ಇಂಡೋ-ಪಾಕ್ ಪಂದ್ಯ: ದಾಖಲೆ ಬರೆಯಲು ಸಜ್ಜಾದ ಧೋನಿ!

By Web Desk  |  First Published Jun 16, 2019, 4:07 PM IST

ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಎಲ್ಲರು ಬಯಸುತ್ತಾರೆ. ಇದೇ ಪಂದ್ಯದಲ್ಲಿ ದಾಖಲೆ ಬರೆಯುವುದು ಸ್ಮರಣೀಯ. ಇದೀಗ ಧೋನಿ ದಾಖಲೆಗೆ ಸಜ್ಜಾಗಿದ್ದಾರೆ. 
 


ಮ್ಯಾಂಚೆಸ್ಟರ್(ಜೂ.16): ವಿಶ್ವಕಪ್ ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಎಂ.ಎಸ್.ಧೋನಿ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಧೋನಿ ಇಂದು ಫೀಲ್ಡ್‌ಗೆ ಇಳಿದರೆ ಸಾಕು ದಾಖಲೆಯೊಂದು ನಿರ್ಮಾಣವಾಗಲಿದೆ. ಭಾರತದ ಪರ ಗರಿಷ್ಠ ಏಕದಿನ ಪಂದ್ಯ ಆಡಿದ 2ನೇ ಕ್ರಿಕೆಟಿಗ ಅನ್ನೋ ದಾಖಲೆ ಬರೆಯಲಿದ್ದಾರೆ.

ಇದನ್ನೂ ಓದಿ: ಇಂಡೋ-ಪಾಕ್ ಪಂದ್ಯಕ್ಕೂ ಮುನ್ನ ಪೂನಂ ‘ಮೋಟಿವೇಶನಲ್’ ಪೋಸ್ಟರ್ ಅಬ್ಬಬ್ಬಾ!

Tap to resize

Latest Videos

undefined

ಸದ್ಯ ಧೋನಿ 340 ಏಕದಿನ ಪಂದ್ಯ ಆಡೋ ಮೂಲಕ ರಾಹುಲ್ ದ್ರಾವಿಡ್ ದಾಖಲೆ ಸರಿಗಟ್ಟಿದ್ದಾರೆ. ಇದೀಗ ಇಂದಿನ ಪಂದ್ಯದಲ್ಲಿ ಧೋನಿ ರಾಹುಲ್ ದ್ರಾವಿಡ್ ದಾಖಲೆ ಪುಡಿ ಮಾಡಲಿದ್ದಾರೆ. ಭಾರತದ ಪರ ಗರಿಷ್ಠ ಏಕದಿನ ಪಂದ್ಯ ಆಡಿದ ದಾಖಲೆ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದೆ. ಸಚಿನ್ 461 ಏಕದಿನ ಪಂದ್ಯ ಆಡಿದ್ದಾರೆ.

ಇದನ್ನೂ ಓದಿ: ಭಾರತ-ಪಾಕ್ ಪಂದ್ಯ: ಆರದ ದ್ವೇಷ, ಅರಿಯದ ಸ್ನೇಹ!

ಕಳೆದ 13 ವರ್ಷಗಳಿಂದ ಟೀಂ ಇಂಡಿಯಾ ಪರ ಕ್ರಿಕೆಟ್ ಆಡುತ್ತಿರುವ ಧೋನಿ ಸದ್ಯ ನಿಗದಿತ ಓವರ್ ಕ್ರಿಕೆಟ್‌ನಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಈಗಾಗಲೆ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹಾಗೂ ಏಕದಿನ, ಟಿ20 ಕ್ರಿಕೆಟ್‌ ನಾಯಕತ್ವದಿಂದ ಹಿಂದೆ ಸರಿದಿರುವ ಧೋನಿ, ತಂಡದ ಹಿರಿಯ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.
 

click me!