
ಭೋಪಾಲ್: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳಿದ್ದ 'ಸಾತ್ಪುರ ಭವನ' ಕಟ್ಟಡದ 3ನೇ ಮಹಡಿಯಲ್ಲಿ ಸೋಮವಾರ ಸಂಜೆ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಸುದೈವವಶಾತ್ ಸಿಬ್ಬಂದಿಗಳೆಲ್ಲ ಮನೆಗೆ ತೆರಳಿದ್ದರಿಂದ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಬೆಂಕಿ ಹೊತ್ತಿ ಉರಿದ ಮಹಡಿಯಲ್ಲಿ ಸರ್ಕಾರದ ಪ್ರಮುಖ ಕಡತಗಳಿದ್ದವು ಎನ್ನಲಾಗಿದೆ. ಕಟ್ಟಡದಲ್ಲಿ ಭ್ರಷ್ಟಾಚಾರ ಮತ್ತು ಹಗರಣಗಳಿಗೆ ಸಂಬಂಧಿಸಿದ ದಾಖಲೆಗಳಿದ್ದವು. ಈ ಸಾಕ್ಷಿಗಳನ್ನು ನಾಶ ಮಾಡುವ ಉದ್ದೇಶದಿಂದಲೇ ಕಟ್ಟಡಕ್ಕೆ ಉದ್ದೇಶಪೂರ್ವಕವಾಗಿ ಸರ್ಕಾರ ಬೆಂಕಿ ಹಚ್ಚಿದೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ ಕಾರಿದೆ.
ಬೆಂಕಿ ನಂದಿಸಲು 22 ಅಗ್ನಿಶಾಮಕ ದಳಗಳು ಮತ್ತು 30-40 ಟ್ಯಾಂಕರ್ ಕರೆತರಲಾಗಿದ್ದು ಇವು ಬೆಂಕಿ ನಂದಿಸಲು ಹರಸಾಹಸ ಪಟ್ಟವು. ಇದಕ್ಕಾಗಿ ಇಂಡಿಯಾ ಆಯಿಲ್ ಕಾರ್ಪೋರೇಷನ್, ಬಿಪಿಸಿಎಲ್ ಸೇರಿದಂತೆ ಅನೇಕ ಅಗ್ನಿಶಾಮಕ ಟೆಂಡರ್‌ಗಳನ್ನು ಕರೆಸಲಾಗಿತ್ತು. ಇನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ (Amith sha), ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath singh) ಅವರೊಂದಿಗೆ ಘಟನೆ ಬಗ್ಗೆ ಮಾತುಕತೆ ನಡೆಸಿ ಎಎನ್-32 ವಿಮಾನ, ಮತ್ತು ಎಂ1-15 ಹೆಲಿಕಾಪ್ಟರ್‌ಗಳನ್ನು ಸಹಾಯಕ್ಕಾಗಿ ಕೋರಿದ್ದಾರೆ. ಇವು ರಾತ್ರಿ ಭೋಪಾಲ್ ತಲುಪಿ ಕಟ್ಟಡದ ಮೇಲಿನಿಂದ ನೀರು ಸುರಿಯುವ ಮೂಲಕ ಬೆಂಕಿ ನಂದಿಸುವಲ್ಲಿ ಸಹಾಯ ಮಾಡಿದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳದಲ್ಲಿ ಮತ್ತೆ ರೈಲಲ್ಲಿ ಬೆಂಕಿ: ಸಿಸಿಟಿವಿಯಲ್ಲಿ ಕ್ಯಾನ್ ಹಿಡಿದ ವ್ಯಕ್ತಿ ಪತ್ತೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