ವಿಶ್ವಕಪ್ 2019: ಪಾಕ್ ವಿರುದ್ದ ದಾಖಲೆ ಬರೆದ ರೋಹಿತ್-ರಾಹುಲ್ ಜೋಡಿ!

By Web DeskFirst Published 16, Jun 2019, 4:45 PM IST
Highlights

ಪಾಕ್ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಇಳಿದಿರುವ ಟೀಂ ಇಂಡಿಯಾ ಬ್ಯಾಟಿಂಗ್‌ನಲ್ಲಿ ದಾಖಲೆ ಬರೆದಿದೆ. ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಬರೆದ ದಾಖಲೆ ವಿವರ ಇಲ್ಲಿದೆ.

ಮ್ಯಾಂಚೆಸ್ಟರ್(ಜೂ.16): ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಹೋರಾಡುತ್ತಿರುವ ಟೀಂ ಇಂಡಿಯಾ ಉತ್ತಮ ಆರಂಭ ಪಡೆದಿದೆ. ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಶತಕದ ಜೊತೆಯಾಟ ನೀಡಿದ್ದಾರೆ. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧ ಭಾರತ ದಾಖಲೆ ಬರೆದಿದೆ.

ಇದನ್ನೂ ಓದಿ: ಇಂಡೋ-ಪಾಕ್ ಪಂದ್ಯ: ದಾಖಲೆ ಬರೆಯಲು ಸಜ್ಜಾದ ಧೋನಿ!

ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಶತಕದ ಜೊತೆಯಾಟ ನೀಡಿದ ಆರಂಭಿಕರು ಅನ್ನೋ ದಾಖಲೆಗೆ ರೋಹಿತ್ ಹಾಗೂ ರಾಹುಲ್ ಪಾತ್ರರಾಗಿದ್ದಾರೆ. ಪಾಕ್ ವಿರುದ್ಧ ಸೆಂಚುರಿ ಜೊತೆಯಾಟ ನೀಡಿದ ಭಾರತದ ಏಕೈಕ ಜೋಡಿ ಅನ್ನೋ ದಾಖಲೆ ಬರೆದಿದ್ದಾರೆ. ಇಷ್ಟೇ ಅಲ್ಲ ಪಾಕ್ ವಿರುದ್ಧ ಶತಕದ ಜೊತೆಯಾಟ ನೀಡಿದ ವಿಶ್ವದ 6ನೇ ಜೋಡಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಇಂಡೋ-ಪಾಕ್ ಪಂದ್ಯಕ್ಕೂ ಮುನ್ನ ಪೂನಂ ‘ಮೋಟಿವೇಶನಲ್’ ಪೋಸ್ಟರ್ ಅಬ್ಬಬ್ಬಾ!

ಪಾಕ್ ವಿರುದ್ಧ ಶತಕದ ಜೊತೆಯಾಟ ನೀಡಿದ ಆರಂಭಿಕರು
132 ಗ್ರಿನಿಡ್ಜ್ -ಹೆಯನ್ಸ್ - ಓವರ್, 1979
115 ಜಿ ಫ್ಲವರ್ -ಸಿ ತವರೆ-  ಮ್ಯಾಂಚೆಸ್ಟರ್, 1983
175* ಹೆಯನ್ಸ್ - ಲಾರಾ, MCG, 1992
147 ಆರ್ ಸ್ಮಿತ್ - ಎಂ ಆರ್ಥಟನ್, ಕರಾಚಿ, 1996
146 ಡಿ ವಾರ್ನರ್ -ಎ ಫಿಂಚ್, ಟೌಂಟನ್, 2019
136 ರೋಹಿತ್ -ರಾಹುಲ್, ಮ್ಯಾಂಚೆಸ್ಟರ್, 2019

Last Updated 16, Jun 2019, 4:45 PM IST