ಮಧ್ಯಪ್ರದೇಶ: 220 ತಿಂಗಳ ​ಬಿ​ಜೆಪಿ ಆಡ​ಳಿತದಲ್ಲಿ 225 ಹಗ​ರ​ಣ: ಪ್ರಿಯಾಂಕಾ ವಾಗ್ದಾಳಿ

Published : Jun 13, 2023, 08:09 AM IST
ಮಧ್ಯಪ್ರದೇಶ: 220 ತಿಂಗಳ ​ಬಿ​ಜೆಪಿ ಆಡ​ಳಿತದಲ್ಲಿ 225 ಹಗ​ರ​ಣ: ಪ್ರಿಯಾಂಕಾ ವಾಗ್ದಾಳಿ

ಸಾರಾಂಶ

ಮಧ್ಯ​ಪ್ರ​ದೇಶ ವಿಧಾ​ನ​ಸಭೆ ಚುನಾ​ವ​ಣೆಯಲ್ಲಿ ಕಾಂಗ್ರೆಸ್‌ ಪರ ಪ್ರಚಾ​ರಕ್ಕೆ ಹಿರಿಯ ನಾಯಕಿ ಪ್ರಿಯಾಂಕಾ ವಾದ್ರಾ ಸೋಮ​ವಾರ ಚಾಲನೆ ನೀಡಿ​ದ್ದು, ‘ಬಿ​ಜೆಪಿ ವೈಫ​ಲ್ಯ​ಗಳ’ ವಿರುದ್ಧ ಹರಿ​ಹಾ​ಯ್ದಿ​ದ್ದಾರೆ.

ಜಬ​ಲ್ಪು​ರ: ಮಧ್ಯ​ಪ್ರ​ದೇಶ ವಿಧಾ​ನ​ಸಭೆ ಚುನಾ​ವ​ಣೆಯಲ್ಲಿ ಕಾಂಗ್ರೆಸ್‌ ಪರ ಪ್ರಚಾ​ರಕ್ಕೆ ಹಿರಿಯ ನಾಯಕಿ ಪ್ರಿಯಾಂಕಾ ವಾದ್ರಾ ಸೋಮ​ವಾರ ಚಾಲನೆ ನೀಡಿ​ದ್ದು, ‘ಬಿ​ಜೆಪಿ ವೈಫ​ಲ್ಯ​ಗಳ’ ವಿರುದ್ಧ ಹರಿ​ಹಾ​ಯ್ದಿ​ದ್ದಾರೆ.

ಜಬ​ಲ್ಪು​ರ​ದಲ್ಲಿ ಪ್ರಚಾರ ಆರಂಭಿಸಿ ಮಾತ​ನಾ​ಡಿದ ಪ್ರಿಯಾಂಕಾ, ‘ಕೊಟ್ಟ ಭರ​ವ​ಸೆ​ಗ​ಳನ್ನು ಮಧ್ಯ​ಪ್ರ​ದೇಶ ಸರ್ಕಾರ ಈಡೇ​ರಿ​ಸಿ​ಲ್ಲ ಹಾಗೂ ಹಗ​ರ​ಣ​ದಲ್ಲಿ (scam) ನಿರ​ತ​ವಾ​ಗಿದೆ. 3 ವರ್ಷ​ದಲ್ಲಿ ಕೇವಲ 21 ಜನ​ರಿಗೆ ಸರ್ಕಾರಿ ನೌಕರಿ ನೀಡಿದೆ. ತನ್ನ ಈವ​ರೆ​ಗಿನ 220 ತಿಂಗಳ ಆಡ​ಳಿ​ತ​ದಲ್ಲಿ (ಶಿ​ವ​ರಾಜ್‌ ಸಿಂಗ್‌ರ ಎಲ್ಲ ಹಾಗೂ ಉಮಾ​ಭಾ​ರತಿ ಅವಧಿ ಸೇರಿ​) ಆದರೆ 225 ಹಗ​ರ​ಣ​ಗ​ಳನ್ನು ಮಾಡಿದೆ. ಅದರಲ್ಲಿ ವ್ಯಾಪಂ ಹಗ​ರಣ (Vyapam Scam), ಪಡಿ​ತರ ಹಗ​ರಣ (Ration scam) ಸೇರಿ​ವೆ’ ಎಂದು ಆರೋ​ಪಿ​ಸಿ​ದ​ರು.

