ರದ್ದಾಯ್ತು ಇಂಡೋ-ಕಿವೀಸ್ ಪಂದ್ಯ-ಅಂಕಪಟ್ಟಿಯಲ್ಲಿ ಏರುಪೇರು!

By Web Desk  |  First Published Jun 13, 2019, 7:35 PM IST

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಲೀಗ್ ಪಂದ್ಯ ಮಳೆಯಿಂದ ರದ್ದಾಗಿದೆ. ಒಂದೊಂದು ಅಂಕ ಪಡೆದಿರುವ ಉಭಯ ತಂಡ ಇದೀಗ ಮುಂದಿನ ಪಂದ್ಯದತ್ತ ಚಿತ್ತಹರಿಸಿದೆ. ಪಂದ್ಯ ರದ್ದಾಗಿರೋ ಕಾರಣ ಅಂಕಪಟ್ಟಿಯಲ್ಲಿ ಆದ ಬದಲಾವಣೆ ಏನು? ಇಲ್ಲಿದೆ ವಿವರ.


ನಾಟಿಂಗ್‌ಹ್ಯಾಮ್(ಜೂ.13): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಲೀಗ್ ಪಂದ್ಯ ಮಳೆಯಿಂದ ರದ್ದಾಗಿದೆ. ಟಾಸ್‌ಗೂ ಮೊದಲು ಶುರುವಾದ ಮಳೆ ಪಂದ್ಯ ಆರಂಭಿಸಲು ಅನುವು ಮಾಡಿಲ್ಲ. ಈ ನಡುವೆ ಮಳೆ ಕೆಲ ಕಾಲ ಬಿಡುವು ನೀಡಿತ್ತು. ಅಂಪೈರ್‌ಗಳು ಮೈದಾನ ಪರಿಶೀಲಿಸಿ ವಾಪಾಸ್ ಬಂದ  ತಕ್ಷಣ ಮತ್ತೆ ಮಳೆ ಸುರಿದಿದೆ. ಸದ್ಯ ಮೈದಾನ ಸಂಪೂರ್ಣ ಒದ್ದೆಯಾಗಿದೆ. ಹೀಗಾಗಿ ಪಂದ್ಯ ರದ್ದು ಮಾಡಲಾಗಿದೆ.

ಇದನ್ನೂ ಓದಿ: ಇಂಡೋ-ಕಿವೀಸ್ ಪಂದ್ಯಕ್ಕೆ ಮಳೆ ಅಡ್ಡಿಯಾದರೂ ಟ್ರೋಲ್ ಆಗಿದ್ದು ಮಾತ್ರ ಶಾಸ್ತ್ರಿ!

Latest Videos

undefined

ಟೀಂ ಇಂಡಿಯಾ ಸೌತ್ಆಫ್ರಿಕಾ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯ ಗೆದ್ದು ಇದೀಗ ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿತ್ತು. ಆದರೆ 3ನೇ ಪಂದ್ಯ ಮಳೆಯಿಂದ ರದ್ದಾಗಿದೆ. ಈ ಮೂಲಕ ಭಾರತಕ್ಕೂ ವರುಣನ ಕಾಟ ತಪ್ಪಿಲ್ಲ. ಪಂದ್ಯ ರದ್ದಾದ ಕಾರಣ ಭಾರತ ಹಾಗೂ ನ್ಯೂಜಿಲೆಂಡ್ ಒಂದೊಂದು ಅಂಕ ಹಂಚಿಕೊಂಡಿದೆ. 

ಇದನ್ನೂ ಓದಿ: ವಿಶ್ವಕಪ್ 2019: ಅಂಪೈರ್ ತಪ್ಪು ಹೇಳಬೇಡಿ ಎಂದ ಐಸಿಸಿಗೆ ಮೈಕಲ್ ತಿರುಗೇಟು!

ನ್ಯೂಜಿಲೆಂಡ್ ಒಟ್ಟು 7 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿ ಮುಂದುವರಿದರೆ, ಭಾರತ 5 ಅಂಕಗಳೊಂದಿಗೆ  ಇಂಗ್ಲೆಂಡ್ ಹಿಂದಿಕ್ಕಿ 3ನೇ ಸ್ಥಾನಕ್ಕೇರಿದೆ. ಜೂನ್ 16 ರಂದು ಮ್ಯಾಂಚೆಸ್ಟರ್‌ನಲ್ಲಿ ಭಾರತ, ಬದ್ಧವೈರಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೂ ಮಳೆ ಭೀತಿ ಇದೆ.

click me!