ಬಾಂಗ್ಲಾ ಪಂದ್ಯಕ್ಕೆ ಕೇದಾರ್ ಔಟ್- ಮತ್ತೋರ್ವ ಆಲ್ರೌಂಡರ್‌ಗೆ ಚಾನ್ಸ್?

Published : Jul 01, 2019, 05:33 PM IST
ಬಾಂಗ್ಲಾ ಪಂದ್ಯಕ್ಕೆ ಕೇದಾರ್ ಔಟ್-  ಮತ್ತೋರ್ವ ಆಲ್ರೌಂಡರ್‌ಗೆ ಚಾನ್ಸ್?

ಸಾರಾಂಶ

ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಕೆಲ ಬದಲಾವಣೆಗಳಾಗೋ ಸಾಧ್ಯತೆ ಇದೆ. ಕಳಪೆ ಫಾರ್ಮ್‌ನಲ್ಲಿರುವ ಕೇದಾರ್ ಜಾಧವ್‌ಗೆ ವಿಶ್ರಾಂತಿ ನೀಡಿ ಮತ್ತೊರ್ವ ಕ್ರಿಕೆಟಿಗನಿಗೆ ಅವಕಾಶ ನೀಡೋ ಸಾಧ್ಯತೆ ಇದೆ.

ವೆಸ್ಟ್ ಇಂಡೀಸ್ VS ಶ್ರೀಲಂಕಾ ಪಂದ್ಯದ ಸ್ಕೋರ್ ಎಷ್ಟು?

ಬರ್ಮಿಂಗ್‌ಹ್ಯಾಮ್(ಜೂ.01): ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾಗೆ ಇಂಜುರಿ ಸಮಸ್ಸೆ ಹೆಚ್ಚಾಗಿ ಕಾಡುತ್ತಿದೆ. ಶಿಖರ್ ಧವನ್ ಬಳಿಕ ಇದೀಗ ವಿಜಯ್ ಶಂಕರ್ ಇಂಜುರಿ ಕಾರಣದಿಂದ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದರ ಜೊತೆಗೆ ಕೆಲ ಆಟಗಾರರ ಫಾರ್ಮ್ ಕೂಡ ಕೈ ಕೊಟ್ಟಿದೆ. ಹೀಗಾಗಿ ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಕೆಲ ಬದಲಾವಣೆಗಳಾಗೋ ಸಾಧ್ಯತೆಗಳಿದೆ.

ಇದನ್ನೂ ಓದಿ: ಧೋನಿ-ಜಾಧವ್ ವಿರುದ್ಧ ಕಿಡಿಕಾರಿದ ದಾದಾ..!

ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಕೇದಾರ್ ಜಾಧವ್ ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೇದಾರ್ ಜಾಧವ್ ಬದಲು, ಆಲ್ರೌಂಡರ್ ರವೀಂದ್ರ ಜಡೇಜಾಗೆ ಅವಕಾಶ ನೀಡೋ ಸಾಧ್ಯತೆ ಇದೆ. ಜಡೇಜಾ ಬೌಲಿಂಗ್ ಮಾತ್ರವಲ್ಲ, ಬ್ಯಾಟಿಂಗ್ ಹಾಗೂ ಫೀಲ್ಡಿಂಗ್‌ನಲ್ಲೂ ತಂಡಕ್ಕೆ  ನೆರವಾಗೋದರಲ್ಲಿ ಯಾವುದೇ ಅನುಮಾನವಿಲ್ಲ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಬದಲಿ ಫೀಲ್ಡರ್ ಆಗಿ ಕಣಕ್ಕಿಳಿದು ಅದ್ಭುತ ಕ್ಯಾಚ್ ಹಿಡಿದಿದ್ದರು.

ಇದನ್ನೂ ಓದಿ: ಭಾರತೀಯ ಕ್ರಿಕೆಟಿಗರ ಕ್ರೀಡಾ ಸ್ಫೂರ್ತಿ ಪ್ರಶ್ನಿಸಿದ ವಕಾರ್ ಯೂನಿಸ್‌ಗೆ ಮಂಗಳಾರತಿ!

ಇಂಗ್ಲೆಂಡ್ ವಿರುದ್ದದ ಪಂದ್ಯದಲ್ಲಿ ಎಂ.ಎಸ್.ಧೋನಿ ಹಾಗೂ ಕೇದಾರ್ ಜಾಧವ್ ಬಳಿ ತಂಡವನ್ನು ಗೆಲುವಿನ ದಡ ಸೇರಿಸೋ ಅವಕಾಶವಿತ್ತು. ಆದರೆ  ಈ ಜೋಡಿ ಅಂತಿಮ 31 ಎಸೆತದಲ್ಲಿ 7  ಡಾಟ್ ಬಾಲ್ ಹಾಗೂ 21 ಸಿಂಗಲ್ ರನ್ ಸಿಡಿಸಿತೇ ಹೊರತು, ಗೆಲುವಿನತ್ತ ಮನಸ್ಸು ಮಾಡಲಿಲ್ಲ. ಹೀಗಾಗಿ ಕೇದಾರ್ ಜಾಧವ್ ಬದಲಾವಣೆ ಸಾಧ್ಯತೆ ಹೆಚ್ಚು. ಜುಲೈ 2 ರಂದು ಭಾರತ ಹಾಗೂ ಬಾಂಗ್ಲಾದೇಶ ಹೋರಾಟ ನಡೆಸಲಿವೆ.

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!