‘ಮ​ಧ್ಯ​ಪ್ರ​ದೇಶ ಜನ​ರನ್ನು 18 ವರ್ಷದ ಆಡ​ಳಿ​ತ​ದಲ್ಲಿ ಬಿಜೆಪಿ ಬಳಸಿ ಬಿಸಾ​ಕಿದೆ. ಆದರೆ ಅವರ ಕನಸು ಈಡೇ​ರಿ​ಸಿಲ್ಲ. ಹೀಗಾ​ಗಿಯೇ ಕರ್ನಾ​ಟಕ ಹಾಗೂ ಹಿಮಾ​ಚ​ಲ​ದಲ್ಲಿ ಬಿಜೆ​ಪಿಗೆ ಜನ ದಿಟ್ಟಉತ್ತರ ನೀಡಿ​ದ್ದಾರೆ. ಕಾಂಗ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಮಾಡು​ತ್ತಿ​ರುವ ಅವ​ಮಾ​ನ​ಗಳ ಪಟ್ಟಿ​ಗಿಂತ, ಬಿಜೆಪಿ ಹಗ​ರ​ಣ​ಗಳ ಪಟ್ಟಿದೊಡ್ಡ​ದಿ​ದೆ’ ಎಂದ​ರು.

ಕಾಂಗ್ರೆ​ಸ್‌ನ ‘ಕರ್ನಾ​ಟಕ ಗ್ಯಾ​ರಂಟಿ​’​ಗಳ ಬಗ್ಗೆ ಕುಹ​ಕ​ವಾ​ಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾ​ಟೆಗೆ ತೆಗೆ​ದು​ಕೊಂಡ ಪ್ರಿಯಾಂಕಾ, ಮಧ್ಯ​ಪ್ರ​ದೇ​ಶ​ದಲ್ಲಿ ಕಾಂಗ್ರೆಸ್‌ ಅಧಿ​ಕಾ​ರಕ್ಕೆ ಬಂದ​ರೆ ಮಹಿ​ಳೆ​ಯ​ರಿಗೆ ಮಾಸಿಕ 1500 ರು. ಭತ್ಯೆ, 100 ಯುನಿಟ್‌ ಉಚಿತ ವಿದ್ಯುತ್‌, 500 ರು.ಗೆ ಗ್ಯಾಸ್‌ ಸಿಲಿಂಡರ್‌, ರೈತ ಸಾಲ ಮನ್ನಾ, ಹಳೇ ಪಿಂಚಣಿ ಯೋಜನೆ ಜಾರಿ- ಈ 5 ಗ್ಯಾರಂಟಿ​ಗ​ಳನ್ನು ಈಡೇ​ರಿ​ಸು​ತ್ತೇವೆ ಎಂದ​ರು.

ಕರ್ನಾಟಕದಲ್ಲಿ 'ಕೈ' ದಿಗ್ವಿಜಯ ಬೆನ್ನಲ್ಲೇ ಮಧ್ಯ ಪ್ರದೇಶದಲ್ಲೂ ಗೆಲುವಿಗೆ ಪ್ಲ್ಯಾನ್‌: ಚುನಾವಣಾ ಪ್ರಚಾರಕ್ಕೆ ಪ್ರಿಯಾಂಕಾ ಚಾಲನೆ

ಪ್ರಿಯಾಂಕಾ ಗಾಂಧಿ ಚುನಾ​ವಣಾ ಹಿಂದೂ 

ಈ ನಡುವೆ ಜಬ​ಲ್ಪು​ರ​ದಲ್ಲಿ ನರ್ಮದಾ ನದಿಗೆ ಪ್ರಿಯಾಂಕಾ ಆರತಿ ಮಾಡಿ​ದರು. ಹೀಗಾಗಿ ಅವ​ರನ್ನು 'ಚು​ನಾ​ವಣಾ ಹಿಂದೂ' ಎಂದು ಬಿಜೆಪಿ ಟೀಕಿ​ಸಿ​ದೆ.

ತೆಲಂಗಾಣ, ಮಧ್ಯ ಪ್ರದೇಶ ಚುನಾ​ವ​ಣೆ: ಪ್ರಿಯಾಂಕಾಗೆ ಹೆಚ್ಚು ಹೊಣೆ ಸಾಧ್ಯ​ತೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!