ನಿವೃತ್ತಿಯ ಬಗ್ಗೆ ಕೊನೆಗೂ ತುಟಿಬಿಚ್ಚಿದ ಧೋನಿ..!

By Web Desk  |  First Published Jul 7, 2019, 12:33 PM IST

ಮಹೇಂದ್ರ ಸಿಂಗ್ ಧೋನಿ ತಮ್ಮ ನಿವೃತ್ತಿಯ ಬಗ್ಗೆ ಕೊನೆಗೂ ತುಟಿಬಿಚ್ಚಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಮಂದಗತಿಯ ಬ್ಯಾಟಿಂಗ್ ನಡೆಸುವ ಮೂಲಕ ಸಾಕಷ್ಟು ಟೀಕೆಗೆ ಗುರಿಯಾಗಿರುವ ಧೋನಿ ಶೀಘ್ರದಲ್ಲೇ ನಿವೃತ್ತಿಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಈ ಕುರಿತಾದ ವಿವರ ಇಲ್ಲಿದೆ ನೋಡಿ...


ಲೀಡ್ಸ್[ಜು.07]: ನಿವೃತ್ತಿ ಕುರಿತು ಭಾರತದ ಮಾಜಿ ನಾಯಕ ಎಂ. ಎಸ್.ಧೋನಿ ಕೊನೆಗೂ ಮೌನ ಮುರಿದಿದ್ದು, ನಾನು ಯಾವಾಗ ನಿವೃತ್ತಿ ಘೋಷಿಸುತ್ತೇನೋ ನನಗೆ ಗೊತ್ತಿಲ್ಲ ಎಂದಿದ್ದಾರೆ. 

ವಿಶ್ವಕಪ್ 2019: ಹೊಸ ದಾಖಲೆ ಬರೆದ ಅಫ್ರಿದಿ..!

Tap to resize

Latest Videos

undefined

ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ ಬಳಿಕ ಧೋನಿ, ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ ಎಂದು ಸಾಕಷ್ಟು ಚರ್ಚೆಗಳು ಆರಂಭವಾಗಿದ್ದವು, ಊಹಾಪೋಹಗಳು ಹರಿದಾಡಿದ್ದವು. ಇದೀಗ ಈ ಕುರಿತು ಸ್ವತಃ ಧೋನಿ ಪ್ರತಿಕ್ರಿಯೆ ನೀಡಿದ್ದು, ‘ನಾನು ಯಾವಾಗ ನಿವೃತ್ತಿ ಘೋಷಿಸು ತ್ತೇನೋ ನನಗೆ ಗೊತ್ತಿಲ್ಲ’ ಎಂದು ಹಿಂದಿ ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಧೋನಿಗೆ ICC ನುಡಿನಮನ : ’MSD ಬರೀ ಹೆಸರಲ್ಲ’..!

ಮಹೇಂದ್ರ ಸಿಂಗ್ ಧೋನಿ ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಕೇವಲ 223 ರನ್ ಬಾರಿಸಿದ್ದು, ಮಂದಗತಿಯ ಬ್ಯಾಟಿಂಗ್ ಗಾಗಿ ಸಾಕಷ್ಟು ಟೀಕೆ ಎದುರಿಸುತ್ತಿದ್ದಾರೆ. ಭಾರತ ಇದೀಗ ಶ್ರೀಲಂಕಾ ಮಣಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.  
 

click me!