ಶೆಲ್ಡಾನ್ ಕಾಟ್ರೆಲ್‌ಗೆ ಆರ್ಮಿ ಸೆಂಡ್ ಆಫ್ ನೀಡಿದ ಶಮಿ!

Published : Jun 28, 2019, 03:19 PM ISTUpdated : Jun 28, 2019, 03:33 PM IST
ಶೆಲ್ಡಾನ್ ಕಾಟ್ರೆಲ್‌ಗೆ ಆರ್ಮಿ ಸೆಂಡ್ ಆಫ್ ನೀಡಿದ ಶಮಿ!

ಸಾರಾಂಶ

ವೆಸ್ಟ್ ಇಂಡೀಸ್ ಬೌಲರ್ ಶೆಲ್ಡಾನ್ ಕಾಟ್ರೆಲ್ ಸಲ್ಯೂಟ್ ಸೆಲೆಬ್ರೇಷನ್ ಹೆಚ್ಚು ಟ್ರೆಂಡ್ ಆಗಿದೆ. ಇದೀಗ ಮೊಹಮ್ಮದ್ ಶಮಿ ಆರ್ಮಿ ಸಲ್ಯೂಟ್ ಮಾಡೋ ಮೂಲಕ ಕಾಟ್ರೆಲ್‌ಗೆ ತಿರುಗೇಟು ನೀಡಿದ್ದಾರೆ. 

ಸೌತ್ ಆಫ್ರಿಕಾ vs ಶ್ರೀಲಂಕಾ ಸ್ಕೋರ್ ಎಷ್ಟು?

ಮ್ಯಾಂಚೆಸ್ಟರ್(ಜೂ.28): ವೆಸ್ಟ್ ಇಂಡೀಸ್ ವೇಗಿ ಶೆಲ್ಡಾನ್ ಕಾಟ್ರೆಲ್ ವಿಕೆಟ್ ಕಬಳಿಸಿ ವಿಶೇಷ ರೀತಿಯಲ್ಲಿ ಸಂಭ್ರಮಾಚರಿಸುತ್ತಾರೆ. ಲೆಫ್ಟ್ ರೈಟ್ ವಾಕ್ ಹಾಗೂ ಆರ್ಮಿ ಸಲ್ಯೂಟ್ ಮಾಡೋ ಮೂಲಕ ಸೆಲೆಬ್ರೇಷನ್ ಮಾಡುತ್ತಾರೆ. ಈ ವಿಶ್ವಕಪ್ ಟೂರ್ನಿಯಲ್ಲಿ ಕಾಟ್ರೆಲ್ ಸೆಲೆಬ್ರೇಷನ್ ಎಲ್ಲರ ಗಮನ ಸೆಳೆದಿದೆ. ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ ಕಾಟ್ರೆಲ್ ಸಲ್ಯೂಟ್‌ಗೆ ತಿರುಗೇಟು ನೀಡಿದ  ಘಟನೆ ನಡೆದಿದೆ.

ಇದನ್ನೂ ಓದಿ: ಐಸಿಸಿ ಏಕದಿನ ಶ್ರೇಯಾಂಕ ಪ್ರಕಟ: ಮತ್ತೆ ಅಗ್ರಸ್ಥಾನಕ್ಕೇರಿದ ಭಾರತ

ಟೀಂ ಇಂಡಿಯಾ ಬ್ಯಾಟಿಂಗ್ ವೇಳೆ ಮೊಹಮ್ಮದ್ ಶಮಿ, ಶೆಲ್ಡಾನ್ ಕಾಟ್ರೆಲ್‍‌ಗೆ ವಿಕೆಟ್ ಒಪ್ಪಿಸಿದರು. ಶಮಿ ವಿಕೆಟ್ ಕಬಳಿಸಿದ ಕಾಟ್ರೆಲ್ ಆರ್ಮಿ ಸಲ್ಯೂಟ್ ಮೂಲಕ ಸಂಭ್ರಮ ಆಚರಿಸಿದ್ದರು. ಭಾರತದ 269 ರನ್ ಟಾರ್ಗೆಟ್ ಚೇಸ್ ಮಾಡೋ ಶೆಲ್ಡಾನ್ ಕಾಟ್ರೆಲ್, ಯಜುವೇಂದ್ರ ಚಹಾಲ್ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದಿದರು. ಚಹಾಲ್ ವಿಕೆಟ್ ಕಬಳಿಸುತ್ತಿದ್ದಂತೆ ಶಮಿ ಲೆಫ್ಟ್ ರೈಟ್ ವಾಕ್ ಹಾಗೂ ಸಲ್ಯೂಟ್ ಮಾಡೋ ಮೂಲಕ ತಿರುಗೇಟು ನೀಡಿದರು. 

 

ಇದನ್ನೂ ಓದಿ: ವಿಶ್ವಕಪ್ 2019: ಪಾಕಿಸ್ತಾನ ಗೆಲುವಿಗೆ ಟ್ರೋಲ್ ಆದ ಸಾನಿಯಾ ಮಿರ್ಜಾ

ಶಮಿ ತಿರುಗೇಟು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೂ ನಗು ತರಿಸಿತ್ತು. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತ 7 ವಿಕೆಟ್ ನಷ್ಟಕ್ಕೆ 268 ರನ್ ಸಿಡಿಸಿತ್ತು. ವೆಸ್ಟ್ ಇಂಡೀಸ್ 34.2 ಓವರ್‌ಗಳಲ್ಲಿ 143 ರನ್‌ಗೆ ಆಲೌಟ್ ಆಗಿತ್ತು. ಈ ಮೂಲಕ  ಭಾರತ 125 ರನ್ ಗೆಲುವು ಸಾಧಿಸಿತ್ತು.

 

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!