ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸೋಲಿಗೆ ಮಾಜಿ ನಾಯಕ ಸೌರವ್ ಗಂಗೂಲಿ ಕಿಡಿಕಾರಿದ್ದಾರೆ. ಅಷ್ಟಕ್ಕೂ ದಾದಾ ಏನಂದ್ರು? ನೀವೇ ನೋಡಿ...
ಲಂಡನ್[ಜು.01]: ಇಂಗ್ಲೆಂಡ್ ವಿರುದ್ಧ ಎಡ್ಜ್ ಬಾಸ್ಟನ್’ನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಗೆಲುವಿನ ದಡ ಸೇರಿಸಲು ವಿಫಲವಾದ ಮಹೇಂದ್ರ ಸಿಂಗ್ ಧೋನಿ ಹಾಗೂ ಕೇದಾರ್ ಜಾಧವ್ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಮಾಜಿ ನಾಯಕ ಸೌರವ್ ಗಂಗೂಲಿ ಕಿಡಿಕಾರಿದ್ದಾರೆ.
ಹೊಸ ಜರ್ಸಿಯಿಂದಲೇ ಭಾರತ ಸೋತಿದೆ: ಮೆಹಬೂಬಾ ಮುಫ್ತಿ!
undefined
ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಸೋಲಿಲ್ಲದೇ ಮುನ್ನುಗ್ಗುತ್ತಿದ್ದ ಟೀಂ ಇಂಡಿಯಾಗೆ ಇಂಗ್ಲೆಂಡ್ ತಂಡ ಬ್ರೇಕ್ ಹಾಕಿದೆ. ಮೊದಲ ಆರು ಪಂದ್ಯಗಳಲ್ಲಿ ಟೀಂ ಇಂಡಿಯಾಗೆ ಸೋಲು ಎದುರಾಗಿರಲಿಲ್ಲ. ಆದರೆ ಇಂಗ್ಲೆಂಡ್ ವಿರುದ್ಧ 31 ರನ್ ಗಳಿಂದ ಮುಗ್ಗರಿಸಿತ್ತು. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 337 ರನ್ ಕಲೆಹಾಕುವ ಮೂಲಕ ಭಾರತಕ್ಕೆ ಕಠಿಣ ಗುರಿ ನೀಡಿತ್ತು. ಇದಕ್ಕುತ್ತರವಾಗಿ ರೋಹಿತ್ ಶತಕ ಹಾಗೂ ವಿರಾಟ್ ಕೊಹ್ಲಿ ಅರ್ಧಶತಕದ ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ರಿಷಭ್ ಪಂತ್ ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ಭಾರತಕ್ಕೆ ಗೆಲುವಿನ ಆಸೆ ಮೂಡಿಸಿದ್ದರು. ಆದರೆ 40ನೇ ಓವರ್ ಬಳಿಕ ಧೋನಿ ಹಾಗೂ ಕೇದಾರ್ ಜಾಧವ್ ಕೇವಲ ಸಿಂಗಲ್ಸ್ ಹಾಗೂ ಡಬಲ್ಸ್ ರನ್ ಗಳಿಸುವ ಪ್ರಯತ್ನ ಮಾಡಿದರು. ಹೀಗಾಗಿ ಅಲ್ಪ ರನ್ ಗಳಿಂದ ಟೀಂ ಇಂಡಿಯಾವು ಇಂಗ್ಲೆಂಡ್ ಎದುರು ಶರಣಾಯಿತು.
ಭಾರತೀಯ ಕ್ರಿಕೆಟಿಗರ ಕ್ರೀಡಾ ಸ್ಫೂರ್ತಿ ಪ್ರಶ್ನಿಸಿದ ವಕಾರ್ ಯೂನಿಸ್‌ಗೆ ಮಂಗಳಾರತಿ!
