150 ಕಿ.ಮೀ ವೇಗದಲ್ಲಿ ಬಿ​ಪೊ​ರ್‌​ಜೊಯ್‌ ದಾಳಿ : ತೈಲ ಬಾವಿಯಲ್ಲಿ ಕೆಲಸ ಮಾಡುತ್ತಿದ್ದ 11 ಜನರ ಏರ್‌ಲಿಫ್ಟ್‌

Published : Jun 13, 2023, 08:55 AM ISTUpdated : Jun 13, 2023, 09:38 AM IST
150 ಕಿ.ಮೀ ವೇಗದಲ್ಲಿ ಬಿ​ಪೊ​ರ್‌​ಜೊಯ್‌ ದಾಳಿ : ತೈಲ ಬಾವಿಯಲ್ಲಿ ಕೆಲಸ ಮಾಡುತ್ತಿದ್ದ 11 ಜನರ ಏರ್‌ಲಿಫ್ಟ್‌

ಸಾರಾಂಶ

ಅತಿ ತೀವ್ರ ಸ್ವರೂ​ಪದ ಚಂಡಮಾ​ರು​ತ​ವಾಗಿ ಪರಿವರ್ತ​ನೆಗೊಂಡಿ​ರುವ ‘ಬಿ​ಪೊ​ರ್‌ಜೊಯ್‌’ ಚಂಡ​ಮಾ​ರುತ, ಗುಜ​ರಾತ್‌ನ ಕಛ್‌ ಜಿಲ್ಲೆಯ ಜಖಾವು ಬಂದ​ರಿಗೆ ಜೂ.15ರಂದು ಅಪ್ಪ​ಳಿ​ಸುವ ಸಾಧ್ಯತೆ ಇದೆ.

ಅಹ​ಮ​ದಾ​ಬಾ​ದ್‌: ಅತಿ ತೀವ್ರ ಸ್ವರೂ​ಪದ ಚಂಡಮಾ​ರು​ತ​ವಾಗಿ ಪರಿವರ್ತ​ನೆಗೊಂಡಿ​ರುವ ‘ಬಿ​ಪೊ​ರ್‌ಜೊಯ್‌’ ಚಂಡ​ಮಾ​ರುತ, ಗುಜ​ರಾತ್‌ನ ಕಛ್‌ ಜಿಲ್ಲೆಯ ಜಖಾವು ಬಂದ​ರಿಗೆ ಜೂ.15ರಂದು ಅಪ್ಪ​ಳಿ​ಸುವ ಸಾಧ್ಯತೆ ಇದೆ. ಚಂಡ​ಮಾ​ರು​ತವು ಗಂಟೆಗೆ 150 ಕಿ.ಮೀ. ವೇಗದ ಬಿರು​ಗಾ​ಳಿ​ಯೊಂದಿಗೆ ಬೀಸುವ ಸಾಧ್ಯತೆ ಇದ್ದು, ಭಾರಿ ವಿನಾಶ ಸೃಷ್ಟಿಸುವ ಭೀತಿ ಎದು​ರಾ​ಗಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (, Prime Minister Narendra Modi) ಅವರು ದಿಲ್ಲಿ​ಯಲ್ಲಿ ಉನ್ನತ ಅಧಿ​ಕಾ​ರಿ​ಗಳ ಸಭೆ ನಡೆಸಿ, ವಿಪತ್ತು ನಿರ್ವ​ಹ​ಣೆಗೆ ಸನ್ನದ್ಧ ಸ್ಥಿತಿ​ಯಲ್ಲಿ​ರು​ವಂತೆ ಆಡ​ಳಿ​ತಕ್ಕೆ ಸೂಚಿ​ಸಿ​ದ್ದಾ​ರೆ.

ಸಂಭಾವ್ಯ ಅನಾ​ಹುತ ತಪ್ಪಿ​ಸುವ ಉದ್ದೇ​ಶ​ದಿಂದ ಕಛ್‌, ಪೋರ​ಬಂದರ್‌(Porbandar), ದೇವ​ಭೂಮಿ ದ್ವಾರಕಾ (Devabhoomi Dwarka), ಜುನಾ​ಗಢ (Junagadh) ಹಾಗೂ ಮೋರ್ಬಿ​ ಕರಾ​ವ​ಳಿಯಲ್ಲಿ ಅಪಾ​ಯದ ವಲ​ಯ​ದ​ಲ್ಲಿ​ರುವ ಜನರ ತೆರವು ಕಾರ್ಯಾ​ಚ​ರಣೆ ಆರಂಭ​ವಾ​ಗಿದೆ. ಸೋಮ​ವಾರ ಸುಮಾರು 7500 ಜನ​ರನ್ನು ಸುರ​ಕ್ಷಿತ ಸ್ಥಳಕ್ಕೆ ಸ್ಥಳಾಂತ​ರಿ​ಸ​ಲಾ​ಗಿದೆ. ಇನ್ನು ಸಮು​ದ್ರ​ದಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ಅಪಾ​ಯದ ವಲ​ಯ​ವನ್ನು ಗುರುತಿಸ​ಲಾ​ಗಿದ್ದು, ಶೀಘ್ರ ಇನ್ನೂ 23 ಸಾವಿರ ಮಂದಿ​ಯನ್ನು ಸ್ಥಳಾಂತ​ರಿ​ಸ​ಲಾ​ಗು​ತ್ತದೆ ಎಂದು ರಾಜ್ಯ ಸರ್ಕಾರ ಹೇಳಿದೆ.

