ವಿಶ್ವಕಪ್ 2019: ಪಾಕ್ ಸೆಮೀಸ್‌ಗೇರಲು ಏನೇನಾಗಬೇಕು?

By Web DeskFirst Published Jun 28, 2019, 12:50 PM IST
Highlights

ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಮಣಿಸುವ ಮೂಲಕ ಸೆಮೀಸ್ ಕನಸು ಜೀವಂತವಾಗಿರಿಸಿಕೊಂಡ ಪಾಕಿಸ್ತಾನ ಇದೀಗ ನಾಲ್ಕರಘಟ್ಟದ ಕನಸು ಕಾಣುತ್ತಿದೆ. ಪಾಕ್ ಪ್ರವೇಶಿಸುವ ಸಾಧ್ಯತೆಗಳೆನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ...

ವಿಶ್ವಕಪ್ ಟೂರ್ನಿಯ ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

ಲಂಡನ್(ಜೂ.28): ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಅಜೇಯವಾಗಿ ಉಳಿದಿದ್ದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ ಪಾಕಿಸ್ತಾನ ಸೆಮಿಫೈನಲ್‌ಗೇರುವ ಉತ್ಸಾಹದಲ್ಲಿದೆ. 1992ರ ವಿಶ್ವಕಪ್‌ನ ಫಲಿತಾಂಶಗಳಿಗೆ ಹೋಲುವ ಫಲಿತಾಂಶಗಳೇ ಹೊರಬರುತ್ತಿದ್ದು, 27ವರ್ಷಗಳ ಬಳಿಕ ಪಾಕಿಸ್ತಾನ ವಿಶ್ವ ಚಾಂಪಿಯನ್ ಆಗುವ ಕನಸು ಕಾಣುತ್ತಿದೆ. ರೌಂಡ್ ರಾಬಿನ್ ಹಂತದಲ್ಲಿ ತಂಡಕ್ಕೆ 2 ಪಂದ್ಯ ಬಾಕಿ ಇದ್ದು, ಸೆಮೀಸ್ಗೇರಬೇಕಿದ್ದರೆ ಮೊದಲು ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕು. ಪಾಕ್ ತನ್ನ ಪಂದ್ಯಗಳನ್ನು ಗೆದ್ದರಷ್ಟೇ ಸಾಕಾಗುವುದಿಲ್ಲ, ಇತರೆ ಪಂದ್ಯಗಳ ಫಲಿತಾಂಶವೂ ತನ್ನ ಪರವಾಗಿ ಬರುವಂತೆ ಪ್ರಾರ್ಥಿಸಬೇಕು. ಪಾಕಿಸ್ತಾನ ಸೆಮೀಸ್‌ಗೇರಬೇಕಿದ್ದರೆ ಯಾವ ತಂಡದ ಫಲಿತಾಂಶ ಏನಾಗಬೇಕು. ಅವರ ವಿವರ ಇಲ್ಲಿದೆ..

ವಿಶ್ವಕಪ್ 2019: ಪಾಕಿಸ್ತಾನ ಗೆಲುವಿಗೆ ಟ್ರೋಲ್ ಆದ ಸಾನಿಯಾ ಮಿರ್ಜಾ

ಪಾಕಿಸ್ತಾನದ ಸೆಮಿಫೈನಲ್ ಲೆಕ್ಕಾಚಾರ ಹೇಗೆ?

ಸಾಧ್ಯತೆ 1
ಬಾಕಿ ಇರುವ ಎರಡೂ ಪಂದ್ಯಗಳಲ್ಲಿ ಗೆಲ್ಲಬೇಕು  ಇಂಗ್ಲೆಂಡ್ ಕೊನೆ 2 ಪಂದ್ಯಗಳಲ್ಲಿ ಒಂದರಲ್ಲಿ ಸೋಲಬೇಕು. ಬಾಂಗ್ಲಾದೇಶ ಕೊನೆ 2 ಪಂದ್ಯಗಳಲ್ಲಿ ಒಂದರಲ್ಲಿ ಸೋಲಬೇಕು. ಶ್ರೀಲಂಕಾ ಕೊನೆ 3 ಪಂದ್ಯಗಳಲ್ಲಿ ಒಂದರಲ್ಲಿ ಸೋಲಬೇಕು

ಸಾಧ್ಯತೆ 2
ಇಂಗ್ಲೆಂಡ್ ಬಾಕಿ ಇರುವ 2 ಪಂದ್ಯಗಳಲ್ಲೂ ಸೋಲಬೇಕು. ಶ್ರೀಲಂಕಾ ಬಾಕಿ ಇರುವ 3 ಪಂದ್ಯಗಳಲ್ಲಿ 2ರಲ್ಲಿ ಸೋಲಬೇಕು. ಬಾಂಗ್ಲಾ ಬಾಕಿ ಇರುವ 2 ಪಂದ್ಯಗಳನ್ನು ಸೋಲಬೇಕು. ಬಾಂಗ್ಲಾ ಒಂದು ಪಂದ್ಯ ಸೋತು, ಪಾಕ್‌ಗಿಂತ ಕಡಿಮೆ ನೆಟ್ ರನ್‌ರೇಟ್ ಹೊಂದಿರಬೇಕು.

ವಿಶ್ವಕಪ್ 2019: ಕಿವೀಸ್ ಗೆಲುವಿನ ನಾಗಾಲೋಟಕ್ಕೆ ಪಾಕ್ ಬ್ರೇಕ್

ಪಾಕ್ ಕೊನೆ 2 ಪಂದ್ಯ ಗೆದ್ದರೂ ಸೆಮೀಸ್ ಕಷ್ಟ?

ಸಾಧ್ಯತೆ 1

ಇಂಗ್ಲೆಂಡ್ ಕೊನೆ 2 ಪಂದ್ಯಗಳಲ್ಲಿ ಗೆದ್ದರೆ, ಭಾರತ ಕೊನೆ 4 ಪಂದ್ಯಗಳಲ್ಲಿ 2ರಲ್ಲಿ ಗೆದ್ದರೆ, ನ್ಯೂಜಿಲೆಂಡ್ ಕೊನೆ 2 ಪಂದ್ಯಗಳಲ್ಲಿ 1ರಲ್ಲಿ ಗೆದ್ದರೆ 

ಸಾಧ್ಯತೆ 2
ಶ್ರೀಲಂಕಾ ತಂಡ ತನ್ನ ಕೊನೆಯ 3 ಪಂದ್ಯಗಳನ್ನು ಗೆದ್ದರೆ ಪಾಕ್‌ಗೆ ಸಂಕಷ್ಟ. ಇಂಗ್ಲೆಂಡ್ ಕೊನೆ 2ರಲ್ಲಿ ಒಂದು ಪಂದ್ಯ ಗೆದ್ದರೆ, ಭಾರತ ಕೊನೆ 4ರಲ್ಲಿ 2 ಪಂದ್ಯ ಗೆದ್ದರೆ ನ್ಯೂಜಿಲೆಂಡ್ ಕೊನೆ 2ರಲ್ಲಿ 1 ಪಂದ್ಯ ಗೆದ್ದರೆ ಪಾಕ್ ಸೆಮೀಸ್ ಕನಸು ಭಗ್ನವಾಗಲಿದೆ.
 

click me!