ದಾದಾ ಹೇಳಿದ್ದೇನು..?:
ಇಂಗ್ಲೆಂಡ್ ಮಾಜಿ ನಾಯಕ ನಾಸೀರ್ ಹುಸೇನ್ ಹಾಗೂ ಸೌರವ್ ಗಂಗೂಲಿ ವೀಕ್ಷಕ ವಿವರಣೆ ನೀಡುವ ವೇಳೆ:
’ಏನಾಗುತ್ತಿದೆ ಎಂದು ನನಗೆ ಸ್ವಲ್ಪವೂ ಅರ್ಥವಾಗಲಿಲ್ಲ. ತಂಡಕ್ಕೆ ರನ್ ಬೇಕಿದ್ದಾಗ, ಅವರು ಏನು ಮಾಡುತ್ತಿದ್ದಾರೆ..? ಕೆಲ ಭಾರತೀಯ ಕ್ರಿಕೆಟ್ ಈಗಾಗಲೇ ಅಭಿಮಾನಿಗಳು ಮೈದಾನ ತೊರೆಯುತ್ತಿದ್ದಾರೆ ಎಂಬ ಇಂಗ್ಲೆಂಡ್ ಮಾಜಿ ನಾಯಕ ನಾಸೀರ್ ಹುಸೇನ್ ಮಾತಿಗೆ ಪ್ರತಿಕ್ರಿಯಿಸಿದ ಗಂಗೂಲಿ, ಸಿಂಗಲ್ಸ್’ಗಳನ್ನು ಏಕೆ ಓಡುತ್ತಿದ್ದಾರೆ ಎಂದು ನನಗೆ ಅರ್ಥವಾಗುತ್ತಿಲ್ಲ. ಇನ್ನೂ ಕೊನೆಯಲ್ಲಿ 5 ವಿಕೆಟ್ ಇದ್ದಾಗ ಇಷ್ಟು ಮಂದಗತಿಯಲ್ಲಿ ಬ್ಯಾಟ್ ಬೀಸಿದರೆ 338 ರನ್ ಗುರಿ ಬೆನ್ನಟ್ಟಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಬಾಲ್ ಹೇಗೆ ಬರುತ್ತಿದೆ ಇನ್ನುವುದು ಇಲ್ಲಿ ಮುಖ್ಯವಲ್ಲ. ಬ್ಯಾಟ್ಸ್’ಮನ್ ಬೌಂಡರಿ ಗಳಿಸಲು ಯತ್ನಿಸಬೇಕೇ ಹೊರತು ಚುಕ್ಕೆ ಎಸೆತಗಳನ್ನು ಎದುರಿಸುವುದಲ್ಲ ಎಂದು ಹೇಳಿದ್ದಾರೆ.
ಪಂದ್ಯ ಮುಕ್ತಾಯದ ಬಳಿಕ ಮತ್ತೊಮ್ಮೆ ಕಿಡಿಕಾರಿದ ದಾದಾ, ಪಂದ್ಯದ ಮೊದಲ 10 ಓವರ್ ಹಾಗೂ ಕೊನೆಯ ಆರು ಓವರ್’ನಲ್ಲಿ ಇನ್ನಷ್ಟು ರನ್ ನಿರೀಕ್ಷಿಸಿದ್ವಿ. ಇದಕ್ಕಿಂತ ಭಾರತ 300 ರನ್’ಗಳೊಳಗಾಗಿ ಆಲೌಟ್ ಆಗಿದ್ರೆ ಖುಷಿ ಪಡ್ತಿದ್ದೆ. ಮೊದಲ ಹಾಗೂ ಕೊನೆಯ 10 ಓವರ್’ಗಳಲ್ಲಿ ಭಾರತ ಸುಧಾರಿಸಿಕೊಳ್ಳದಿದ್ದರೆ ಇಂತಹದ್ದೇ ಫಲಿತಾಂಶ ಮರುಕಳಿಸಿದರೂ ಅಚ್ಚರಿಯಿಲ್ಲ ಎಂದು ಹೇಳಿದ್ದಾರೆ.
ಧೋನಿ ಮಂದಗತಿಯ ಬ್ಯಾಟಿಂಗ್ ಪ್ರದರ್ಶನಕ್ಕೆ ಸಾಮಾಜಿಕ ಜಾಲತಾಣಗಳಲ್ಲೂ ಆಕ್ರೋಶ ವ್ಯಕ್ತವಾಗಿದೆ.