ಭಾರತ-ಪಾಕಿಸ್ತಾನ ಪಂದ್ಯಕ್ಕೂ ಮಳೆ ಭೀತಿ-ನಡೆಯುತ್ತಾ ಮ್ಯಾಚ್?

By Web DeskFirst Published Jun 13, 2019, 8:49 PM IST
Highlights

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯ ಮಳೆಯಿಂದ ರದ್ದಾದ ಬೆನ್ನಲ್ಲೇ, ಇದೀಗ ಇಂಡೋ-ಪಾಕ್ ಪಂದ್ಯದತ್ತ ಎಲ್ಲರೂ ಚಿತ್ತ ಹರಿಸಿದ್ದಾರೆ. ಆದರೆ ಬದ್ಧವೈರಿಗಳ ಕದನಕ್ಕೂ ಮಳೆ ಭೀತಿ ಕಾಡುತ್ತಿದೆ. ಜೂನ್ 16ರ ಹವಾಮಾನ ವರದಿ ಏನು ಹೇಳುತ್ತೆ? ಇಲ್ಲಿದೆ ವಿವರ.

ಮ್ಯಾಂಚೆಸ್ಟರ್(ಜೂ.13): ಕ್ರಿಕೆಟ್ ಜಗತ್ತಿನ ಅತೀ ದೊಡ್ಡ ಟೂರ್ನಿ ವಿಶ್ವಕಪ್. ಆದರೆ ಈ ಭಾರಿಯ ವಿಶ್ವಕಪ್ ಟೂರ್ನಿ ಮಳೆಯಿಂದಾಗಿ ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ. ಈಗಾಗಲೇ 3 ಪಂದ್ಯಗಳು ಮಳೆಗೆ ಆಹುತಿಯಾಗಿದೆ. ಭಾರತ ಹಾಗೂ  ನ್ಯೂಜಿಲೆಂಡ್ ನಡುವಿನ ಪಂದ್ಯ ರದ್ದಾದ ಬೆನ್ನಲ್ಲೇ ಇದೀಗ ಟೀಂ ಇಂಡಿಯಾ ಅಭಿಮಾನಿಗಳ ಚಿತ್ತ ಇಂಡೋ-ಪಾಕ್ ಪಂದ್ಯದತ್ತ ನೆಟ್ಟಿದೆ.

ಇದನ್ನೂ ಓದಿ: ಮಳೆಯಿಂದ ಪಂದ್ಯ ರದ್ದು- 2019ರ ವಿಶ್ವಕಪ್‌ನಲ್ಲಿ ದಾಖಲೆ!

ಜೂ.16ರಂದು ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುತ್ತಿದೆ. ಬದ್ಧವೈರಿಗಳ ಕದನಕ್ಕಾಗಿ ಇಡೀ ವಿಶ್ವವೇ ಕಾದುಕುಳಿತಿದೆ. ಆದರೆ ಮ್ಯಾಂಚೆಸ್ಟ್‌‌‌ರ್‌ನಲ್ಲಿ ಆಯೋಜಿಸಲಾಗಿರುವ ಈ ಪಂದ್ಯಕ್ಕೂ ಮಳೆ ಭೀತಿ ಕಾಡುತ್ತಿದೆ. ಹವಾಮಾನ ವರದಿ ಪ್ರಕಾರ, ಜೂನ್ 16 ರಂದು ಮ್ಯಾಂಚೆಸ್ಟರ್‌ನಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಪಂದ್ಯ ರದ್ದಾಗೋ ಸಾಧ್ಯತೆ ಕಡಿಮೆ. ಹೀಗಾಗಿ ಪಂದ್ಯದ ಓವರ್ ಕಡಿತ ಸಂಭವ ಹೆಚ್ಚಿದೆ ಎಂದು ಹವಾಮಾನ ವರದಿ ಹೇಳುತ್ತಿದೆ.

ಇದನ್ನೂ ಓದಿ: ಇಂಡೋ-ಕಿವೀಸ್ ಪಂದ್ಯ ರದ್ದು-ಕೋಚ್ ಶಾಸ್ತ್ರಿ ಟ್ರೋಲ್!

ಈಗಾಗಲೇ ಒಂದು ಪಂದ್ಯ ರದ್ದಾಗಿರೋ ಕಾರಣ ಟೀಂ ಇಂಡಿಯಾ ನಿರಾಸೆ ಅನುಭವಿಸಿದೆ. ಇದೀಗ ಇಂಡೋ-ಪಾಕ್ ಪಂದ್ಯಕ್ಕೂ ಮಳೆ ಅಡ್ಡಿಯಾದರೆ ಅಭಿಮಾನಿಗಳಿಗೆ ಮಾತ್ರವಲ್ಲ, ಐಸಿಸಿ, ಪಂದ್ಯ ಪ್ರಸಾರ ಮಾಡೋ ವಾಹಿನಿ ಸೇರಿದಂತೆ ಎಲ್ಲರಿಗೂ ನಷ್ಟವಾಗಲಿದೆ. 
 

click me!