ಮಳೆಯಿಂದ ಪಂದ್ಯ ರದ್ದು- 2019ರ ವಿಶ್ವಕಪ್‌ನಲ್ಲಿ ದಾಖಲೆ!

By Web Desk  |  First Published Jun 13, 2019, 7:59 PM IST

ಕಳೆದ 11 ವಿಶ್ವಕಪ್ ಟೂರ್ನಿಗಳಿಗೆ ಹೋಲಿಸಿದರೆ 12ನೇ ವಿಶ್ವಕಪ್ ಟೂರ್ನಿ ಮಳೆಯಲ್ಲೂ ದಾಖಲೆ ಬರೆದಿದೆ. ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಮಳೆಯಿಂದ  ರದ್ದಾದ ಪಂದ್ಯಗಳೆಷ್ಟು? ಇಲ್ಲಿದೆ ವಿವರ.
 


ನಾಟಿಂಗ್‌ಹ್ಯಾಮ್(ಜೂ.13): 2019ರ ವಿಶ್ವಕಪ್ ಟೂರ್ನಿಯಲ್ಲಿ ಕ್ರಿಕೆಟ್‌ಗಿಂತ ಹೆಚ್ಚು ಸುದ್ದಿಯಾಗಿದ್ದು  ಮಳೆ. 18 ಲೀಗ್ ಪಂದ್ಯಗಳಲ್ಲಿ 4 ಪಂದ್ಯಗಳಿಗೆ ಮಳೆ ಅಡ್ಡಿಯಾಗಿದೆ. ಇದರಲ್ಲಿ 3 ಪಂದ್ಯ ಫಲಿತಾಂಶ ಕಾಣದೆ ರದ್ದಾಗಿದೆ. ಈ ಮೂಲಕ ಕಳೆದ 11 ವಿಶ್ವಕಪ್ ಟೂರ್ನಿಗಳಿಗೆ ಹೋಲಿಸಿದರೆ 2019ರ ವಿಶ್ವಕಪ್ ಟೂರ್ನಿ ಮಳೆಯಲ್ಲಿ ದಾಖಲೆ ಬರೆದಿದೆ.

ಇದನ್ನೂ ಓದಿ: ರದ್ದಾಯ್ತು ಇಂಡೋ-ಕಿವೀಸ್ ಪಂದ್ಯ-ಅಂಕಪಟ್ಟಿಯಲ್ಲಿ ಏರುಪೇರು!

Tap to resize

Latest Videos

undefined

1979ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ಪಂದ್ಯ ಮಳೆಯಿಂದ ರದ್ದಾಗಿತ್ತು. ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ನಡುವಿನ ಪಂದ್ಯ ಮಳೆಯಿಂದ ರದ್ದಾಗಿತ್ತು. ಇದಾದ ಬಳಿಕ 2015ರಲ್ಲಿ ಬ್ರಿಸ್ಬೇನ್‌ನಲ್ಲಿ ಆಯೋಜಿಸಲಾದ ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯ ಮಳೆಯಿಂದ ರದ್ದಾಗಿತ್ತು.

ಇದನ್ನೂ ಓದಿ:  ಸುರಿವ ಮಳೆ ಜೊತೆಯೊಂದಷ್ಟು ಕ್ರಿಕೆಟ್ ಕೀಟಲೆಗಳು..!

1975 ರಿಂದ 2015ರ ವರೆಗಿನ 11 ವಿಶ್ವಕಪ್ ಟೂರ್ನಿಗಳಲ್ಲಿ 2 ಪಂದ್ಯಗಳು ಮಾತ್ರ ಮಳೆಯಿಂದ ರದ್ದಾಗಿದೆ. ಆದರೆ 2019ರಲ್ಲಿ ಈಗಾಗಲೇ 3 ಪಂದ್ಯ ಮಳೆಯಿಂದ ರದ್ದಾಗಿದೆ. ಈ ಮೂಲಕ ಗರಿಷ್ಠ ಪಂದ್ಯ ಮಳೆಯಿಂದ ರದ್ದಾದ ಅಪಖ್ಯಾತಿಗೆ ಈ ವಿಶ್ವಕಪ್ ಟೂರ್ನಿ ಗುರಿಯಾಗಿದೆ. 

ಇದನ್ನೂ ಓದಿ: ಗೆಲುವಿನ ಬಳಿಕ ಆಸೀಸ್ ಅಭಿಮಾನಿಗೆ ಸರ್ಪ್ರೈಸ್ ಗಿಫ್ಟ್ ನೀಡಿದ ವಾರ್ನರ್!

ವಿಶ್ವಕಪ್‌ನಲ್ಲಿ ಮಳೆಯಿಂದ ರದ್ದಾದ ಪಂದ್ಯ:
ವೆಸ್ಟ್ ಇಂಡೀಸ್ ಶ್ರೀಲಂಕಾ- ಓವಲ್, 1979
ಆಸ್ಟ್ರೇಲಿಯಾ-ಬಾಂಗ್ಲಾದೇಶ - ಬ್ರಿಸ್ಬೇನ್, 2015
ಪಾಕಿಸ್ತಾನ - ಶ್ರೀಲಂಕಾ- ಬ್ರಿಸ್ಟಲ್, 2019
ಶ್ರೀಲಂಕಾ -  ಬಾಂಗ್ಲಾದೇಶ- ಬ್ರಿಸ್ಟಲ್, 2019
ಭಾರತ-ನ್ಯೂಜಿಲೆಂಡ್ - ನಾಟಿಂಗ್‌ಹ್ಯಾಮ್, 2019

click me!