Cyclone Biparjoy: ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಭಾರೀ ಮಳೆ ಸಾಧ್ಯತೆ, ಹವಾಮಾನ ಇಲಾಖೆ ಮುನ್ಸೂಚನೆ!

ಚಂಡ​ಮಾರುತ ಸೋಮ​ವಾರ ಬೆಳಗ್ಗೆ 8.30ಕ್ಕೆ ಪೋರ​ಬಂದ​ರ್‌​ನಿಂದ ನೈಋುತ್ಯ ಭಾಗಕ್ಕೆ 320 ಕಿ.ಮೀ. ದೂರ​ದ​ಲ್ಲಿತ್ತು. ಹೀಗಾಗಿ ಕಛ್‌ ಹಾಗೂ ಸೌರಾ​ಷ್ಟ್ರ​ದಲ್ಲಿ ಈಗಾ​ಗಲೇ ಭಾರಿ ಗಾಳಿ ಬೀಸ​ತೊ​ಡ​ಗಿದೆ. ವಲ್ಸದ್‌, ಗಿರ್‌, ಭಾವ​ನಗರ ಹಾಗೂ ಅಮ್ರೇಲಿ ಜಿಲ್ಲೆ​ಗ​ಳಲ್ಲಿ ಸೋಮ​ವಾರ ಭಾರಿ ಮಳೆ ಬಿದ್ದಿ​ದೆ. ಜೂ.15 ಹಾಗೂ 16ರಂದು ಈ ವಲ​ಯ​ದಲ್ಲಿ ಭಾರಿ ಮಳೆ ಆಗ​ಲಿದೆ ಎಂದು ಭಾರ​ತೀಯ ಹವಾ​ಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಡಲಿಗೆ ಯಾರೂ ಇಳಿ​ಯ​ದಂತೆ ಕಟ್ಟೆ​ಚ್ಚರ ಸಾರ​ಲಾ​ಗಿ​ದೆ.

ಈ ನಡು​ವೆ, ಮುಂಜಾ​ಗ್ರತಾ ಕ್ರಮ​ವಾಗಿ ಪಿಪಾ​ವಾವ್‌ ಬಂದ​ರಿನ (Pipavao port) ಕೆಲ​ಸ​ವನ್ನು ಸ್ಥಗಿ​ತ​ಗೊ​ಳಿ​ಸ​ಲಾ​ಗಿ​ದೆ. ಇನ್ನು ದೇಶದ 2 ಮುಖ್ಯ ಬಂದ​ರು​ಗ​ಳಾದ ಕಾಂಡ್ಲಾ ಹಾಗೂ ಮುಂದ್ರಾ ಬಂದ​ರು​ಗಳ ಗುಜ​ರಾತ್‌ ಕರಾ​ವ​ಳಿ​ಯಲ್ಲೇ ಇದ್ದು, ಅಲ್ಲೂ ಮುಂಜಾ​ಗ್ರತೆ ವಹಿ​ಸ​ಲಾ​ಗಿ​ದೆ. ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ನಿರ್ವ​ಹಣಾ ಪಡೆಗಳ 19 ತಂಡ​ಗಳು (7 ಎ​ನ್‌​ಡಿ​ಆ​ರ್‌​ಎ​ಫ್‌ ಹಾಗೂ 12 ಎಸ್‌ಡಿಆರ್‌​ಎ​ಫ್‌ ತಂಡ​ಗ​ಳು) ಸನ್ನದ್ಧ ಸ್ಥಿತಿ​ಯ​ಲ್ಲಿವೆ. ಸೇನೆ, ನೌಕಾ​ಪಡೆ ಹಾಗೂ ಕರಾ​ವಳಿ ಪಡೆ​ಗಳ (Army, navy and security forces)ಜತೆಗೂ ಗುಜ​ರಾತ್‌ ಸರ್ಕಾರ ಸಂಪ​ರ್ಕ​ದ​ಲ್ಲಿದ್ದು, ತೀರಾ ಆಪಾ​ಯದ ಸ್ಥಿತಿ ಸೃಷ್ಟಿಯಾ​ದರೆ ನೆರ​ವಿಗೆ ಬರು​ವಂತೆ ಕೋರ​ಲಾ​ಗಿ​ದೆ.

