manorama News) ಈ ದೃಶ್ಯವನ್ನು ಇನ್ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್ ಮಾಡಿದೆ. ಈ ವಿಡಿಯೋದಲ್ಲಿ ಪೊಲೀಸರೆದುರೇ ಜನ ಮದ್ಯದ ಬಾಟಲಿಗೆ ಮುಗಿಬೀಳುವ, ಅಲ್ಲದೇ ಕೈಗೆ ಸಿಕ್ಕ ಬಾಟಲಿಗಳನ್ನು ಆಟೋಗೆ ತುಂಬುತ್ತಿರುವ ದೃಶ ಸೆರೆ ಆಗಿದೆ. ಅನೇಕರ ನೆಟ್ಟಿಗರು ಇದನ್ನು ಕ್ರಿಸ್‌ಮಸ್ ಗಿಫ್ಟ್ ಎಂದು ಬಣ್ಣಿಸಿದ್ದಾರೆ. ಕೆಲವರು ಹ್ಯಾಪಿ ಕ್ರಿಸ್‌ಮಸ್ ಎಂದು ಕಾಮೆಂಟ್ ಮಾಡಿದರೆ ಮತ್ತೆ ಕೆಲವರು ಕ್ರಿಸ್‌ಮಸ್( X-Mas) ಹಬ್ಬ ಆಚರಿಸಲು ಕೇರಳಿಗರಿಗೆ ಇದಕ್ಕಿಂತ ಹೆಚ್ಚು ಇನ್ನೇನು ಬೇಕು ಎಂದು ಬಣ್ಣಿಸಿದ್ದಾರೆ. 

Tap to resize

Latest Videos

Davanagere: ಶಾಲೆಯ ಆವರಣ ಕುಡುಕರ ದಿನನಿತ್ಯದ ಪಾರ್ಟಿ ಹಾಲ್, 1200 ಬಿಯರ್ ಬಾಟಲ್ ಪತ್ತೆ!

ಮಾಧ್ಯಮಗಳ ವರದಿಯ ಪ್ರಕಾರ, ಈ ಘಟನೆ ಡಿಸೆಂಬರ್ 20 ರಂದು ಬೆಳಗ್ಗೆ 6.30ಕ್ಕೆ ಈ ಘಟನೆ ನಡೆದಿದೆ. ಹರಿಯಾಣ ನೋಂದಣಿಯ ಟ್ರಕ್ (Haryana-registered truck) ಪಂಜಾಬ್‌ನಿಂದ (Punjab) ಆಗಮಿಸಿ ಕೇರಳದ (Kerala) ಕೊಲ್ಲಂಗೆ (Kollam) ತೆರಳುತ್ತಿತ್ತು. ಇತ್ತ ಪೊಲೀಸರಿಗೆ 965 ಬಾಟಲ್‌ಗಳು ಸಿಕ್ಕಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಟ್ರಕ್ ಚಾಲಕನಿಗೆ ಬಲೆ ಬೀಸಿದ್ದಾರೆ.  

ಈ ಕುಡುಕ ಫುಲ್ಲು ಫಾಸ್ಟ್... 24 ಗಂಟೆಯಲ್ಲಿ 78 ಪಬ್‌ಗಳಲ್ಲಿ ಕುಡಿದು ದಾಖಲೆ


 

click me!