ವಿಶ್ವಕಪ್ 2019: ಹಾಫ್ ಸೆಂಚುರಿ ಸಿಡಿಸಿ ರಾಹುಲ್ ಔಟ್!

Published : Jun 16, 2019, 04:43 PM ISTUpdated : Jun 16, 2019, 04:54 PM IST
ವಿಶ್ವಕಪ್ 2019: ಹಾಫ್ ಸೆಂಚುರಿ ಸಿಡಿಸಿ ರಾಹುಲ್ ಔಟ್!

ಸಾರಾಂಶ

ವಿಶ್ವಕಪ್ ಟೂರ್ನಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ  ಕೆಎಲ್ ರಾಹುಲ್ ವಿಕೆಟ್ ಪತನಗೊಂಡಿದೆ. ಪಂದ್ಯದ ಅಪ್‌ಡೇಟ್ಸ್ ಇಲ್ಲಿದೆ.  

ಮ್ಯಾಂಚೆಸ್ಟರ್(ಜೂ.16): ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಉತ್ತಮ ಆರಂಭ ಪಡೆದ ಟೀಂ ಇಂಡಿಯಾ ಇದೀಗ ಮೊದಲ ವಿಕೆಟ್ ಕಳೆದುಕೊಂಡಿದೆ. ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹಲ್ ಶತಕದ ಜೊತೆಯಾಟ ನೀಡೋ ಮೂಲಕ ದಾಖಲೆ ಬರೆದಿದ್ದರು. ಇತ್ತ ರಾಹುಲ್ ಹಾಫ್ ಸೆಂಚುರಿ ಸಿಡಿಸಿ ನೆರವಾಗಿದ್ದರು.

ಅರ್ಧಶತಕ ಸಿಡಿಸಿದ ಬೆನ್ನಲ್ಲೇ ರಾಹುಲ್ ವಿಕೆಟ್ ಪತನಗೊಂಡಿದೆ. ರಾಹುಲ್ 78 ಎಸೆತದಲ್ಲಿ 3 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 57 ರನ್ ಸಿಡಿಸಿ ಔಟಾದರು. ರೋಹಿತ್ ಶರ್ಮಾ ಹಾಗೂ ರಾಹುಲ್ ಮೊದಲ ವಿಕೆಟ್‌ಗೆ 136 ರನ್ ಜೊತೆಯಾಟ ನೀಡಿದರು. 

ಶಿಖರ್ ಧವನ್ ಇಂಜುರಿಯಿಂದ ಕೆಎಲ್ ರಾಹುಲ್ ಆರಂಭಿಕರಾಗಿ ಬಡ್ತಿ ಪಡೆದಿದ್ದಾರೆ. ಇತ್ತ ಧವನ್ ಬದಲು ಆಲ್ರೌಂಡರ್ ವಿಜಯ್ ಶಂಕರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!