Ian Cyclone ಅಬ್ಬರ: ನೀರಿನಲ್ಲಿ ಕೊಚ್ಚಿ ಹೋದ 8 ಕೋಟಿ ಮೊತ್ತದ ಕಾರು

ಪಾಕ್‌​ನಲ್ಲೂ ಕಟ್ಟೆ​ಚ್ಚ​ರ:

ಗುಜ​ರಾತ್‌ ಕರಾ​ವ​ಳಿಗೆ ಹೊಂದಿ​ಕೊಂಡಿ​ರುವ ಪಾಕಿ​ಸ್ತಾ​ನದ ಸಿಂಧ್‌ ಪ್ರಾಂತ್ಯ​ದಲ್ಲೂ ಕಟ್ಟೆ​ಚ್ಚರ ಘೋಷಿ​ಸ​ಲಾ​ಗಿದೆ. ತೀರ ಪ್ರದೇ​ಶದ ಜನರ ಸ್ಥಳಾಂತರ ಆರಂಭಿ​ಸ​ಲಾ​ಗಿ​ದೆ.ಈ ಹಿಂದೆ ಗುಜ​ರಾ​ತ್‌​ನಲ್ಲಿ 1998ರಲ್ಲಿ ಬೀಸಿದ ಚಂಡ​ಮಾ​ರುತ 4000 ಜನ​ರನ್ನು ಬಲಿ ​ಪ​ಡೆ​ದಿ​ತ್ತು.

ಸುದೀರ್ಘದ ದಾಖಲೆ:

ಬಿಪೊರ್‌ಜೊಯ್‌, ಅರಬ್ಬಿಸಮುದ್ರದಲ್ಲಿ ಅತಿಹೆಚ್ಚು ಜೀವಿತಾವಧಿ ಹೊಂದಿದ್ದ ಚಂಡಮಾರುತ ಎಂಬ ದಾಖಲೆಗೆ ಪಾತ್ರವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಜೂ.6ರಂದು ಸೃಷ್ಟಿಯಾಗಿದ್ದ ಚಂಡಮಾರುತ ಜೂ.15ರಂದು ಗುಜರಾತ್‌ ಕರಾವಳಿ ಹಾದು ಹೋಗಲಿದೆ. ಅಂದರೆ 10 ದಿನಗಳ ಕಾಲ ಇರಲಿದೆ. ಈ ಹಿಂದೆ 2019ರಲ್ಲಿ ಅಪ್ಪಳಿಸಿದ್ದ ಕ್ಯಾರ್‌ ಚಂಡಮಾರುತ 9 ದಿನ 15 ಗಂಟೆ ಇತ್ತು. ಅದೇ ರೀತಿ 2018ರಲ್ಲಿ ದಾಳಿ ಮಾಡಿದ್ದ ಗಜ ಕೂಡಾ 9 ದಿನ 15 ಗಂಟೆಗಳ ಕಾಲ ಇತ್ತು.

11 ಜನರ ಏರ್‌ಲಿಫ್ಟ್‌

ಚಂಡಮಾರುತ ಅತ್ಯಂತ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಗುಜರಾತ್‌ ಕರಾವಳಿಯ ದ್ವಾರಕಾ ಬಳಿ ಇರುವ ತೈಲ ಬಾವಿಯಲ್ಲಿ ಕೆಲಸ ಮಾಡುತ್ತಿದ್ದ 11 ಜನರನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿ ಏರ್‌ಲಿಫ್ಟ್ ಮಾಡಿ ಸುರಕ್ಷಿತವಾಗಿ ಕರೆತಂದಿದ್ದಾರೆ. ಅಪಾಯ ವಲ​ಯ​ದ​ಲ್ಲಿ​ರುವ ಜನರ ಸುರ​ಕ್ಷ​ತೆಗೆ ಗಮನ ಕೊಡಿ. ಕೂಡಲೇ ಅವ​ರನ್ನು ಸುರ​ಕ್ಷಿತ ಸ್ಥಳಕ್ಕೆ ಸ್ಥಳಾಂತ​ರಿಸಿ. ಎಲ್ಲ ಮುಂಜಾ​ಗ್ರತಾ ಕ್ರಮ​ಗ​ಳನ್ನು ಕೈಗೊಂಡು ಜೀವ ಹಾನಿ ತಪ್ಪಿ​ಸಿ. ಅಗತ್ಯ ವಸ್ತು​ಗ​ಳನ್ನು ಸಿದ್ಧ​ವಾ​ಗಿಡಿ. ಒಂದು ವೇಳೆ ಅನಾ​ಹುತ ಸಂಭ​ವಿ​ಸಿ​ದರೆ ಮರು​ ನಿ​ರ್ಮಾಣ ಕಾರ್ಯ ತಕ್ಷ​ಣವೇ ಆರಂಭ​ವಾ​ಗು​ವಂತೆ ಎಲ್ಲ ಸಿದ್ಧತೆ ಮಾಡಿ​ಕೊ​ಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!