ವಿಶ್ವಕಪ್ 2019: ಟೀಂ ಇಂಡಿಯಾ ಸೇರಿಕೊಂಡ ಕನ್ನಡಿಗ ಮಯಾಂಕ್ !

By Web DeskFirst Published Jul 1, 2019, 5:55 PM IST
Highlights

ವಿಜಯ್ ಶಂಕರ್ ಇಂಜುರಿಯಿಂದಾಗಿ ಕರ್ನಾಟಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್‌ಗೆ ಅದೃಷ್ಠ ಒಲಿದಿದೆ. 2 ಟೆಸ್ಟ್ ಪಂದ್ಯ ಆಡಿರುವ ಮಯಾಂಕ್ ಅಗರ್ವಾಲ್ ಇದೀಗ ವಿಶ್ವಕಪ್ ಟೂರ್ನಿಯಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಮಯಾಂಕ್ ಆಯ್ಕೆಯನ್ನು ಬಿಸಿಸಿಐ ಖಚಿತಪಡಿಸಿದೆ. 

ವೆಸ್ಟ್ ಇಂಡೀಸ್ VS ಶ್ರೀಲಂಕಾ ಪಂದ್ಯದ ಸ್ಕೋರ್ ಎಷ್ಟು?

ಬರ್ಮಿಂಗ್‌ಹ್ಯಾಮ್(ಜು.01): ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿರುವ ಟೀಂ ಇಂಡಿಯಾ ಆಲ್ರೌಂಡರ್ ವಿಜಯ್ ಶಂಕರ್ ಬದಲು ಕನ್ನಡಿಗ ಮಯಾಂಕ್ ಅಗರ್ವಾಲ್ ಆಯ್ಕೆಯಾಗಿದ್ದಾರೆ. ಇಂಜುರಿ ಕಾರಣದಿಂದ ಇಂಗ್ಲೆಂಡ್ ವಿರುದ್ಧದ ಪಂದ್ಯದಿಂದ ಹೊರಗುಳಿದ ಶಂಕರ್, ಇದೀಗ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಶಂಕರ್ ಬದಲು ಬಿಸಿಸಿಐ ಆಯ್ಕೆ ಸಮಿತಿ ಮಯಾಂಕ್ ಆಗರ್ವಾಲ್‌ಗೆ ಸ್ಥಾನ ನೀಡಿದೆ. ಬಿಸಿಸಿಐ ಮನವಿಯನ್ನು ಐಸಿಸಿ ಕೂಡ ಅಂಗೀಕರಿಸಿದೆ.

 

NEWS: Vijay Shankar ruled out of World Cup due to injury.

Mayank Agarwal has been named as Vijay Shankar's replacement following a request from the Indian team management for a suitable top-order batsman. More details here - https://t.co/EWqrVmJuh6 pic.twitter.com/atqCkx9ClT

— BCCI (@BCCI)

ಇದನ್ನೂ ಓದಿ: ಬಾಂಗ್ಲಾ ಪಂದ್ಯಕ್ಕೆ ಕೇದಾರ್ ಔಟ್- ಮತ್ತೋರ್ವ ಆಲ್ರೌಂಡರ್‌ಗೆ ಚಾನ್ಸ್?

ರಣಜಿ ಹಾಗೂ ದೇಸಿ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಆಯ್ಕೆ ಸಮಿತಿ ಗಮನ ಸೆಳೆದಿರುವ ಬೆಂಗಳೂರಿನ ಮಯಾಂಕ್ ಅಗರ್ವಾಲ್, ಈಗಾಗಲೇ ಟೀಂ ಇಂಡಿಯಾ ಪರ 2 ಟೆಸ್ಟ್ ಪಂದ್ಯ ಆಡಿದ್ದಾರೆ. ಆದರೆ ಇದುವರೆಗೆ ಅಂತಾರಾಷ್ಟ್ರೀಯ ಏಕದಿನ ಪಂದ್ಯ ಆಡಿಲ್ಲ. ಇದೀಗ ನೇರವಾಗಿ ವಿಶ್ವಕಪ್ ಟೂರ್ನಿಯಲ್ಲೇ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಮಯಾಂಕ್ ಸಜ್ಜಾಗಿದ್ದಾರೆ.

ಇದನ್ನೂ ಓದಿ: ಹೊಸ ಜರ್ಸಿಯಿಂದಲೇ ಭಾರತ ಸೋತಿದೆ: ಮೆಹಬೂಬಾ ಮುಫ್ತಿ!

ಇಂಗ್ಲೆಂಡ್ ವಿರುದ್ದದ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಕೂಡ ಇಂಜುರಿಗೆ ತುತ್ತಾಗಿದ್ದಾರೆ. ಜೊತೆಗೆ  ಆರಂಭಿಕನಾಗಿ ರಾಹುಲ್ ವೈಫಲ್ಯ ಅನುಭವಿಸಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಜೊತೆ ಮಯಾಂಕ್ ಅಗರ್ವಾಲ್ ಇನ್ನಿಂಗ್ಸ್ ಆರಂಭಿಸೋ ಸಾಧ್ಯತೆ ಇದೆ. ಸದ್ಯ ಟೀಂ ಇಂಡಿಯಾದಲ್ಲಿ ಕನ್ನಡಿಗರ ಸಂಖ್ಯೆ 2ಕ್ಕೇರಿದೆ. 

ಮಯಾಂಕ್ ಅಗರ್ವಾಲ್ ಆಸ್ಟ್ರೇಲಿಯಾ ವಿರುದ್ಧ ಮೆಲ್ಬೊರ್ನ್ ಟೆಸ್ಟ್ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. 2 ಟೆಸ್ಟ್ ಪಂದ್ಯಿಂದ ಮಯಾಂಕ್ 195 ರನ್ ಸಿಡಿಸಿದ್ದಾರೆ. ಗರಿಷ್ಠ ಸ್ಕೋರ್ 77. ಇನ್ನು 2 ಹಾಫ್ ಸೆಂಚುರಿ ಕೂಡ ದಾಖಲಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೂ ಮುನ್ನ ಮಯಾಂಕ್ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ. 
 

click me!